ಸಿಗಂದೂರು | ಇವತ್ತಿನಿಂದ ಮತ್ತೊಂದು ಲಾಂಚ್‌ನಲ್ಲಿ ವಾಹನ ಸಂಚಾರ ಸ್ಥಗಿತ | ಪ್ರವಾಸಿಗರು, ಸ್ಥಳೀಯರಿಗೆ ಸಂಕಷ್ಟ

Vehicle transportation had already been halted at the Hasirumakki-Muppane ferry points, and now, starting from June 5th, it will also be suspended at the Kalasavalli-Ambaragodlu ferry crossing.

ಸಿಗಂದೂರು | ಇವತ್ತಿನಿಂದ ಮತ್ತೊಂದು ಲಾಂಚ್‌ನಲ್ಲಿ ವಾಹನ ಸಂಚಾರ ಸ್ಥಗಿತ | ಪ್ರವಾಸಿಗರು, ಸ್ಥಳೀಯರಿಗೆ ಸಂಕಷ್ಟ
Kalasavalli-Ambaragodlu , Hasirumakki-Muppane ferry points,

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆ 

ಸಾಗರದ ದ್ವೀಪದೂರುಗಳನ್ನ ಸಂಪರ್ಕಿಸುವ ಮತ್ತೊಂದು ಲಾಂಚ್‌ ವಾಹನಗಳ ಸಾಗಾಟವನ್ನು ನಿಲ್ಲಿಸಿದೆ. ಇತ್ತೀಚೆಗೆ  ಹಸಿರುಮಕ್ಕಿ-ಮುಪ್ಪಾನೆ ಲಾಂಚ್ ಕಡವುಗಳಲ್ಲಿ ವಾಹನ ಸಾಗಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕಳಸವಳ್ಳಿಲಾಂಚ್‌ನಲ್ಲಿ ಇಂದಿನಿಂದ ವಾಹನ ಸಾಗಾಟ ಸ್ಥಗಿತಗೊಳ್ಳಲಿದೆ. ಶರಾವತಿ ಹಿನ್ನೀರಿನ ಪ್ರಮಾಣ ಗಣನೀಯವಾಗಿ ಇಳಿದಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ. 

ಜೂ.5ರಿಂದ ಅಂದರೆ ಇವತ್ತಿನಿಂದ ಕಳಸವಳ್ಳಿ-ಅಂಬಾರಗೊಡ್ಲು ಕಡವಿನಲ್ಲಿ (ಲಾಂಚ್) ‌ ವಾಹನ ಸಾಗಾಟವನ್ನು ಸ್ಥಗಿತಗೊಳಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಳೆಯಾಗುವ ಸೂಚನೆ ಸಿಕ್ಕಿದೆ ಆದಾಗ್ಯು ಶರಾವತಿ ಹಿನ್ನೀರು ತುಂಬಿಕೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈ ಮಧ್ಯೆ ಹಿನ್ನೀರು ತಗ್ಗಿರುವ ಹಿನ್ನೆಲೆಯಲ್ಲಿ ಲಾಂಚ್‌ ಓಡಾಟ ಕಷ್ಟಸಾಧ್ಯ. ಹಾಗಾಗಿ  ಹಸಿರುಮಕ್ಕಿ-ಮುಪ್ಪಾನೆ ಲಾಂಚ್ ಕಡವುಗಳಲ್ಲಿ ವಾಹನ ಸಾಗಾಟವನ್ನು ಸ್ಥಗಿತಗೊಳಸಲಾಗಿತ್ತು. ಇದೀಗ ಈಗ ಕಳಸವಳ್ಳಿ-ಅಂಬಾರಗೊಡ್ಲು ಲಾಂಚ್‌ ನಲ್ಲಿಯು ವಾಹನ ಸಾಗಾಟವನ್ನು ಸ್ಥಗಿತಗೊಳಿಸಲಾಗುತ್ತಿದೆ.  

The transportation of vehicles by launch across the Sharavathi backwaters has been further disrupted due to falling water levels. Vehicle transportation had already been halted at the Hasirumakki-Muppane ferry points, and now, starting from June 5th, it will also be suspended at the Kalasavalli-Ambaragodlu ferry crossing. Officials anticipate that it may take another month for the backwaters to replenish, even with the expected rainfall in Shivamogga. Consequently, operating launches has become challenging, leading to the suspension of vehicle transportation at these ferry points.