ಉತ್ತರ ಪ್ರದೇಶ ಮಾದರಿಯಲ್ಲಿ ಶಿವಮೊಗ್ಗ ಹಿಂದೂ ಮಹಾ ಪಂಚಾಯ್ತಿ ! ಏನಿದು?

Malenadu Today

KARNATAKA NEWS/ ONLINE / Malenadu today/ Oct 7, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಇದೀಗ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಒಂದು ಕಡೆ ರಾಗಿಗುಡ್ಡಕ್ಕೆ ಹಲವು ಮುಖಂಡರು ಬಂದು ಹೋಗುತ್ತಿದ್ದಾರೆ. ಅದರಲ್ಲಿಯು ಕರಾವಳಿಯ ಹಿಂದೂ ಮುಖಂಡರು ಶಿವಮೊಗ್ಗಕ್ಕೆ ಬರುತ್ತಿದ್ದು, ಪೂರಕವಾಗಿ ಅರುಣ್ ಕುಮಾರ್ ಪುತ್ತಿಲ ಶಿವಮೊಗ್ಗಕ್ಕೆ ಬಂದು ಖಾರವಾದ  ಮಾತು ಆಡಿದ್ದಾರೆ. ಅದೇ ಕಾರಣಕ್ಕೆ ಅವರ ವಿರುದ್ಧ ಸುಮುಟೋ ಕೇಸ್ ದಾಖಲಾಗಿದೆ. 

ಇದೀಗ ಇದೇ ವಿಚಾರವಾಗಿ ಶಿವವಮೊಗ್ಗದಲ್ಲಿ  ಹಿಂದೂ ಮಹಾ ಪಂಚಾಯಿತಿ ನಡೆಸಲು ವಿಶ್ವ ಹಿಂದೂ ಪರಿಷದ್ ಮುಂದಾಗಿದೆ. ಈ ಸಂಬಂಧ ಮಂಗಳೂರಿನಲ್ಲಿ ಮಾತನಾಡಿರುವ ವಿಶ್ವ ಹಿಂದು ಪರಿಷದ್​ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪವೆಲ್​,  ಉತ್ತರ ಪ್ರದೇಶ ಮಾದರಿಯಲ್ಲಿ ಹಿಂದುಗಳ ರಕ್ಷಣೆಗೆ ಶಿವಮೊಗ್ಗದಲ್ಲಿ ಮಹಾ ಪಂಚಾಯ್ತಿ ಸಭೆ ನಡೆಸಲಾಗುವುದು ಎಂದಿದ್ದಾರೆ. 

ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹಿಂದುಗಳ ಮೇಲೆ ಆಕ್ರಮಣಗಳಾದಾಗ ರಕ್ಷಣೆ ಹಾಗೂ ಒಗ್ಗಟ್ಟು ಪ್ರದರ್ಶನಕ್ಕೆ ಮಹಾಪಂಚಾಯ್ತಿ ನಡೆಸಿ ಪ್ರಮುಖ ತೀರ್ಮಾನ ಕೈಗೊಳ್ಳಲಾಗುತ್ತಿದದೆ. ಅದೇ ರೀತಿಯಲ್ಲಿ  ಶಿವಮೊಗ್ಗದಲ್ಲಿ  ಹಿಂದು ಸಮಾಜದ ಮುಖಂಡರು ಹಾಗೂ ಪ್ರಮುಖರನ್ನು ಕರೆದು ಮಹಾಪಂಚಾಯ್ತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

Share This Article