SHIVAMOGGA NEWS / ONLINE / Malenadu today/ Nov 24, 2023 NEWS KANNADA
Shivamogga | Malnenadutoday.com | : ಶಿವಮೊಗ್ಗದ ರಾಯಲ್ ಆರ್ಕೆಡ್ ಬಳಿ ನಿನ್ನೆ ಒಂದು ಘಟನೆ ನಡೆದಿದೆ. ಕುಡುಕನೊಬ್ಬ ವಿಚಿತ್ರವಾಗಿ ವರ್ತಿಸಿದ್ದಲ್ಲದೇ ಕಬಾಬ್ ಗಾಡಿಯಲ್ಲಿ ಒಲೆಮೇಲಿಟ್ಟಿದ್ದ ಬಿಸಿ ಎಣ್ಣೆಯನ್ನ ಜಾಲರಿಯಿಂದ ಎಸೆಯಲು ಆರಂಭಿಸಿದ್ದಾನೆ. ಈ ವೇಳೆ ಬಿಸಿ ಎಣ್ಣೆ ವಿದ್ಯಾರ್ಥಿಯೊಬ್ಬನಿಗೆ ಬಿದ್ದು ಆತನಿಗೆ ಗಾಯವಾಗಿದೆ
ಕಬಾಬ್ ಗಾಡಿಯವನ ಜೊತೆಗೆ ಕಿರಿಕ್ ತೆಗೆದಿದ್ದ ಟೈಟ್ ಪಾರ್ಟಿ ಬಳಿಕ ಸಿಕ್ಕಸಿಕ್ಕವರ ಮೇಲೆ ಜಾಲರಿಯಿಂದ ಎಣ್ಣೆ ಬಾಣ್ಲಿಯಿಂದ ಎಣ್ಣೆ ಎರೆಚಲು ಆರಂಭಿಸಿದ್ದಾನೆ. ಈ ವೇಳೆ ವಿದ್ಯಾರ್ಥಿಯೊಬ್ಬನಿಗೆ ಬಿಸಿ ಎಣ್ಣೆ ಬಿದ್ದಿದೆ.
READ : ಕೆಲಸ ಕೊಟ್ಟ ಮಂಡಿ ಮಾಲೀಕನಿಗೆ ₹7 ಕೋಟಿ ವಂಚನೆ! ವಿಡಿಯೋ ಲೀಕ್ ಮಾಡ್ತೀನಿ ಎಂದ ಲೇಡಿಸ್!
ಇನ್ನೂ ಕಿರಿಕ್ ವಿಚಾರ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಈ ವೇಳೆ ಇನ್ನಷ್ಟು ಹೈಡ್ರಾಮಾ ಮಾಡಿದ ಕುಡುಕ ಪೊಲೀಸರ ಜೀಪ್ನಡಿ ಹೋಗಿ ಮಲಗಿದ್ದಾನೆ. ಹಾಗೂ ಹೀಗೂ ಮಾಡಿ ಪೊಲೀಸರು ಆತನನ್ನ ಹಾಗೂ ಗಾಯಗೊಂಡ ವಿದ್ಯಾರ್ಥಿಯನ್ನ ಮೆಗ್ಗಾನ್ ಆಸ್ಪತ್ರೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಪ್ರಕರಣ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿದೆ
