ಮೂರು ದಿನ ನಾಲ್ಕು ಜಿಲ್ಲೆಗಳ ನಗರಗಳಲ್ಲಿ ಮೆಸ್ಕಾಂನ ಈ ಸೇವೆಗಳು ಸಿಗುವುದಿಲ್ಲ! ಕಾರಣ ಇಲ್ಲಿದೆ

In view of the maintenance of the software, Mescom online services will be suspended for three days in mangaluru, Puttur, Bantwal, Udupi, Shivamogga, Bhadravathi, Sagar, Shikaripura, Chikkamagaluru, Kadur and Tarikere city and town areas. 

ಮೂರು ದಿನ ನಾಲ್ಕು ಜಿಲ್ಲೆಗಳ ನಗರಗಳಲ್ಲಿ ಮೆಸ್ಕಾಂನ ಈ ಸೇವೆಗಳು ಸಿಗುವುದಿಲ್ಲ! ಕಾರಣ ಇಲ್ಲಿದೆ

SHIVAMOGGA NEWS / ONLINE / Malenadu today/ Nov 23, 2023 NEWS KANNADA

Shivamogga  |  Malnenadutoday.com |   ಮೆಸ್ಕಾಂ :ತಾತ್ಕಾಲಿಕವಾಗಿ ಆನ್‍ಲೈನ್ ಸೇವೆ ಸ್ಥಗಿತ

ನ. 24  ರಿಂದ 26  ರವರೆಗೆ ಮಾಹಿತಿ ತಂತ್ರಜ್ಞಾನ ಸೇವೆಗೆ ಸಂಬಂಧಿಸಿದಂತೆ ತಂತ್ರಾಂಶ ಹಾಗೂ ಹಾಡ್ರ್ವೇರ್ ಉನ್ನತೀಕರಿಸಲಾಗುತ್ತಿದ್ದು, ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ, ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ನಗರ ಹಾಗೂ ಪಟ್ಟಣದ ಪ್ರದೇಶಗಳಲ್ಲಿ ಮೂರು ದಿನ ಆನ್‍ಲೈನ್ ಆಧಾರಿತ ಸೇವೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

READ :ನವೆಂಬರ್ 25 ರಂದು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ?

ಈ ಹಿನ್ನೆಲೆಯಲ್ಲಿ  ನಗದು ಪಾವತಿ ಕೌಂಟರ್‍ಗಳಲ್ಲಿ ಆನ್‍ಲೈನ್ ಸೇವೆಗಳಾದ ಹೊಸ ವಿದ್ಯುತ್ ಸಂಪರ್ಕ, ಹೆಸರು ಬದಲಾವಣೆ, ನಗದು ಪಾವತಿ, ಆನ್‍ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಇತ್ಯಾದಿ ಸೇವೆಗಳು ಇರುವುದಿಲ್ಲ. 

ಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.  ಸಂಬಂಧಪಟ್ಟ ಗ್ರಾಹಕರು ಇದನ್ನು ಗಮನಿಸಿ ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.