ELECTION NEWS/ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ನಿರ್ಣಾಯಕ ಯಾರು? ಗೆಲ್ಲುವ ಲೆಕ್ಕಾಚಾರವೇನು? ಯಾರ್ಯಾರಿಗಿದೆ ಪೈಪೋಟಿ?

ELECTION NEWS/ Who will be crucial this time in Shivamogga City Assembly constituency? What is the calculation of winning? Who has the competition?

ELECTION NEWS/  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ನಿರ್ಣಾಯಕ ಯಾರು? ಗೆಲ್ಲುವ ಲೆಕ್ಕಾಚಾರವೇನು? ಯಾರ್ಯಾರಿಗಿದೆ ಪೈಪೋಟಿ?

KARNATAKA NEWS/ ONLINE / Malenadu today/ Apr 27, 2023 GOOGLE NEWS


ಶಿವಮೊಗ್ಗಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸದ್ಯ ಹೈವೋಲ್ಟೇಜ್​ ಕ್ಷೇತ್ರಗಳ ಪೈಕಿ,  ಶಿವಮೊಗ್ಗ ನಗರ ಕೂಡ ಒಂದು. ಏಕೆಂದರೆ ಕೆ.ಎಸ್​.ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಣೆ, ಹಿಂದೂತ್ವ ಅಭ್ಯರ್ಥಿ, ಆಯನೂರು ಮಂಜುನಾಥ್ ಬಂಡಾಯ ಹೀಗೆ ಹಲವು ವಿಷಯಗಳಲ್ಲಿ ಶಿವಮೊಗ್ಗ ವಿಶೆಷವಾಗಿ ಕಾಣಿಸಿಕೊಳ್ತಿದೆ. ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಅಂಕಿ ಅಂಶಗಳನ್ನು ಹೇಳಲೇಬೇಕಿದೆ. ಅದರ ಡಿಟೇಲ್ಸ್  ನಿಮ್ಮ ಮುಂದೆ. 

ಶಿವಮೊಗ್ಗ ಕ್ಷೇತ್ರದ ರಾಜಕೀಯ ಇತಿಹಾಸ- ಹಿಂದೆ ಯವ್ಯಾವ ಪಕ್ಷದವರು ಗೆದ್ದಿದ್ದರು

ಸಮಾಜವಾದಿ ನೆಲವೆಂಬ ಹೆಗ್ಗಳಿಕೆ ಪಡೆದಿದ್ದ ಶಿವಮೊಗ್ಗ ನಗರದಲ್ಲಿ ಹಾಲಿ ಬಿಜೆಪಿ ಶಕ್ತಿಕೇಂದ್ರವಾಗಿದೆ. ಹಿಂದುತ್ವದ ಅಲೆಯಲ್ಲಿ ಬಿಜೆಪಿ ತನ್ನ ಮತಬ್ಯಾಂಕ್ ಗಟ್ಟಿಗಳಿಸಿಕೊಂಡಿದೆ. 

ಈ ಬಾರಿ  ಹಿಂದೂ ಹರ್ಷನಕೊಲೆ ಘಟನೆಯನ್ನೇ ದಾಳವಾಗಿ ಪ್ರಯೋಗಿಸಿ ಹಿಂದು ಸಮಾಜದ ಮತಗಳನ್ನು ಕ್ರೋಡೀಕರಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶಿವಮೊಗ್ಗದ ಶಾಂತಿ ಸೌಹಾರ್ದತೆಗೆ ಆದ್ಯತೆ ನೀಡಿ, ಅಭಿವೃದ್ಧಿ ಪಥದತ್ತ ಶಿವಮೊಗ್ಗ ವನ್ನು ಕೊಂಡೊಯ್ಯುವುದಾಗಿ ಹೇಳುತ್ತಾ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿವೆ. 



ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 



2018 ರ ಚುನಾವಣೆ ಹೇಗಿತ್ತು!

2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್ ಈಶ್ವರಪ್ಪ 1,04,027 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನ ಪ್ರತಿಸ್ಪರ್ಧಿ ಕೆ.ಬಿ ಪ್ರಸನ್ನ ಕುಮಾರ್ 57,920 ಮತಗಳನ್ನು ಪಡೆದು 46,107 ಮತಗಳಿಂದ ಹಿನ್ನಡೆ ಅನುಭವಿಸಿದ್ದರು.

  • ಕೆ.ಎಸ್ ಈಶ್ವರಪ್ಪ ಬಿಜೆಪಿ ಗೆಲುವು.- 104027

  • ಕೆ.ಬಿ. ಪ್ರಸನ್ನ ಕುಮಾರ್ ಕಾಂಗ್ರೆಸ್ ಸೋಲು-57,920

ಶಿವಮೊಗ್ಗದ ಮತದಾರರ ಸಂಖ್ಯೆ

  1. ಪುರುಷ ಮತದಾರರು 1,25,943

  2. ಮಹಿಳಾ ಮತದಾರರು 1,31,729

  3. ಒಟ್ಟು ಮತದಾರರು-2,57,685

ಶಿವಮೊಗ್ಗ ನಗರದಲ್ಲಿ ನಿರ್ಣಾಯಕ ಯಾರು? 

ಬ್ರಾಹ್ಮಣರು-39 ಸಾವಿರ, ಲಿಂಗಾಯಿತರು—23 ಸಾವಿರ, ಮುಸ್ಲಿಂ-44 ಸಾವಿರ, ಎಸ್ಸಿ 24 ಸಾವಿರ, ಕ್ರಿಶ್ಚಿಯನ್ 10 ಸಾವಿರ, ಕುರುಬ-13 ಸಾವಿರ ,ಒಕ್ಕಲಿಗರು---12 ಸಾವಿರ, ತಮಿಳು-13 ಸಾವಿರ ಮತಗಳಿವೆ 

ಬ್ರಾಹ್ಮಣರು ಹಾಗು ಲಿಂಗಾಯತರು ಪ್ರಾಬಲ್ಯಹೊಂದಿದ್ದಾರೆ . ಅಂತಿಮವಾಗಿ ಮುಸ್ಲಿಂ ಮತಗಳು ನಿರ್ಣಾಯಕ. ಈ ಬಾರಿ ಗೆಲ್ಲುವ ಅಭ್ಯರ್ಥಿಗೆ ಮುಸ್ಲಿಂರು ಮಣೆ ಹಾಕಲಿದ್ದು, ಈ ಮತಗಳು ಯಾರ ಪರವಾಗುತ್ತೋ ಅನ್ನುವುದು ಇನ್ನೂ ಸಹ ಸಸ್ಪೆನ್ಸ್ನಲ್ಲಿದೆ. 

ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು

ಶಿವಮೊಗ್ಗ-113 ನೇ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಯ ಎಸ್.ಎನ್.ಚನ್ನಬಸಪ್ಪ, ಐಎನ್‍ಸಿ ಹೆಚ್.ಸಿ.ಯೋಗೇಶ್, ಎಎಪಿ ನೇತ್ರಾವತಿ.ಟಿ, ಜೆಡಿಎಸ್ ಆಯನೂರ್ ಮಂಜುನಾಥ, ಉತ್ತಮ ಪ್ರಜಾಕೀಯ ಪಾರ್ಟಿ ಯ ವೆಂಕಟೇಶ್ ಆರ್, ಕೆಆರ್​ಎಸ್ ನ ರಾಜೇಂದ್ರ ಡಿ, ಪಕ್ಷೇತರ ರಿಯಾಜ್ ಅಹಮದ್, ಮೊಹಮ್ಮದ್ ಯೂಸುಫ್ ಖಾನ್, ಅಜಯ್‍ಕುಮಾರ್ ಬಿ.ಎಸ್, ಅಕ್ಕಮಹಾದೇವಿ.ಹೆಚ್.ಎಂ, ಶೇಖರನಾಯ್ಕ್, ವಿ.ಹನುಮಶೆಟ್ಟಿ, ಅನಿಲ್.ಎಂಆರ್, ಹೆಚ್.ಎಸ್.ಗಣೇಶ್, ರವಿಕುಮಾರ್.ಎನ್ ಕಣದಲ್ಲಿದ್ದಾರೆ.



ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ಯಾರಿಗೆ ಪ್ಲಸ್ ಯಾರಿಗೆ ಮೈನಸ್ 

ಶಿವಮೊಗ್ಗ ನಗರದಲ್ಲಿ ಸಧ್ಯಕ್ಕೆ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ವಾತಾವರಣ ಮೂಡಿದೆ. 

ಶೂನ್ಯದಲ್ಲಿದ್ದ ಜೆಡಿಎಸ್ ಪಕ್ಷ ಈಗ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದಿದೆ, ಜೆಡಿಎಸ್ ನಿಂದ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದು, ಇವರಿಗೆ ಕಾಂಗ್ರೆಸ್ ತೊರೆದು ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಸಾಥ್ ನೀಡಿದ್ದಾರೆ. 

ಕೋಮುಗಲಭೆಯಿಂದ ನಲುಗಿ ಹೋಗಿರುವ ಶಿವಮೊಗ್ಗಕ್ಕೆ ಹಿಂದುತ್ವ ಬೇಡ. ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಇರುವ ವಾತಾವರಣ ತರುತ್ತೇನೆ ಎಂದು ಆಯನೂರು ಮಂಜುನಾಥ್ ತೆನೆಹೊತ್ತು ಹೊರಟಿದ್ದಾರೆ. ಇವರಿಗೆ ಲಿಂಗಾಯಿತ, ಬ್ರಾಹ್ಮಣ ಮತಗಳು ಕೈಹಿಡಿದರೆ, ಅಂತಿಮವಾಗಿ ಕಾಂಗ್ರೆಸ್ ಪರವಾಗಿರುವ ಮುಸ್ಲಿಂ ಮತಗಳು ಜೆಡಿಎಸ್ ಗೆ ವಾಲಿದರೂ ಅಚ್ಚರಿಯಿಲ್ಲ.

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಚನ್ನಬಸಪ್ಪ ಬಿಜೆಪಿಯ ಪ್ರತಿಷ್ಟೆ

ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಎಸ್.ಎನ್ ಚನ್ನಬಸಪ್ಪರನ್ನ ಗೆಲ್ಲಿಸಿಕೊಂಡು ಬರುವುದು ಬಿಜೆಪಿಗೆ ಪ್ರತಿಷ್ಟೆಯಾಗಿದೆ. ಕಾರಣ ಕೆ.ಎಸ್​.ಈಶ್ವರಪ್ಪರಿಂದ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಕಸಿದು ಚನ್ನಬಸಪ್ಪರಿಗೆ ನೀಡಲಾಗಿದೆ. ಹೀಗಾಗಿ ಈ ಪ್ರಯತ್ನದಲ್ಲಿ ಅವರಿಗೆ ಸೋಲಾಗಬಾರದು ಎಂಬು ಅಭಿಪ್ರಾಯ ಬಿಜೆಪಿ ಹೈಕಮಾಂಡ್​ನವರೆಗೂ  ಇದೆ. ಹಾಗಾಗಿ ಚನ್ನಬಸಪ್ಪರನ್ನ ಗೆಲ್ಲಿಸಿಕೊಂಡು ಬರಲು ನಾನಾ ಪ್ರಯತ್ನಗಳು ನಡೆಯುತ್ತಿವೆ. 

 ಇನ್ನೂ ಬಿಜೆಪಿಯ ಸಾಂಪ್ರಾದಾಯಿಕ ಮತಗಳೇ ಕೈಹಿಡಿದರೆ ಸಾಕು ಎಂಬ ವಿಶ್ವಾಸದಲ್ಲಿದ್ದಾರೆ. ಹಿಂದುತ್ವದ ಅಡಿಯಲ್ಲಿಯೇ ಮತಕೇಳುತ್ತಿರುವ ಬಿಜೆಪಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿಲ್ಲ. ಹಿಂದುಗಳ ಮತಗಳನ್ನೇ ಕ್ರೋಡಿಕರಿಸಿ ಗೆಲುವು ಸಾಧಿಸಲು ತಂತ್ರ ರೂಪಿಸಿದೆ. 

ಬಿಜೆಪಿ ಅಧಿಕಾರಕ್ಕೆ ಬಂದರೆ ಸೆಕ್ಷನ್ ಕರ್ಫ್ಯೂ ಕಾಮನ್ ಎಂಬಂತ ಅಭಿಪ್ರಾಯಗಳನ್ನು ಎದುರಾಳಿ ಅಭ್ಯರ್ಥಿಗಳು ಬಿತ್ತುತ್ತಿರುವುದರಿಂದ ಇದು ಚೆನ್ನಬಸಪ್ಪರಿಗೆ ಸೆಟ್ ಬ್ಯಾಕ್ ಆಗುತ್ತಾ..ಅಥವಾ ಹಿಂದುತ್ವದ ಅಜೆಂಡಾವೇ ವರದಾನವಾಗುತ್ತಾ ಎಂಬುದು ಕುತೂಹಲ ಮೂಡಿಸಿದೆ. 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 



ಹೆಚ್​ಸಿ ಯೋಗೇಶ್​ಗೆ ಲಾಭ..ನಷ್ಟ!

ಇನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹೆಚ್.ಸಿ ಯೋಗೇಶ್ ಗೆ ಪಕ್ಷದಲ್ಲಿಯೇ ಒಳಪೆಟ್ಟುಗಳು ಬಿದ್ದರೂ ಅಚ್ಚರಿಯಿಲ್ಲ. ನಗರ ಕಾಂಗ್ರೆಸ್ ಮುಖಂಡರ ವಿಶ್ವಾಸ ಗಳಿಸಿಕೊಂಡು ಯೋಗೇಶ್ ಮತದಾರರ ಮನೆ ಬಾಗಿಲು ತಟ್ಟಿದರೆ, ಇವರಿಗೆ ಚುನಾವಣೆ ಪ್ಲಸ್ ಆಗಬಹುದು. ಇಲ್ಲವಾದರೆ ಅದು ಕೂಡ ಮುಳುವಾಗಬಹುದು. ಸಧ್ಯಕ್ಕೆ ಶಿವಮೊಗ್ಗ ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.




Malenadutoday.com Social media