ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು!

SHIVAMOGGA NEWS / ONLINE / Malenadu today/ Nov 24, 2023 NEWS KANNADA

Shivamogga   |  Malnenadutoday.com | : ಶಿವಮೊಗ್ಗದಲ್ಲಿ ಮಣ್ಣು ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ. ನಗರದ ಸವಳಂಗ ರಸ್ತೆ ಯಲ್ಲಿ ನಡೆಯುತ್ತಿದ್ದ ಮೇಲ್ಸೇತುವೆಗೆ ಸಂಬಂಧಿಸಿದ ಕಾಮಗಾರಿ ವೇಳೆ ಗುಂಡಿ ಅಗೆಯಲಾಗಿತ್ತು. 

ಗುಂಡಿಗಿಳಿದು ಕೆಲಸ ಮಾಡುತ್ತಿದ್ದ ವೇಳೆ ಗುಂಡಿಯಿಂದ ಅಗೆದಿದ್ದ ಮಣ್ಣು, ಕಾರ್ಮಿಕನ ಮೇಲೆ ಬಿದ್ದಿದೆ. ತಕ್ಷಣವೇ ಅಲ್ಲಿದ್ದವರೆಲ್ಲರೂ ಸೇರಿಕೊಂಡು ಕಾರ್ಮಿಕನನ್ನು ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಜೆಸಿಬಿಯಿಂದ ಕೆಳಕ್ಕೆ ಬಿದ್ದ ಮಣ್ಣು ತೆಗೆಯಲಾಗಿದೆ. ಆಗ ಕಾರ್ಮಿಕನ ತಲೆಗೂ ಪೆಟ್ಟಾಗಿದೆ. 

READ :ಕಬಾಬ್​ ಕರಿದ ಎಣ್ಣೆ ಎರಚಿದ! ಜೀಪ್​ನಡಿ ಬಿದ್ದು ಹೊರಳಾಡಿದ! ಬಿ.ಹೆಚ್​.ರೋಡ್​ನಲ್ಲಿ ಜೋರಿತ್ತು ಕುಡುಕನ ಹೈಡ್ರಾಮಾ!

ಇನ್ನೂ ಕಾರ್ಮಿಕನನ್ನ ಮಣ್ಣಿನೊಳಗಿನಿಂದ ಹೊರಕ್ಕೆ ತಂದು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ . ಕಾರ್ಮಿಕನ ತೆಲೆಗೆ ಪೆಟ್ಟು ಬಿದ್ದು ಮೆದುಳು ಸಹ ಆಚೆ ಬಂದಿತ್ತು ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ಸಾರ್ವಜನಿಕರಿಂದ ಆಕ್ರೋಶವೂ ವ್ಯಕ್ತವಾಗಿದೆ. 

Leave a Comment