ಇವತ್ತಿನಿಂದ 2 ಪಿಯುಸಿ ಪರೀಕ್ಷೆ ಆರಂಭ! ಎರಡು ವಿಷಯ IMPORTANT

2 PUC exams to begin from today Two things IMPORTANT

ಇವತ್ತಿನಿಂದ 2 ಪಿಯುಸಿ ಪರೀಕ್ಷೆ ಆರಂಭ! ಎರಡು ವಿಷಯ IMPORTANT

MALENADUTODAY.COM  |SHIVAMOGGA| #KANNADANEWSWEB

ಮಾರ್ಚ್ 9 ಅಂದರೆ ಇವತ್ತಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಳ್ಳಲಿದೆ. ಈ ನಡುವೆ ಕಾಂಗ್ರೆಸ್ ಕರೆಕೊಟ್ಟಿದ್ದ ಬಂದ್ ಕೂಡ ರದ್ದಾಗಿದ್ದು, ವಿದ್ಯಾರ್ಥಿಗಳು ಆರಾಮಾಗಿ ಎಕ್ಸಾಮ್​ ಬರೆಯಬಹುದಾಗಿದೆ. ಇನ್ನೂ  ಹಿಜಾಬ್ ಸೇರಿದಂತೆ ಯಾವುದೇ ಧರ್ಮಧಾರಿತ ಉಡುಪು ಧರಿಸಿ ಬಂದರೆ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ತೀಯ ಪಿಯುಸಿ ಪರೀಕ್ಷೆ ಎಸ್‌ಎಸ್ ಎಲ್ ಸಿ ಮಾದರಿಯಲ್ಲೇ ನಡೆಸಲಾಗುವುದು. ರಾಜ್ಯದ ಶೇ. 90 ರಷ್ಟು ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಶೇ. 10 ರಷ್ಟು ಕಾಲೇಜುಗಳಲ್ಲಿ ಸಮವಸ್ತ್ರ ಇಲ್ಲ. ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಯಾವುದೇ ಧರ್ಮ ಸೂಚನೆ ವಸ್ತ್ರ ಧರಿಸಿ ಬರುವಂತಿಲ್ಲ ಎಂದು ಶಿಕ್ಷಣ ಇಲಾಖೆ  ಸ್ಪಷ್ಟಪಡಿಸಿದೆ. ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವವರಿಗೆ KSRTC-BMTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ತಮ್ಮ ಹಾಲ್​ಟಿಕೆಟ್ ತೋರಿಸಿ ಕೆಎಸ್​ಆರ್​ಟಿಸಿ ಬಸ್​ನಲ್ಲಿ ವಿದ್ಯಾರ್ಥಿಗಳು ಪ್ರಯಾಣ ಮಾಡಬಹುದಾಗಿದೆ. 

ಸಿದ್ದತೆ ಹೇಗಿದೆ? ಎಷ್ಟು ಜನರ ಪರೀಕ್ಷೆ ಬರೆಯುತ್ತಿದ್ದಾರೆ? 

  1. 1,109 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ
  2. 7,26,213 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
  3. ಇದರಲ್ಲಿ ಹೊಸದಾಗಿ 6.29 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ಧಾರೆ
  4. 25,847 ಖಾಸಗಿ, 70,586 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. 3,62,509 ಬಾಲಕಿಯರು, ಮತ್ತು 3,63,704 ಬಾಲಕರು ಸೇರಿದ್ದಾರೆ.
  5. ಕಲಾ ವಿಭಾಗದಿಂದ 2,34,815, ವಾಣಿಜ್ಯದಲ್ಲಿ 2,47,269 ಮತ್ತು ವಿಜ್ಞಾನ ವಿಭಾಗದಿಂದ 2,44,129 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
  6. 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. ಎಲ್ಲ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ.

READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ*

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ

  1. • ದಿನಾಂಕ 09-03-2023, ಗುರುವಾರ - ಕನ್ನಡ, ಅರೇಬಿಕ್
  2. • ದಿನಾಂಕ 11-03-2023, ಶನಿವಾರ - ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
  3. • ದಿನಾಂಕ 13-03-2023, ಸೋಮವಾರ - ಅರ್ಥಶಾಸ್ತ್ರ
  4. • ದಿನಾಂಕ 14-03-2023, ಮಂಗಳವಾರ - ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
  5. • ದಿನಾಂಕ 15-03-2023, ಬುಧವಾರ - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  6. • ದಿನಾಂಕ 16-03-2023, ಗುರುವಾರ - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
  7. • ದಿನಾಂಕ 17-03-2023, ಶುಕ್ರವಾರ - ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
  8. • ದಿನಾಂಕ 18-03-2023, ಶನಿವಾರ - ಭೂಗೋಶಶಾಸ್ತ್ರ, ಜೀವಶಾಸ್ತ್ರ
  9. • ದಿನಾಂಕ 20-03-2023, ಸೋಮವಾರ - ಇತಿಹಾಸ, ಭೌತಶಾಸ್ತ್ರ
  10. • ದಿನಾಂಕ 21-03-2023, ಮಂಗಳವಾರ - ಹಿಂದಿ
  11. • ದಿನಾಂಕ 23-03-2023, ಗುರುವಾರ - ಇಂಗ್ಲೀಷ್
  12. • ದಿನಾಂಕ 25-03-2023 ಶನಿವಾರ - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  13. • ದಿನಾಂಕ 27-03-2023, ಸೋಮವಾರ - ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
  14. • ದಿನಾಂಕ 29-03-2023, ಬುಧವಾರ - ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

READ | *ಮೆಸ್ಕಾಂ ಪ್ರಕಟಣೆ | ಹೊಳಲೂರು, ಹೊಳೆಹೊನ್ನೂರು, ಪಿಳ್ಳಂಗಿರಿ, ಎಂಆರ್​ಎಸ್​ ನ ಈ ಪ್ರದೇಶಗಳಲ್ಲಿ ಮಾರ್ಚ್​ 10 ರಂದು ವಿದ್ಯುತ್ ಇರೋದಿಲ್ಲ!*

READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #