ಶಿವಮೊಗ್ಗ | ಇವತ್ತು ಮಳೆಯಾಗುವ ಸೂಚನೆ | ಹೇಗಿರಲಿದೆ ವಾತಾವರಣ

The weather department has predicted rain in Shivamogga for the next three days, with heavy rainfall expected on Thursday. The forecast also extends to Dakshina Kannada, Kodagu, Mysuru, and Udupi districts.

ಶಿವಮೊಗ್ಗ | ಇವತ್ತು ಮಳೆಯಾಗುವ ಸೂಚನೆ | ಹೇಗಿರಲಿದೆ ವಾತಾವರಣ
shivamogga weather

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಇವತ್ತು ಮಳೆಯಾಗುವ ಸೂಚನೆ ಇದೆ, ಹವಾಮಾನ ಇಲಾಖೆಯ ಈ ಕ್ಷಣದ ವರದಿಯ ಪ್ರಕಾರ, ಶಿವಮೊಗ್ಗದ ಇನ್ನೂ ಮೂರು ದಿನಗಳ ಕಾಲ ಶಿವಮೊಗ್ಗದಲ್ಲಿ ಮಳೆಯಾಗಲಿದ್ದು ಗುರುವಾರ ಭಾರೀ ವರ್ಷಧಾರೆಯಾಗುವ ಸಂಭವವಿದೆ. 

ಶಿವಮೊಗ್ಗವಷ್ಟೆ ಅಲ್ಲದೆ ದಕ್ಷಿಣ ಕನ್ನಡ ಕೊಡಗು, ಮೈಸೂರು, ಉಡುಪಿ ಜಿಲ್ಲೆಗಳಲ್ಲಿ ಇವತ್ತು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಇನ್ನೂ ಹವಾಮಾನಕ್ಕೆ ಸಂಬಂಧಿಸಿದ ಸರ್ಕಾರಿ ಆಪ್‌ ಮಾಹಿತಿ ಪ್ರಕಾರ, ಇವತ್ತು ಮಧ್ಯಾಹ್ನದ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ವಾತಾವರಣ ಗರಿಷ್ಟ 30 ಡಿಗ್ರಿ ಸೆಲ್ಸಿಯಸ್‌ನವರೆಗೂ ತಲುಪಬಹುದು. ಜೊತೆಯಲ್ಲಿ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ. ಸಂಜೆ ಐದು ಗಂಟೆಯ ವರೆಗೂ ಮಳೆಯ ಸೂಚನೆ ನೀಡಲಾಗಿದ್ದು, ಆ ಬಳಿಕ ವಾತಾವರಣ ತಿಳಿಯಾಗಿರಲಿದೆ ಎಂದು ಹೇಳಲಾಗಿದೆ. 