ಶಿವಮೊಗ್ಗದಲ್ಲಿ 200 ಕ್ಕೂ ಹೆಚ್ಚು ಮಕ್ಕಳ ಅಸ್ವಸ್ಥತೆಗೆ ಅಸಲಿ ಕಾರಣ ಏನು? ಸಂಸದ ರಾಘವೇಂದ್ರರವರು ಹೇಳಿದ್ದೇನು?

What is the real reason for the illness of more than 200 children in Shimoga? What did MP Raghavendra say?

ಶಿವಮೊಗ್ಗದಲ್ಲಿ 200 ಕ್ಕೂ ಹೆಚ್ಚು ಮಕ್ಕಳ ಅಸ್ವಸ್ಥತೆಗೆ ಅಸಲಿ ಕಾರಣ ಏನು? ಸಂಸದ ರಾಘವೇಂದ್ರರವರು ಹೇಳಿದ್ದೇನು?

ಶಿವಮೊಗ್ಗದ ಪ್ರಮುಖ ವಸತಿ ಶಾಲೆ ಹಾಗೂ ನಿರ್ದಿಷ್ಟ ಶಾಲೆಯ ಮಕ್ಕಳು ಅಸ್ವಸ್ಥರಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದಾಗ್ಯು ಇನ್ನಷ್ಟು ಮಕ್ಕಳಲ್ಲಿ ಅಸ್ವಸ್ಥತೆ ಮುಂದುವರಿದಿದೆ. ಆದರೆ ಮಕ್ಕಳ ಅನಾರೋಗ್ಯಕ್ಕೆ ಕಾರಣವೇನು ಎಂಬುದರ ವಿಚಾರವಾಗಿ ಆಡಳಿತ ವಲಯ ಮಾತನಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ:  ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್

ಆಸ್ಪತ್ರೆ ಸೇರಿದ್ದ ಮಕ್ಕಳ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿಲ್ಲವೇ ಎಂಬ ಚರ್ಚೆ ಜನರ ನಡುವೆ ನಡೆಯುತ್ತಿದೆ.  ಹನಸವಾಡಿಯ ವಸತಿ ಶಾಲೆ ಹಾಸ್ಟೆಲ್ ಮಕ್ಕಳು ಅಸ್ವಸ್ಥ ಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ವಿಶ್ರಾಂತಿಯಲ್ಲಿದ್ದ ವೈದ್ಯರುಗಳು ಸಹ ಬಂದು ಟ್ರೀಟ್ಮೆಂಟ್ ಆರಂಭಿಸಿದರು. ಅಧಿಕಾರಿಗಳು ದೌಡಾಯಿಸಿ ಚಿಕಿತ್ಸೆಗೆ ಬೇಕಿರುವ ವ್ಯವಸ್ಥೆ ಕಲ್ಪಿಸಿದರು. ಹಾಗೆಯೇ ಶಿಕ್ಷಕರು ತಂದೆ ತಾಯಿಯ ಹಾಗೆ ಮಕ್ಕಳ ಬಳಿ ಇದ್ದು ನೋಡಿಕೊಂಡರು. 

shivamogga : ಶಿವಮೊಗ್ಗದಲ್ಲಿ ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಸಾವು/ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಆತ್ಮಹತ್ಯೆ ಶಂಕೆ

ಆದರೆ ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವ ವಿಚಾರದಲ್ಲಿ ಆಡಳಿತ ವಲಯ ಏಕೆ ಮೌನ ವಹಿಸ್ತಿದೆ ಎಂಬುದು ಜನರ ಪ್ರಶ್ನೆಯಾಗಿದೆ. ಯೋಗಥಾನ್​ನಲ್ಲಿ ಸೇವಿಸಿದ್ದ ಆಹಾರದಿಂದಲೇ ಹೀಗಾಗಿದ್ಯಾ ಎಂಬ ಪ್ರಶ್ನೆ ಆರಂಭದಲ್ಲಿ ಕೇಳಿಬಂದಿತ್ತು. ಅಲ್ಲದೆ ಪೋಷಕರು ಇದೇ ವಿಚಾರವನ್ನು ಗಂಭೀರವಾಗಿ ದೂರಿದ್ದರು. ವಸತಿ ಶಾಲೆಯಲ್ಲಿ ಊಟ ಉಪಚಾರದ ಬಗ್ಗೆ ದೂರು ಕೇಳಿ ಬರುವಾಗಲೇ ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಮೆಗ್ಗಾನ್​ಗೆ ದಾಖಲಾದರು. ಇಲ್ಲಿ ಯೋಗಥಾನ್​ನಲ್ಲಿ ಪಾಲ್ಗೊಂಡಿದ್ದ ಮಕ್ಕಳಲ್ಲಷ್ಟೆ ಅಸ್ವಸ್ಥತೆ ಕಂಡುಬಂದಿದೆ ಎಂಬದು ಸಮೀಕರಣಗೊಂಡಿದ್ದ ವಾದವಾಗಿತ್ತು. 

ಆದರೆ ಯೋಗಥಾನ್ ಕಾರ್ಯಕ್ರಮದ ಊಟೋಪಚಾರದ ಬಗ್ಗೆಯಾಗಲಿ ಅಥವಾ ಘಟನೆಗೆ ಅಸಲಿ ಕಾರಣವೇನು ಎಂಬುದಾಗಲಿ ಆರೋಗ್ಯ ಇಲಾಖೆ ಇನ್ನು ಸಹ ತಲಾಶ್ ಮಾಡುತ್ತಿಲ್ಲ ಎಂಬ ಆರೋಪವಿದೆ. ಅಲ್ಲದೆ ಅಲ್ಲಿ ಅಸಮರ್ಪಕ ಗುಣಮಟ್ಟದ ಆಹಾರ ಪೂರೈಕೆಯಾಗಿತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. 

ಸ್ಪಷ್ಟನೆ ಕೊಟ್ಟ ಸಂಸದ ರಾಘವೇಂದ್ರ (by raghavendra )

ಇನ್ನೂ ಇದೇ ವಿಚಾರದ ಬಗ್ಗೆ ನಿನ್ನೆ  ಮಾತನಾಡಿದ್ದ ಸಂಸದ ಬಿವೈ ರಾಘವೇಂದ್ರರವರು ಮಾತ್ರ ಯೋಗಥಾನ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳ ಅನಾರೋಗ್ಯದ ಬಗ್ಗೆ ಉತ್ತರಿಸಿದ್ದರು. ಕಾರ್ಯಕ್ರಮದಲ್ಲಿ ಮಜ್ಜಿಗೆಯನ್ನು ನೀಡಲಾಗಿತ್ತು. ಆ ಮಜ್ಜಿಗೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಮಕ್ಕಳು, ಬಹಳ ಹೊತ್ತಿನ ನಂತರ, ಮಾರನೇ ದಿನ ಕುಡಿದಿರುವ ಸಾಧ್ಯತೆ ಇದ್ದು, ಈ ಬಗ್ಗೆ ವರದಿಗಳು ಬಂದಿದೆ. ಈ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ದೇವರ ದಯೆಯಿಂದ ಯಾವ ಮಕ್ಕಳಿಗೂ ಏನಾಗಿಲ್ಲ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಸಂಸದ ಬಿವೈ ರಾಘವೇಂದ್ರರವರು ಕೊಟ್ಟ ಉತ್ತರ ಇಲ್ಲಿದೆ ನೋಡಿ : BY ರಾಘವೇಂದ್ರ, ಸಂಸದರು ಶಿವಮೊಗ್ಗ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com