ಪ್ರಯಾಣಿಕರಿಗೆ ಸೂಚನೆ/ ಇವತ್ತು ಕೂಡ ಸರ್ಕಾರಿ ಸಾರಿಗೆ ಬಸ್​ಗಳು ಸಿಗೋದು ಅನುಮಾನ!

Notice to passengers/ It is doubtful that government transport buses will be available even today!

ಪ್ರಯಾಣಿಕರಿಗೆ ಸೂಚನೆ/ ಇವತ್ತು ಕೂಡ ಸರ್ಕಾರಿ ಸಾರಿಗೆ ಬಸ್​ಗಳು ಸಿಗೋದು ಅನುಮಾನ!

KARNATAKA NEWS/ ONLINE / Malenadu today/ May 4, 2023 GOOGLE NEWS


ಶಿವಮೊಗ್ಗ/ ಇವತ್ತು ಕೂಡ ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಕೆಎಸ್​ಆರ್​​ಟಿಸಿ ಬಸ್​ಗಳು ತೆರಳಿದ್ದವು. 

 

ಇವತ್ತು ಅಂದರೆ ಮೇ 4 ರಂದು ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ 2ನೇ ಹಂತದ ತರಬೇತಿ ಕಾರ್ಯ ಕ್ರಮವನ್ನು ಹಮ್ಮಿಕೊಂಡಿಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಕ.ರಾ.ರ.ಸಾ. ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ 108 ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ. 

 

ಆದ್ದರಿಂದ ಮೇ 4 ರಂದು( ಇವತ್ತು) ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹಾಗಾಗಿ  ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ನಿಗಮ ದೊಂದಿಗೆ ಸಹಕರಿಸುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಗಳು ಕೋರಿದ್ದಾರೆ.




ಶಿವಮೊಗ್ಗದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ/ ಆಯನೂರು ಮಂಜುನಾಥ್​ರ ಗೆಲುವಿನ ಬಗ್ಗೆ ಹೇಳಿದ್ಧೇನು

 

ಶಿವಮೊಗ್ಗ/ ಹೆಚ್​ಡಿ ಕುಮಾರಸ್ವಾಮಿ/ ಶಿವಮೊಗ್ಗ ನಗರದಲ್ಲಿ ನಿನ್ನೆ ನಡೆದ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ  ಮಾಜಿ ಸಿಎಂ ಹೆಚ್‌ಡಿಕೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಜಾತ್ಯಾತೀತ ಜನತಾದಳದ್ದು ಪಾಲಿದೆ ಎಂದಿದ್ದಾರೆ.  

 

ಶಿವಮೊಗ್ಗ ಜಿಲ್ಲೆಯು ಇಷ್ಟೊಂದು ಅಭಿವೃದ್ಧಿ ಪಥದಲ್ಲಿ ಸಾಗಲು ಜೆಡಿಎಸ್ ಕಾಣಿಕೆ  ಇದೆ. ತಾವು ಮುಖ್ಯಮಂತ್ರಿಯಾದಾಗ  ಜಿಲ್ಲೆಯ ಅಭಿವೃದ್ಧಿ ಯುಗಕ್ಕೆ ಶಿಲಾನ್ಯಾಸ ಮಾಡಿದ್ದಾಗಿ ಅವರು ಹೇಳಿದ್ದಾರೆ. 

 

 

ಎನ್.ಐ.ಎಸ್. ಮೈದಾನದಲ್ಲಿನಡೆದ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ 2004-05ರ ಸಾಲಿನಲ್ಲಿ ತಾನು ಮುಖ್ಯಮಂತ್ರಿ ಯಾದಾಗ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದೆ. 

 

ಅಲ್ಲಿಂದಲೇ ಜಿಲ್ಲೆಯ ಅಭಿವೃದ್ಧಿ ಆರಂಭವಾಯ್ತು ಬಿಜೆಪಿಯವರು ಇದನ್ನು ನೆನಪಿಸುತ್ತಿಲ್ಲ. ತಮ್ಮಿಂದಲೇ ಎಲ್ಲಾ ಅಭಿವೃದ್ಧಿ ಪ್ರಚಾರ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು. 



ಬಿಜೆಪಿ ಶಾಂತಿಯ ತೋಟವಾಗಿದ್ದ ಶಿವಮೊಗ್ಗವನ್ನು ಕಡಿಸಿದೆ. ಕೈಗಾರಿಕೆಗಳು ಬಂದ್ ಆಗುವಲ್ಲಿ ಅವರ ಪಾಲೇ ಹೆಚ್ಚಿದೆ. ಸತ್ತವರ ಹೆಣದ ಮೇಲೆ ರಾಜಕೀಯ ಮಾಡುತ್ತಾ, ಕಮಿಷನ್ ಯುಗವನ್ನು ಆರಂಭಿಸಿದವರು ಬಿಜೆಪಿಯವರು ಎಂದು ಟೀಕಿಸಿದ್ರು. 

 

ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಳುಗಿರುವ ಕೈಗಾರಿಕೆಗಳಿಗೆ ಪುನರ್ ಜೀವ ಕೊಡುತ್ತೇನೆ. ಈಗಾಗಲೇ ಪಂಚರತ್ನ ಮೂಲಕ ಘೋಷಿಸಿರುವ ಯೋಜನೆಗಳ ಮೂಲಕ ಸ್ವಾಭಿಮಾನಿ ಕರ್ನಾಟಕ ವನ್ನು ಮತ್ತು ನೆಮ್ಮದಿಯ ಜೀವನವನ್ನು ನಡೆಸಲು ನೆರವಾಗುತ್ತೇನೆ ಎಂದರು.

 

ಇದಕ್ಕೂ ಮುನ್ನ ಮಾತನಾಡಿದ ಅಭ್ಯರ್ಥಿ ಆಯನೂರು ಮಂಜುನಾಥ್, ತಮಗೆ ಯಾವುದೇ ಕಪ್ಪು ಚುಕ್ಕೆಯಿಲ್ಲ, ಅಪಚಾರ ಮಾಡಿಲ್ಲ. ಆದರೂ ತನ್ನನ್ನು ಕೊಳಚೆ ನೀರು ಎಂದು ನಿಂದಿಸಿದ್ದಾರೆ. 

ರಾಜ್ಯದಲ್ಲಿ 2 ಪಕ್ಷಗಳಿಂದ ಬೇಸತ್ತ ಜನತೆ ಜೆಡಿಎಸ್ ಸರಕಾರತರಲು ಆಸಕ್ತಿ ತೋರಿದ್ದು, ಜನರ ಆಶೀರ್ವಾ ದಿಂದ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.  




ಬೇಳೂರು ಗೋಪಾಲಕೃಷ್ಣರ ಪರವಾಗಿ ಮಗಳು  ‘ಮೇಘ’ ಪ್ರಚಾರ! 

ಸಾಗರ/ ಶಿವಮೊಗ್ಗ/ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ(sagara assembly constituency) ಪ್ರಚಾರ ಕಳೆಕಟ್ಟಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ , ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ರವರ ಪರವಾಗಿ ಪ್ರಚಾರ ಮಾಡಿದ್ದರು. ಇದರ ಬೆನ್ನಲ್ಲೆ ಬೇಳೂರು ಗೋಪಾಲಕೃಷ್ಣರವರ ಪುತ್ರಿ ಕೂಡ ಪ್ರಚಾರದ ಅಖಾಡಕ್ಕೆ ಇಳಿದು ತಂದೆಯ ಪರವಾಗಿ ವೋಟು ಕೇಳುತ್ತಿದ್ದಾರೆ. 

 

ಮತದಾರದ ಬಳಿ ‘ಮೇಘ’ ಪ್ರಚಾರ

ಇವತ್ತು  ಕಾಂಗ್ರೆಸ್​ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣರ ಪರವಾಗಿ ಆನಂದಪುರದಲ್ಲಿ ಅವರ ಪುತ್ರಿ ಮೇಘಾ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿದ ಅವರು, ತಮ್ಮ ತಂದೆಗೆ ಮತ ಹಾಕುವಂತೆ ಕೋರಿದರು. ಸ್ಥಳೀಯ ಮುಖಂಡರ ಜೊತೆಗೆ ತೆರಳಿದ ಮೇಘಾ ಅಲ್ಲಲ್ಲಿ ಮಹಿಳೆಯರ ಜೊತೆ ಸಮಾಲೋಚನೆಯನ್ನ ನಡೆಸಿದರು. 

 

ಓದಿ : BREAKING NEWS /  ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ 

 

ಚುನಾವಣಾ ಕಣದ ವಾತಾವರಣವನ್ನು ತಿಳಿದುಕೊಳ್ಳಲುತ್ತಲೇ ಹಿರಿಯರಿಗೆ ನಮಸ್ಕರಿಸಿ ಮತಯಾಚಿಸಿದರು. ಇನ್ನೂ ಮತದಾರರು ಬೇಳೂರು ಗೋಪಾಲಕೃಷ್ಣರ ಬಗ್ಗೆ ಮಾತನಾಡಿದಾಗ ಮೇಘಾ ಭಾವುಕರಾದ ಸನ್ನಿವೇಶವೂ ಕಂಡು ಬಂತು.   

 


ಶಿವಮೊಗ್ಗ/  ಮಾಜಿ ಸೈನಿಕರಿಂದ ಸಹ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯವರ ಚಿತ್ರದುರ್ಗದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಾಜಿ ಸೈನಿಕರ ಮೀಸಲಾತಿಯಡಿ ಖಾಲಿ ಇರುವ ಸಹ ಶಿಕ್ಷಕ ಹುದ್ದೆಗೆ ಬಿ.ಎ., ಬಿ.ಇಡಿ. ವಿದ್ಯಾರ್ಹತೆ ಪಡೆದಿರುವ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಆಸಕ್ತ ಅಭ್ಯರ್ಥಿಗಳು ಸಂಬಂಧಿತ ಶೈಕ್ಷಣಿಕ ಹಾಗೂ ಮಾಜಿ ಸೈನಿಕರ ಮೂಲ ದಾಖಲೆಯೊಂದಿಗೆ ಮೇ-05ರಂದು ಮ.01 ಗಂಟೆಯೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಗೆ ಖುದ್ದಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.   

ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220925 ನ್ನು ಸಂಪರ್ಕಿಸುವುದು.


 

Malenadutoday.com Social media