ಶಿವಮೊಗ್ಗದಲ್ಲೊಂದು Voyeurism ಪ್ರಕರಣ | ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಆರೋಪ | ಬಿಜೆಪಿ ಮುಖಂಡ ಅರೆಸ್ಟ್

Voyeurism case in Shimoga | Man accused of rape on the pretext of marriage | BJP leader arrested

ಶಿವಮೊಗ್ಗದಲ್ಲೊಂದು  Voyeurism ಪ್ರಕರಣ | ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಆರೋಪ | ಬಿಜೆಪಿ ಮುಖಂಡ ಅರೆಸ್ಟ್
BJP leader arrested

SHIVAMOGGA | MALENADUTODAY NEWS | Jun 24, 2024  ಮಲೆನಾಡು ಟುಡೆ

ಶಿವಮೊಗ್ಗದ ಬಿಜೆಪಿ ಮುಖಂಡನೊಬ್ಬನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಅಡಿ ಕೇಸ್‌ ದಾಖಲಾಗಿದ್ದು ಆತನನ್ನು ಅರೆಸ್ಟ್‌ ಮಾಡಲಾಗಿದೆ. ಎಫ್‌ಐಆರ್‌ ನಲ್ಲಿರುವ ಆರೋಪವನ್ನು ಗಮನಿಸುವುದಾದರೆ, IPC 1860 (U/s-354C,376(2)(n),506,34); INFORMATION TECHNOLOGY ACT 2000 (U/s-66(E))  ಅಡಿಯಲ್ಲಿ ಈ ಕೇಸ್‌ ದಾಖಲಾಗಿದೆ. 

ಈ ಸಂಬಂಧ  ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸಾಗರ ತಾಲ್ಲೂಕು ನಿವಾಸಿ ಅರುಣ್ ಕುಗ್ವೆಯನ್ನ ಬಂಧಿಸಲಾಗಿದೆ. ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನ ಸಹೋದರನ ವಿರುದ್ಧವೂ ಸಹ ಕೇಸ್‌ ದಾಖಲಿಸಲಾಗಿದೆ. 

ಶಿವಮೊಗ್ಗ ಜಿಲ್ಲೆಯ ನಿವಾಸಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿ,  ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ ಆರೋಪದ ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾದೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಮುಖ್ಯವಾಗಿ ಇಲ್ಲಿ Voyeurism ಆಕ್ಟ್‌ (354ಸಿ ) ಅಂದರೆ ಮಹಿಳೆಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುವುದು. ಹಾಗೂ 376(2) ಲಿವ್‌ ಇನ್‌ ರಿಲೇಷನ್‌ಶಿಫ್‌ ನಲ್ಲಿದ್ದು ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದು ಮಹಿಳೆಯೊರ್ವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವನ್ನು ಇಲ್ಲಿ ದಾಖಲಿಸಲಾಗಿದೆ. 

 BJP leader in Shivamogga, Arun Kugwe, has been arrested on charges of sexual harassment. The case was filed under IPC 1860 (U/s-354C,376(2)(n),506,34); INFORMATION TECHNOLOGY ACT 2000 (U/s-66(E)). Shivamogga Women's Police Station