ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪರಂದಯ್ಯ(70), ದಾನಮ್ಮ (60)ಮತ್ತು ಮಂಜುನಾಥ್(25) ಆತ್ಮಹತ್ಯೆ ಮಾಡಿಕೊಂಡವರು. ಮಿಳಘಟ್ಟದ ನಿವಾಸಿಗಳಾದ ಇವರ ಸಾವಿಗೆ ಸಾಲಬಾಧೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಹೊಸಪೇಟೆಯಲ್ಲಿದ್ದ ಈ ಕುಟುಂಬ ನಾಲ್ಕು ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ವಾಪಸ್ ಬಂದು ನೆಲಸಿದ್ದರು.
ಸಾಗರ ಸುದ್ದಿ : ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ
ಈ ಮಧ್ಯೆ ಕಳೆದ 11 ನೇ ತಾರೀಖು ದಾನಮ್ಮ ಹಾಗೂ ಪರಂದಯ್ಯ ಮತ್ತು ಮಂಜುನಾಥ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮರುದಿನ ಬೆಳಗ್ಗೆ ವಿಷಯ ಗೊತ್ತಾಗುವ ವೇಳೆಗೆ ಪರಂದಯ್ಯ ಮತ್ತು ದಾನಮ್ಮ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಅಸ್ವಸ್ಥರಾಗಿದ್ದ ಮಂಜುನಾಥ್ ರನ್ನ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ, ಅವರು ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸಾಗರ ಟೌನ್ನಲ್ಲಿ ನಡೆದ ಹಲ್ಲೆ ಯತ್ನ ಕೇಸ್ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ
ಪರಂದಯ್ಯ ಹಾಗೂ ದಾನಮ್ಮ ದಂಪತಿ ಸಾಲಮಾಡಿಕೊಂಡಿದ್ದು, ವೈಯಕ್ತಿಕವಾಗಿಯು ಸಾಕಷ್ಟು ಕಷ್ಟನಷ್ಟ ಅನುಭವಿಸಿದ್ದಾರೆ. ಇನ್ನೂ ಮಂಜುನಾಥ್ರವರಿಗೂ ಪಾರ್ಶುವಾಯು ಹೊಡೆದಿತ್ತು ಎನ್ನಲಾಗಿದೆ. ಹೀಗಾಗಿ ಕಷ್ಟನಷ್ಟ ಮತ್ತು ಸಾಲದ ಹೊರೆಯಿಂದಾಗಿ ಕುಟುಂಬದವರೆಲ್ಲರೂ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಂಬಂದ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com