ಬ್ಯಾರೀಸ್ ಮಾಲ್ ಲೀಜ್​ ವಿಚಾರ ಪಾಲಿಕೆ ಅಜೆಂಡಾಕ್ಕೆ ಸೇರಲು ಚೆನ್ನಬಸರಪ್ಪರವರೇ ಕಾರಣ/ ಜೋರಾಯ್ತು ಕಿಕ್​ ಬ್ಯಾಕ್ ಆರೋಪ

ಇದರ ಹಿಂದೆ ಕಿಕ್ ಬ್ಯಾಕ್ ಕೂಡ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ. ಹಾಗಾಗಿ ಇದು ಕೋಟ್ಯಂತರ ರೂ.ಗಳ ಹಗರಣ ಕೂಡ ಆಗಿದೆ ಎಂದು ಕಾಂಗ್ರೆಸ್​ ಮುಖಂಡರು ಆರೋಪಿಸಿದ್ದಾರೆ.

ಬ್ಯಾರೀಸ್ ಮಾಲ್ ಲೀಜ್​ ವಿಚಾರ ಪಾಲಿಕೆ ಅಜೆಂಡಾಕ್ಕೆ ಸೇರಲು ಚೆನ್ನಬಸರಪ್ಪರವರೇ ಕಾರಣ/ ಜೋರಾಯ್ತು ಕಿಕ್​ ಬ್ಯಾಕ್ ಆರೋಪ

ಶಿವಮೊಗ್ಗ: ಶಿವಪ್ಪನಾಯಕ ಮಾರುಕಟ್ಟೆಯ ಬ್ಯಾರೀಸ್ ಮಾಲ್ (Beary's City Centre shopping Mal) ಗೆ 99 ವರ್ಷಗಳ ಲೀಜ್​ಗೆ ಕುರಿತಾದ ಪ್ರಸ್ತಾವನೆಯನ್ನು ಪಾಲಿಕೆಯ (Shivamogga City Corporation) ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕೆ ಸೇರಿಸಿರುವುದು ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಎಂಬುದು ಸಾಬೀತಾಗಿರುವುದ ರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಆಗ್ರಹಿಸಿದ್ದಾರೆ. 

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, , ಬ್ಯಾರೀಸ್ ಮಾಲ್ ಗೆ ಸಂಬಂಧಿಸಿದಂತೆ ಹಲವು ಗೊಂದಲ ಗಳು ಮೂಡಿದ್ದವು. 99 ವರ್ಷ ಲೀಸ್‌ಗೆ ಮುಂದುವರೆಸುವುದರ ವಿಚಾರ,  ಪಾಲಿಕೆಯ  ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕೂ ತರಲಾಗಿತ್ತು. ಇದು ಹೇಗೆ ಸಾಧ್ಯವಾಯ್ತು, ಆಯುಕ್ತರು ಹಾಗೂ ಮೇಯರ್​ ಗಮನಕ್ಕೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ್ರು.  ಅಲ್ಲದೆ ಈ ಸಂಬಂಧ ರಚಿಸಲಾದ ಸಮಿತಿಯು ವರದಿ ಬಿಡುಗಡೆ ಮಾಡಿತ್ತು,  ತನಿಖೆಯ ವೇಳೆ  ಚನ್ನಬಸಪ್ಪರವರು ಅಜೆಂಡಾ ದಲ್ಲಿ ವಿಚಾರ ಸೇರಿಸುವಂತೆ ನನಗೆ ಫೋನ್ ಕರೆ ಮಾಡಿದ್ದರು. ನಾನು ಮೇಯ‌ರ್​ ಮತ್ತು ಆಯುಕ್ತರಿಗೆ ತಿಳಿಸಬೇಕು ಎಂದಿದ್ದೆ. ನಾನು ತಿಳಿಸುತ್ತೇನೆ ಎಂದು ಕಚೇರಿ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ನೀವು ಸೇರಿಸಿ ಎಂದು ಒತ್ತಡ ತಂದಿದ್ದರಿಂದ ನಾನು ಸೇರಿಸಿದೆ ಎಂದು ಕಚೇರಿ ಸಿಬ್ಬಂದಿ ಒಪ್ಪಿಕೊಂಡಿದ್ಧಾರೆ.

ಇದನ್ನು ಸಹ ಓದಿ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯ ಸಮೀಪ ಅಪಘಾತ/ ಓರ್ವನ ಸಾವು

ಆದರೆ ಈಗ ಕಾಂಗ್ರೆಸ್​ ಮೇಲೆ ತಪ್ಪು ಹೊರಿಸುತ್ತಿದ್ದಾರೆ. 

2015 ಮಾರ್ಚ್ 28 ರಂದು ನಡೆದಿದ್ದ ಸಭೆಯಲ್ಲಿ ಬ್ಯಾರೀಸ್ ಮಾಲ್​ ಲೀಸ್ ಆರವತ್ತು ವರ್ಷ ವಿಸ್ತರಣೆಗೆ ಕಾಂಗ್ರೆಸ್​ ವಿಚಾರ ಮುಂದಿಟ್ಟಿತ್ತು ಎಂದು ಆರೋಪಿಸಿದ್ಧಾರೆ. ಆದರೆ ಅಂದಿನ ಮೇಯರ್​ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಎಲ್ಲಾ ಸದಸ್ಯರು ತೀರ್ಮಾನ ಕೈಗೊಂಡು 60 ವರ್ಷ ಕೊಡಲು ಸಾಧ್ಯವಿಲ್ಲ. 32 ವರ್ಷ ಎಂದು ತೀರ್ಮಾನ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.  ಹಿಂದೇ  ತಿರಸ್ಕರಿಸಲ್ಪಟ್ಟ ಈ ವಿಷಯವನ್ನು ಅಜೆಂಡಾಕ್ಕೆ ತರಲು ಚೆನ್ನಬಸಪ್ಪರವರೇ ಕಾರಣ. ಇದರ ಹಿಂದೆ ಕಿಕ್ ಬ್ಯಾಕ್ ಕೂಡ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ. ಹಾಗಾಗಿ ಇದು ಕೋಟ್ಯಂತರ ರೂ.ಗಳ ಹಗರಣ ಕೂಡ ಆಗಿದೆ ಎಂದು ಕಾಂಗ್ರೆಸ್​ ಮುಖಂಡರು ಆರೋಪಿಸಿದ್ದಾರೆ.

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link