ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

Karnataka State Open University Mysore Important Announcement! Register in Shimoga itself ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, (ಕೆಎಸ್‍ಯು)  ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ 2023-24 ನೇ ಶೈಕ್ಷಣಿಕ ಜುಲೈ ಸಾಲಿನಲ್ಲಿ ಯುಜಿಸಿಯ ಮಾನ್ಯತೆಯೊಂದಿಗೆ ಜು.01 ರಿಂದ ಅ.20 ರವರೆಗೆ ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭವಾಗಿರುತ್ತದೆ.

ಪ್ರಥಮ ವರ್ಷದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ಬಿ.ಎಸ್ಸಿ/ಬಿ.ಎಸ್.ಡಬ್ಲ್ಯೂ/ಬಿ.ಲಿಬ್,ಪದವಿ ಹಾಗೂ ಎಂ.ಎ/ಎಂ.ಕಾಂ/ಎಂ.ಸಿ.ಎ/ಎಂ.ಎಸ್.ಡಬ್ಲ್ಯೂ/ಎಂ.ಲಿಬ್ ಮತ್ತು ಎಂ.ಎಸ್ಸಿ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಹಾಗೂ ಪಿ.ಜಿ ಡಿಪ್ಲೊಮಾ ಮತ್ತು ಡಿಪ್ಲೊಮಾ  ಹಾಗೂ ಸೆರ್ಟಿಫಿಕೇಟ್ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಯನ್ನು ನೇರವಾಗಿ ವಿಶ್ಚವಿದ್ಯಾಲಯದ ವೆಬ್‍ಸೈಟ್ www.ksoumysuru.ac.in ನಲ್ಲಿ ಭರ್ತಿ ಮಾಡಿ ಶಿವಮೊಗ್ಗ ಆಲ್ಕೊಳ ಸರ್ಕಲ್ ಹತ್ತಿರ ಇರುವ ಕರಾಮುವಿ ಪ್ರದೇಶಿಕ ಕೇಂದ್ರಕ್ಕೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 

ಪ್ರತಿ ಭಾನುವಾರ ಮತ್ತು ಎಲ್ಲಾ ಸರ್ಕಾರಿ ರಜೆ ದಿನಗಳಂದು ಪ್ರವೇಶಾತಿಗೆ ಅವಕಾಶವಿದೆ.  ಮಹಿಳಾ ಬಿ.ಪಿ.ಎಲ್. ವಿದ್ಯಾರ್ಥಿನಿಯರಿಗೆ 15% ಶುಲ್ಕ ವಿನಾಯಿತಿ ಹಾಗೂ ಆಟೋ ಹಾಗೂ ಕ್ಯಾಬ್ ಚಾಲಕರು ಹಾಗೂ ಅವರ ಮಕ್ಕಳಿಗೆ 30% ಶುಲ್ಕ ವಿನಾಯಿತಿ ಇರುತ್ತದೆ.  

ಡಿಫೆನ್ಸ್/ಎಕ್ಸ್-ಸರ್ವಿಸ್‍ಮನ್‍ಗಳಿಗೆ ಪ್ರವೇಶಾತಿಯಲ್ಲಿ 15% ಶುಲ್ಕವಿನಾಯಿತಿ ಇರುತ್ತದೆ.  ಕೋವಿಡ್‍ನಿಂದ ಮೃತರಾದ ಪೋಷಕರ ಮಕ್ಕಳಿಗೆ, ದೃಷ್ಠಿಹೀನ ಅಂಧ ಮಕ್ಕಳಿಗೆ ಮತ್ತು ತೃತೀಯ ಲಿಂಗಿಗಳಿಗೆ ಪ್ರವೇಶಾತಿಯ ಪೂರ್ಣ ಶುಲ್ಕ ವಿನಾಯಿತಿ ಇದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವುದು.  

ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ಶೇ.25% ಶುಲ್ಕ ವಿನಾಯಿತಿ ಇರುತ್ತದೆ.  ವಿವಿಯ ಕಲಿಕಾರ್ಥಿ ಸಹಾಯ ಕೇಂದ್ರಗಳಾದ ಡಿವಿಎಸ್ ಕಾಲೇಜು ಶಿವಮೊಗ್ಗ, ಹೊಯ್ಸಳ ಕಾಲೇಜು ಮತ್ತು ತುಂಗಾ ಕಾಲೇಜು ತೀರ್ಥಹಳ್ಳಿ ಹಾಗೂ ಸಾಗರದ ಎಲ್.ಬಿ. ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-250367, ಮೊ.ಸಂ.: 9164467131/ 9739803295 / 9480765905 ಗಳನ್ನು ಸಂಪರ್ಕಿಸುವುದು. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!