ಜಲಾಶಯಗಳಲ್ಲಿ ತಗ್ಗಿದ ಒಳಹರಿವು! ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಆದ ಮಳೆಯೆಷ್ಟು? ವಿವರ ಇಲ್ಲಿದೆ

Here is the rainfall in Shivamogga district in the last 24 hours and the level of reservoirsಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಆದ ಮಳೆಯ ವಿವರ ಮತ್ತು ಜಲಾಶಯಗಳ ಮಟ್ಟದ ವಿವರ ಇಲ್ಲಿದೆ

ಜಲಾಶಯಗಳಲ್ಲಿ ತಗ್ಗಿದ ಒಳಹರಿವು! ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಆದ ಮಳೆಯೆಷ್ಟು? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS

ಶಿವಮೊಗ್ಗ  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 62.80 ಮಿಮಿ ಮಳೆಯಾಗಿದ್ದು, ಸರಾಸರಿ 8.97 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮಿ ಇದ್ದು ಇದುವರೆಗೆ ಸರಾಸರಿ 8.97 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 5.20 ಮಿಮಿ., ಭದ್ರಾವತಿ 0.90 ಮಿಮಿ, ತೀರ್ಥಹಳ್ಳಿ 15.90 ಮಿಮಿ., ಸಾಗರ 16.20 ಮಿಮಿ., ಶಿಕಾರಿಪುರ 2.90 ಮಿಮಿ,, ಸೊರಬ 05.20 ಮಿಮಿ, ಹಾಗೂ ಹೊಸನಗರ 16.50 ಮಿಮಿ. ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‌ಗಳಲ್ಲಿ

 ಲಿಂಗನಮಕ್ಕಿ: 1819 (ಗರಿಷ್ಠ), 1787.90 (ಇಂದಿನ ಮಟ್ಟ), 13660.00 (ಒಳಹರಿವು), 3899.20 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1798.60. 

ಭದ್ರಾ: 186 (ಗರಿಷ್ಠ), 162.80 (ಇಂದಿನ ಮಟ್ಟ), 5756.00 (ಒಳಹರಿವು), 189,00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ184.23, ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 10493.00 (ಒಳಹರಿವು), 10496.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24, 

ಮಾಣಿ: 595 (ಎಂಎಸ್ಎಲ್‌ಗಳಲ್ಲಿ), 580.68 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 2673 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 584.42 (ಎಂಎಸ್ಎಲ್ ಗಳಲ್ಲಿ). 

ಪಿಕ್ ಅಪ್: 563.88 (ಎಂಎಸ್ಎಲ್ ಗಳಲ್ಲಿ), 561.52 (ಇಂದಿನ ಮಟ್ಟ ಎಂ.ಎಸ್‌. ಎಲ್‌ನಲ್ಲಿ), 1276 (ಒಳಹರಿವು), 1679.00(ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 561.60 (ಎಂಎಸ್ಎಲ್‌ಗಳಲ್ಲಿ). 

ಚಕ್ರ: 580.57 (ಎಂ.ಎಸ್.ಎಲ್ ಗಳಲ್ಲಿ), 572.90 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 308.00 (ಒಳಹರಿವು), 1702.00 (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ573.10 (ಎಂಎಸ್ಎಲ್‌ಗಳಲ್ಲಿ), 

ಸಾವೆಹಕ್ಕು 583.70 (ಗರಿಷ್ಠ ಎಂಎಸ್ಎಲ್‌ಗಳಲ್ಲಿ), 578.86 (ಇಂದಿನ ಮಟ್ಟ ಎಂ.ಎಸ್.ಎಲ್.ನಲ್ಲಿ), 772.00 (ಒಳಹರಿವು), 1557.00 (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 573.86 (ಎಂಎಸ್ಎಲ್ ಗಳಲ್ಲಿ).


ಕಾಲ ಮತ್ತೆ ಸನ್ನಿಹಿತ? ಶತಮಾನೋತ್ಸವದ ಹೊತ್ತಿನಲ್ಲೇ ವಿಐಎಸ್​ಎಲ್ ಕಾರ್ಖಾನೆಗೆ ಬಂತು ಗುಡ್ ನ್ಯೂಸ್ ನೋಟಿಸ್! ಏನದು

ಭದ್ರಾವತಿ ವಿಐಎಸ್​ಎಲ್ ಕಾರ್ಖಾನೆಯ ಶತಮಾನೋತ್ಸವ ಆಚರಣೆಯ ಹೊತ್ತಿನಲ್ಲಿ ಕಾರ್ಖಾನೆಗೆ ಸಂಬಂಧಿಸಿದಂತೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರ ವಿಐಎಸ್​ಎಲ್​ ಮತ್ತೆ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ಇದೇ ಆಗಸ್ಟ್​ 10 ರಿಂದ ಕಾರ್ಖಾನೆಯ ಬಾರ್ ಮಿಲ್​ನಲ್ಲಿ  ಕೆಲಸ ಆರಂಭವಾಗಲಿದೆ ಎಂದು ಕಾರ್ಖಾನೆಯಲ್ಲಿಯು ನೋಟಿಸ್ ಅಂಟಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸದ ಬಿ.ವೈ.ರಾಘವೇಂದ್ರರವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. 

ಪ್ರಕಟಣೆಯಲ್ಲಿ ಏನಿದೆ?

‘ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾಸೀತಾರಾಮನ್ ಜಿ ಮತ್ತು ಕೇಂದ್ರ ಉಕ್ಕು ಸಚಿವ ಸನ್ಮಾನ್ಯ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾಜಿ ರವರುಗಳ ಸ್ಪಷ್ಟ ನಿರ್ದೇಶನದೊಂದಿಗೆ, SAIL ಆಡಳಿತ ಮಂಡಳಿಯು ಭದ್ರಾವತಿ VISL ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಪುನರಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿರುವುದನ್ನು ತಿಳಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ.

ಅದರನ್ವಯ ಬಾರ್‌ಮಿಲ್ ಕಾರ್ಯಾಚರಣೆಗಳು ಆಗಸ್ಟ್ 10 ರಿಂದ ಪ್ರಾರಂಭವಾಗಲಿದ್ದು, ಮುಂದಿನದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ. ವಿಐಎಸ್ಎಲ್ ಅನ್ನು ನಂಬಿಕೊಂಡಿರುವ ಉದ್ಯೋಗಿ ಸಮುದಾಯಕ್ಕೆ ಮತ್ತು ಭದ್ರಾವತಿಯ ಜನ ಸಾಮಾನ್ಯರಿಗೆ ಈ ಒಂದು ನಿರ್ಧಾರ ಮಹತ್ವದ ಕ್ಷಣವಾಗಿದೆ ಎಂಬುದಾಗಿ ಭಾವಿಸಿದ್ದೇನೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಲಾದ ನಿರಂತರ ಪ್ರಯತ್ನದ ಫಲವಾಗಿ ಇಂತಹ ಒಂದು ಮಹತ್ತರವಾದ ನಿರ್ಣಯವನ್ನು SAIL ಕೈಗೊಳ್ಳಲು ಸಹಕಾರವಾಗಿದ್ದು, ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ. VISL ನ ಪುನರುಜೀವನಕ್ಕೆ ಕೇಂದ್ರ ಸರ್ಕಾರ ನೀಡಿದಂತಹ ಭರವಸೆಗಳನ್ನು ಈಡೇರಿಸಿದ ಅವರ ಅಚಲ ಬದ್ಧತೆಗಾಗಿ ಕೇಂದ್ರ ಸರ್ಕಾರಕ್ಕೆ ನನ್ನ ಹೃತ್ತೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಮುಂದಿನ ದಿನಗಳಲ್ಲಿ VISL ಶೀಘ್ರದಲ್ಲಿಯೇ ಉನ್ನತ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ಗತ ವೈಭವವನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವಿದೆ.ಇಂತಹ ಒಂದು ಮಹತ್ತರವಾದ ತೀರ್ಮಾನ ಬರುವಲ್ಲಿ ತಾಳ್ಮೆಯಿಂದ ಸಹಕರಿಸಿದ ವಿ.ಐ.ಎಸ್.ಎಲ್. ನ ಎಲ್ಲಾ ನೌಕರರ ಬಾಂಧವರಿಗೆ, ಕಾರ್ಮಿಕ ಸಂಘಟನೆ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ನನ್ನ ಧನ್ಯವಾದಗಳು ಎಂದು ಸಂಸದರು ತಿಳಿಸಿದ್ದಾರೆ.   ​