ಮಾಡಾಳ್ ವಿರುದ್ಧ ಲೋಕಾ ರೇಡ್​​ ಪ್ರಕರಣ! ಗೃಹಸಚಿವರು ಮತ್ತು ಸರ್ಕಾರದ ಮೇಲೆ ತೀರ್ಥಹಳ್ಳಿ ಕಾಂಗ್ರೆಸ್​ನ ಐದು ಡೌಟ್ಸ್​!

Loka raid case against Madal! Five doubts of Theerthahalli Congress on home minister and government!

ಮಾಡಾಳ್ ವಿರುದ್ಧ ಲೋಕಾ ರೇಡ್​​ ಪ್ರಕರಣ! ಗೃಹಸಚಿವರು ಮತ್ತು ಸರ್ಕಾರದ ಮೇಲೆ ತೀರ್ಥಹಳ್ಳಿ ಕಾಂಗ್ರೆಸ್​ನ ಐದು ಡೌಟ್ಸ್​!

MALENADUTODAY.COM  |SHIVAMOGGA| #KANNADANEWSWEB

ಮಾಡಾಳ್​ ವಿರೂಪಾಕ್ಷ ಮತ್ತು ಮತ್ತವರ ಮಗನ ವಿರುದ್ಧದ ಲೋಕಾಯುಕ್ತ ರೇಡ್ ವಿಚಾರ ಮತ್ತಷ್ಟು ರಾಜಕೀಯ ಪ್ರಹಸನಕ್ಕೆ ಸಾಕ್ಷಿಯಾಗಿದೆ. ಇದ್ದಕ್ಕಿದ್ದ ಹಾಗೆ ಬೇಲ್ ಪಡೆದು ಪ್ರತ್ಯಕ್ಷವಾದ ಮಾಡಾಳ್ ವಿರೂಪಾಕ್ಷಪ್ಪ, ಮನೆಯಲ್ಲಿ ಸಿಕ್ಕಿದ್ದು ಅಡಿಕೆಯ ಹಣ ಎಂದಿದ್ದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಈ ಸಂಬಂಧ ಅಡಿಕೆ ಮರದಲ್ಲಿ ವಿಮಲ್ ಚೀಲಗಳೊಂದಿಗೆ ಹಣ  ಹುಟ್ಟುತ್ತದೆ ಎಂಬಂತಹ ವ್ಯಂಗ್ಯಚಿತ್ರಗಳು ಎಲ್ಲೆಡೆ ಹರಿದಾಡುತ್ತಿದ್ದು, ಬಿಜೆಪಿ ವಿರುದ್ಧದ ಟೀಕೆಗೆ ಬಳಕೆಯಾಗುತ್ತಿದೆ. 

ಇನ್ನೂ ಮಾಡಾಳ್​ ವಿರೂಪಾಕ್ಷಪ್ಪರಿಗೆ ಸಿಕ್ಕ ಬೇಲ್​ನ ಬಗ್ಗೆಯೇ ಕಾಂಗ್ರೆಸ್​  ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇಲ್​ ಪಡೆಯುವ ವಿಚಾರದಲ್ಲಿ ಸರ್ಕಾರ ಹಾಗೂ ಸಚಿವ ಆರಗ ಜ್ಞಾನೇಂದ್ರ ಮತ್ತು ಪೊಲೀಸ್ ಇಲಾಖೆ ಮಾಡಾಳ್ ವಿರೂಪಾಕ್ಷಪ್ಪರ ಪರವಾಗಿ ಪರೋಕ್ಷವಾಗಿ ಕೆಲಸ ಮಾಡಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಆರ್​ಎಂ ಮಂಜುನಾಥ್ ಗೌಡರ ಜೊತೆ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಿಮ್ಮನೆ ರತ್ನಾಕರ್, ಮಾಡಾಳ್​ ವಿರೂಪಾಕ್ಷಪ್ಪರ ಬೇಲ್​ ವಿಚಾರದ ಬಗ್ಗೆ ಅನುಮಾನಗಳನ್ನ ವ್ಯಕ್ತಪಡಿಸಿ ಲಾ ಪಾಯಿಂಟ್ ಹಾಕಿದ್ಧಾರೆ. 

READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ*

ಎನದು ಕಿಮ್ಮನೆ ಸಂಶಯ!? 

  1. ಲೋಕಾಯುಕ್ತ ರೇಡ್ ಕೇಸ್​ನಲ್ಲಿ ಮಾಡಾಳು ವಿರೂಪಾಕ್ಷಪ್ಪರವರ ವಿರುದ್ಧದ ಕಂಪ್ಲೆಂಟ್​​ನಲ್ಲಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಆದರೆ ಅವರ ಮೇಲೆ  ನೇರವಾದ ಆರೋಪವೇ ಪ್ರಕರಣದಲ್ಲಿ ಮಾಡಿಲ್ಲ
  2. ನ್ಯಾಯಾದೀಶರು ತಮ್ಮ ಟೇಬಲ್​ ಮೇಲೆ ಇರುವ ದಾಖಲೆಗಳ ಆಧಾರದ ಮೇಲೆ ಆದೇಶ ನೀಡುತ್ತಾರೆ. ಈ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷರನವರ ಮೇಲೆ ಅವರ  ಮೇಲೆ ಪೊಲೀಸರು ಆಪಾದನೆಯನ್ನೆ ಮಾಡಿಲ್ಲ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರನ್ನು ಬಚಾವ್ ಮಾಡುವ ಪ್ರಯತ್ನ ಪೊಲೀಸರಿಂದಲೇ ನಡೆದಿದೆ ಎಂಬ ಅನುಮಾನವಿದೆ. 
  3. ಮಾಡಾಳು ವಿರೂಪಾಕ್ಷಪ್ಪನವರು ಮನೆಯಲ್ಲಿ ಸಿಕ್ಕ ಹಣ ನಂದೆ ಎಂದು ನೇರವಾಗಿ ಹೇಳಿದ್ದಾರೆ. ಆದರೆ ಅವರು ಮತ್ತವರ ಮಗ ಪೊಲೀಸರ ಎದುರು ಈ ವಿಷಯ ಏಕೆ ಹೇಳಿಲ್ಲ. ಆ ಸಂದರ್ಭದಲ್ಲಿ ಹೇಳಿದ್ದರೇ,  ಅವರು ರಿಲೀಸ್ ಆಗುತ್ತಿರಲಿಲ್ಲ. 
  4. ಬೇಲ್ ಪಡೆದು ಅರ್ಧಗಂಟೆಯಲ್ಲಿಯೇ ಮಾಡಾಳ್​ರವರು ಹೊರಕ್ಕೆ ಬರುತ್ತಾರೆ. ಆದರೆ 15 ತಂಡಗಳನ್ನ ಸಿದ್ದಪಡಿಸಿದ ಪೊಲೀಸ್​ ಇಲಾಖೆ ಆರು ದಿನ ಎಲ್ಲಿ ಹುಡುಕಿತ್ತು! ಪೊಲೀಸರಿಗೆ ಅವರನ್ನು ಹುಡುಕುವುದು ಅಸಾಧ್ಯವಾಗಿದ್ದೇಕೆ? 
  5. ಸರ್ಕಾರ ಹಾಗೂ ಆಎರಗ ಜ್ಞಾನೇಂದ್ರರವರು ವಿರೂಪಾಕ್ಷಪ್ಪನವರ ರಕ್ಷಣೆಗೆ ನಿಂತಿದ್ದಾರೆ. ಇಲ್ಲವಾದಲ್ಲಿ ಸ್ಯಾಂಟ್ರೋ ರವಿ , ಆರ್​.ಡಿ ಪಾಟೀಲ್​ ಕೇಸ್​ನಲ್ಲಿ ಜ್ಞಾನೇಂದ್ರವರು ರಾಜೀನಾಮೆ ನಡಬೇಕಿತ್ತು. 

READ | *ಮೆಸ್ಕಾಂ ಪ್ರಕಟಣೆ | ಹೊಳಲೂರು, ಹೊಳೆಹೊನ್ನೂರು, ಪಿಳ್ಳಂಗಿರಿ, ಎಂಆರ್​ಎಸ್​ ನ ಈ ಪ್ರದೇಶಗಳಲ್ಲಿ ಮಾರ್ಚ್​ 10 ರಂದು ವಿದ್ಯುತ್ ಇರೋದಿಲ್ಲ!*

ಬಂದ್ ಇಲ್ಲ!

ವಿದ್ಯಾರ್ಥಿಗಳಿಗೆ ರಾಜ್ಯದ ಎಲ್ಲಾ ಕಡೆ ಪರೀಕ್ಷೆ ಇರುವುದರಿಂದ ಇವತ್ತು ಆಯೋಜಿಸಿದ್ದ ಕಾಂಗ್ರೆಸ್ ಬಂದ್ ಅನ್ನು ಕಾಂಗ್ರೆಸ್ ಹೈಕಮಾಂಡ್ ಆದೇಶದ ಮೇರೆಗೆ ಕೈಬಿಡಲಾಗಿದೆ  ಎಂದು ತಿಳಿಸಲು ಸಲುವಾಗಿ ಕರೆದಿದ್ದ ಈ ಸುದ್ದಿಗೋಷ್ಟಿಯಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಆರ್​ಎಂ ಮಂಜುನಾಥ್ ಗೌಡರು ಆರಗ ಜ್ಞಾನೇಂದ್ರರವರ ವಿರುದ್ಧ ಹರಿಹಾಯ್ದರು. ನಂದಿತಾ ಪ್ರಕರಣವನ್ನು ಸಹ ಕೆದಕಿದ ಕಿಮ್ಮನೆ ರತ್ನಾಕರ್​, ನಮಗೆ ಅಧಿಕಾರ ಬಂದು ಮೂರು ತಿಂಗಳಿನಲ್ಲಿ ಅವರನ್ನಸೆರೆ ಹಿಡಿಯುತ್ತೆವೆ ಎಂದಿದ್ದರು. ಆದರೆ ಈ ಜ್ಞಾನೇಂದ್ರ ಮತ್ತು ಅಣ್ಣ ಅಮಿತ್ ಶಾ ಏನು ಮಾಡಿದ್ರು ಎಂದು ಪ್ರಶ್ನಿಸಿದ ಮಾಜಿ ಸಚಿವ ಈ ಪ್ರಕರಣದಲ್ಲಿ ಜ್ಞಾನೇಂದ್ರವರೇ ಆರೋಪಿ ಎಂದು ದೂರಿದರು. 

ಆರ್​ಎಂ ಮಂಜುನಾಥ್ ಗೌಡರ ವಾಗ್ದಾಳಿ

ಇನ್ನೂ ಆರ್​ಎಂ ಮಂಜುನಾಥ್ ಗೌಡರು, ಮಾಡಾಳ್ ವಿರೂಪಾಕ್ಷಪ್ಪನವರು ಅಷ್ಟು ದುಡ್ಡು ನಂದೆ ಎಂದು ಒಪ್ಪಿಕೊಳ್ಳುತ್ತಾರೆ. ಹಾಗಾಗಿದ್ದರೇ ಅವರಿಗೆ ಬೇಲ್​ ಸಿಗಬಾರದಿತ್ತು. ಅಲ್ಲದೆ ಅವರದ್ದು ಮೋದಿ ಯೋಜನೆ ಕ್ಯಾಶ್​ಲೆಸ್​ ಮನಿ ಕಾರ್ಯಕ್ರಮಕ್ಕೆ ವಿರುದ್ಧವಾಗಿದೆ. ಅಷ್ಟೊಂದು ದುಡ್ಡನ್ನ ಕ್ಯಾಶ್​ಲೆಸ್ ಆಗಿ ಬ್ಯಾಂಕ್ ಮೂಲಕ ಏಕೆ ವರ್ಗಾವಣೆ ಮಾಡಿಲ್ಲ ಎಂದ ಅವರು, ಕೇವಲ 20 ಲಕ್ಷ ಹಣಕ್ಕೆ ಡಿಕೆಶಿಯವರನ್ನು ಮೂರು ತಿಂಗಳು ಜೈಲಿಗೆ ಹಾಕಿದ್ದರು, ಈಗ 8 ಕೋಟಿ ನಂದೆ ಎನ್ನುತ್ತಿದ್ದಾರೆ ಮಾಡಾಳ್​ರವರನ್ನು ಎಷ್ಟು ದಿವಸ ಜೈಲಿಗೆ ಹಾಕ್ತೀರಾ ಎಂದು ಪ್ರಶ್ನಿಸಿದ್ರು. 

READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #