ಸ್ಟಾಕ್‌ ಕ್ಲಿಯರ್‌ ಮಾಡುವಾಗ ಚಿನ್ನದ ಶೋರೂಮ್‌ ಮ್ಯಾನೇಜರ್‌ಗೆ ಶಾಕ್‌ | ಅಕ್ಷಯ ತೃತಿಯ ದಿನದಂದೆ ನಡೆದಿತ್ತು ಕೃತ್ಯ

FIR has been filed against two women who stole gold lockets from a prestigious gold showroom in Shivamogga.  

ಸ್ಟಾಕ್‌ ಕ್ಲಿಯರ್‌ ಮಾಡುವಾಗ ಚಿನ್ನದ ಶೋರೂಮ್‌ ಮ್ಯಾನೇಜರ್‌ಗೆ ಶಾಕ್‌ | ಅಕ್ಷಯ ತೃತಿಯ ದಿನದಂದೆ ನಡೆದಿತ್ತು ಕೃತ್ಯ
prestigious gold showroom in Shivamogga.  

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆ 

ಶಿವಮೊಗ್ಗದ ಪ್ರತಿಷ್ಟಿತ ಚಿನ್ನದ ಶೋರೂಮ್‌ನಲ್ಲಿ ಇಬ್ಬರು ಮಹಿಳೆಯರು ತಮ್ಮ ಕೈಚಳಕ ತೋರಿ ಚಿನ್ನದ ಲಾಕೆಟ್‌ ಎದುರಿಸಿದ ಬಗ್ಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಎಫ್‌ಐಆರ್‌ನ ಪ್ರಕಾರ, ಪ್ರತಿಷ್ಟಿತ ಶೋರೂಂನಲ್ಲಿ  ಸ್ಟಾಕ್‌ ಕ್ಲಿಯರೆನ್ಸ್‌ ಮಾಡುವಾಗ ಚಿನ್ನ ಕಳ್ಳತನವಾಗಿರುವುದು ಗೊತ್ತಾಗಿದೆ. ಅಕ್ಷಯತೃತಿಯ ಹಿನ್ನೆಲೆಯಲ್ಲಿ ರಶ್‌ ಇದ್ದ ಸಂದರ್ಭದಲ್ಲಿ ಚಿನ್ನದ ಶೋರೂಮ್‌ಗೆ ಬಂದ 45 ವರ್ಷದ ಮಹಿಳೆ ಹಾಗೂ  25 ವರ್ಷದ ಯುವತಿ, ಚಿನ್ನದ ಲಾಕೆಟ್‌ ನೀಡುವಂತೆ ಕೇಳಿದ್ದಾರೆ. 

ಈ ಬಳಿಕ ಮೂರು ಚಿನ್ನದ ಲಾಕೆಟ್‌ಗಳನ್ನ ಹಿಡಿದುಕೊಂಡು ಸೆಲ್ಸ್‌ಮನ್‌ಗೆ ಇನ್ನೊಂದು ಟ್ರೇನಲ್ಲಿ ಇರುವ ಲಾಕೆಟ್‌ ತೋರಿಸುವಂತೆ ತಿಳಿಸಿದ್ದಾರೆ. ಈ ವೇಳೆ ಮೊದಲು ಹಿಡಿದುಕೊಂಡಿದ್ದ ಲಾಕೆಟ್‌ಗಳನ್ನ ಮಹಿಳೆ ತನ್ನ ಜೊತೆಗೆ ಬಂದಿದ್ದ ಯುವತಿಯ ಕೈಗೆ ಕೊಟ್ಟು, ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಚಾಲಾಕಿಗಳ ಕೃತ್ಯ ಅಲ್ಲಿದ್ದವರಿಗೆ ಗೊತ್ತೆ ಆಗಿರಲಿಲ್ಲ. ಇದೀಗ ಸ್ಟಾಕ್‌ ಪರಿಶೀಲನೆ ವೇಳೆ ವಿಷಯ ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. 

An FIR has been filed against two women who stole gold lockets from a prestigious gold showroom in Shivamogga.