BREAKING NEWS / ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ

BREAKING NEWS/ KSRTC bus services likely to be disrupted today! Here's why

BREAKING NEWS /  ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ

KARNATAKA NEWS/ ONLINE / Malenadu today/ May 3, 2023 GOOGLE NEWS


ಶಿವಮೊಗ್ಗ ಇವತ್ತು ಕೆಎಸ್​ಆರ್​ಟಿಸಿ (ksrtc) ಬಸ್​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಕೆಎಸ್​ಆರ್​ಟಿಸಿ ಬಸ್​ಗಳನ್ನ ಗುತ್ತಿಗೆ ನೀಡಿರುವುದು. ಇನ್ನೂ ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗ ಪ್ರಕಟಣೆಯನ್ನು ಸಹ  ನೀಡಿದೆ. 

ಇದನ್ನು ಸಹ ಓದಿ : ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

ಏನಿದೆ ಪ್ರಕಟಣೆಯಲ್ಲಿ

ದಿನಾಂಕ:03.05.2023 ರಂದು ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಖಾಸಗಿ ಸಮಾವೇಶಕ್ಕಾಗಿ ಅಂಕೋಲಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಾಕ್ರಮಕ್ಕೆ ಕ.ರಾ.ರ.ಸಾ.ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ 75 ವಾಹನಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ.

ಆದುದರಿಂದ ದಿನಾಂಕ:03.05.2023 ರಂದು ಕ.ರಾ.ರ.ಸಾ.ನಿಗಮದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ಸಹಕರಿಸುವಂತೆ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 




ನಾನೊಬ್ಬ ಬಜರಂಗಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ‘ಬ್ಯಾನ್​ ಅಸ್ತ್ರ’ ಶುರುವಾಯ್ತು ನಾಯಿ ಬಿಡುವ ಅಭಿಯಾನ!

ಶಿವಮೊಗ್ಗ & ಚಿಕ್ಕಮಗಳೂರು/ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಬಜರಂಗದಳದ ನೀಷೇಧ ಪ್ರಸ್ತಾಪವನ್ನು ಬಿಜೆಪಿ ಅಚ್ಚುಕಟ್ಟಾಗಿ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಪ್ರಣಾಳಿಕೆ ಬಿಡುಗಡೆಯಾದ ಬೆನ್ನಲ್ಲೆ ಕಾಂಗ್ರೆಸ್​  ಪಕ್ಷದಲ್ಲಿಯೇ ಪ್ರಣಾಳಿಕೆಗೆ ಅಪಸ್ವರ ಕೇಳಿಬಂದಿತ್ತು. 

ಇನ್ನೂ ಬಿಜೆಪಿ ಇದೇ ಅಸ್ತ್ರವನ್ನು ಕಾಂಗ್ರೆಸ್​ನ ವಿರುದ್ಧ ಬಳಸಲು ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಜರಂಗದಳವನ್ನು ನೀವು ನಿಷೇಧಿಸುತ್ತೀರಾ? ಎಂದು ಪ್ರಶ್ನೆ ಕೇಳುವುದರ ಜೊತೆಗೆ ಬಿಜೆಪಿ ನಾಯಕರು ನಾನು ಬಜರಂಗಿ ಎಂದು ಪೋಸ್ಟರ್​​ಗಳನ್ನು ತಮ್ಮ ಡಿಪಿಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ರವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗೆ ತಾನೊಬ್ಬ ಬಜರಂಗಿ ಎಂದು ಹಾಕಿಕೊಂಡಿದ್ದು ಅದೇ ರೀತಿಯಲ್ಲಿ ಹಲವು ನಾಯಕರು ಸೋಶಿಯಲ್​ ಮೀಡಿಯಾದಲ್ಲಿ ತಾನೊಬ್ಬ ಬಜರಂಗಿ ಎಂದು ಪೋಸ್ಟ್ ಹಾಕಿದ್ದಾರೆ. 

READ/ ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ! 


ಕಾಂಗ್ರೆಸ್​ ಸೋಲಿಗೆ ಇದೊಂದು ಸಾಕು

ಇನ್ನೊಂದೆಡೆ ಈ ಬಗ್ಗೆ ಟ್ವೀಟ್ ಮಾಡಿರುವ  ಬಿವೈ ವಿಜಯೇಂದ್ರ ವಿನಾಶ ಕಾಲಕ್ಕೆ ಎದುರಾದ ವಿಪರೀತ ಬುದ್ಧಿಯಿದು. ‘ಬಜರಂಗ ದಳ’ ನಿಷೇಧದ ನಿಮ್ಮ ಪ್ರಣಾಳಿಕೆಯ ಅಸ್ತ್ರವೇ ನಿಮ್ಮನ್ನು ನಿಶ್ಯಸ್ತ್ರಗೊಳಿಸಿ ನಿಷ್ಕ್ರಿಯಗೊಳಿಸಲಿದೆ ಎಂದಿದ್ದಾರೆ. 

ವೋಟು ಕೇಳಲು ಬಂದರೇ ನಾಯಿ ಬಿಡ್ತೀವಿ

ಇನ್ನೊಂದೆಡೆ ಬಿಜೆಪಿ ಮುಖಂಡರು ಈ ವಿಚಾರವನ್ನು ಅಭಿಯಾನದ ರೂಪದಲ್ಲಿ ಪ್ರಚಾರ ಮಾಡುತ್ತಿದ್ದು, ಮನೆಮನೆಯ ಮುಂದೆ ಕಾಂಗ್ರೆಸ್​ನವರ ವಿರುದ್ಧ ಪೋಸ್ಟರ್ ಅಂಟಿಸುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ,  

ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಗುಡ್ಡಹಟ್ಟಿ ಗ್ರಾಮದ ಅರುಣ್‌ ಪೂಜಾರಿ ಎಂಬುವರು ತಮ್ಮ ಮನೆ ಗೇಟಿನಲ್ಲಿ ಇದು ಬಜರಂಗದಳದವರ ಮನೆ. ಕಾಂಗ್ರೆಸ್‌ನವರು ಮತಯಾಚಿಸಲು ಅವಕಾಶ ಇಲ್ಲ. ಒಳಗೆ ಬಂದರೆ ನಾಯಿ ಬಿಡಲಾಗುತ್ತದೆ ಎಚ್ಚರ  ಎಂದು ಫಲಕ ಹಾಕಿದ್ದಾರೆ. 

ಇದನ್ನು ಸಹ ಓದಿ :  ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ  ಶಿವಣ್ಣ

ಒಟ್ಟಾರೆ, ಬಿಜೆಪಿ ನಾಯಕರು ಬಜರಂಗದಳದ ನಿಷೇಧ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದು,  ಕಾಂಗ್ರೆಸ್ ಪ್ರಣಾಳಿಕೆ ವ್ಯಾಪಕ ಚರ್ಚೆಯ ವಿಷಯವಾಗಿದೆ. 


 

Malenadutoday.com Social media