ಬಿಜೆಪಿ ಪರ ಅಧಿಕಾರಿಗಳೇ ಮೊದಲ ಟಾರ್ಗೆಟ್! ಸಂಸದರಿಗೆ ಸಹಕರಿಸುವ ಅಧಿಕಾರಿಗಳಿಗೆ ವರ್ಗಾವಣೆ ಎಂದ ಬೇಳೂರು ಗೋಪಾಲಕೃಷ್ಣ!
Pro-BJP officials are the first target! Belur Gopalakrishna says transfer to officials assisting MPs
KARNATAKA NEWS/ ONLINE / Malenadu today/ Jun 3, 2023 SHIVAMOGGA NEWS
ಶಿವಮೊಗ್ಗ ನಗರದಲ್ಲಿ ನಡೆದ ನೂತನ ಸಚಿವ ಮಧು ಬಂಗಾರಪ್ಪರಿಗೆ ಸ್ವಾಗತ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಜಿಲ್ಲೆಯಲ್ಲಿ
ಜಿಲ್ಲೆಯಲ್ಲಿನ ಅಧಿಕಾರಿಗಳ ಪೈಕಿ ಕೆಲವರು ಬಿಜೆಪಿ ಮನಸ್ಥಿತಿಯವರು ಇದ್ದಾರೆ, ಅಂತವರನ್ನ ಕಿತ್ತುಹಾಕಬೇಕಿದೆ ಎಂದರು. ಅಲ್ಲದೆ, ಜಿಲ್ಲೆಯಲ್ಲಿ ಸಂಸದರು ಹೇಳಿದ ಹಾಗೆ ಕೇಳುವ ಅವರಿಗೆ ಸಹಕಾರ ನೀಡುವ ಅಧಿಕಾರಿಗಳಿದ್ದು, ಈ ಹಿಂದೆ ಹಲವರು ಅವರ ಚೇಲಾಗಳ ರೀತಿಯಲ್ಲಿ ಕೆಲಸ ಮಾಡಿದ ಉದಾಹರಣೆಯಿದೆ, ಅಂತಹವರನ್ನ ವರ್ಗಾವಣೆ ಮಾಡಬೇಕಿದೆ ಎಂದರು.
ಆರ್ಎಂ ಮಂಜುನಾಥ್ ಗೌಡರಿಗೆ ಕೆಪಿಸಿಸಿಯಿಂದ ಸಿಕ್ತು ಮಹತ್ತರ ಜವಾಬ್ದಾರಿ!
ದರಿದ್ರ ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕಿದ್ದಕ್ಕೆ ಸಂತಸವಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಸವಾಲುಗಳಿವೆ. ಅವುಗಳನ್ನ ಸಮರ್ಥವಾಗಿ ಎದುರಿಸಲು, ನಾವು ಮಧು ಬಂಗಾರಪ್ಪರವರ ಜೊತೆಗಿದ್ದೇವೆ ಎಂದು ಸಹಮತ ವ್ಯಕ್ತಪಡಿಸಿದರು. ಅಲ್ಲದೆ ಮಧು ಬಂಗಾರಪ್ಪನವರು ಮಂತ್ರಿಯಾಗಿರುವುದು ತಮಗೆ ಸಂತಸ ತಂದಿದೆ ಎಂದರು.
ಮಂಗಳೂರು ಏರ್ಪೋರ್ಟ್ನಲ್ಲಿ ಸ್ಫೋಟಕ ಇಟ್ಟಿದ್ದ ಆದಿತ್ಯರಾವ್ ವಿರುದ್ಧ ಶಿವಮೊಗ್ಗಲ್ಲಿ ಕೇಸ್ ! ಕಾರಣವೇನು?
ರಾಜ್ಯದ ಜನರು ಕಾಂಗ್ರೆಸ್ ಗೆ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ, 136 ಸ್ಥಾನವನ್ನು ನೀಡಿದ್ದು ಯಡಿಯೂರಪ್ಪ ಮುಖ್ಯಮಂತ್ರಿ ಯಾಗುತ್ತಾರೆ ಎಂದರೂ ಸಹ ಇಷ್ಟೊಂದು ಬಹುಮತವನ್ನು ನೀಡುತ್ತಿರಲಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯನ್ನು ವ್ಯಂಗ್ಯವಾಡಿದ್ರಷ್ಟೆ ಅಲ್ಲದೆ, ಕಾಂಗ್ರೆಸ್ನ ಸಾಮರ್ಥ್ಯವನ್ನು ಶ್ಲಾಘಿಸಿದರು.
ಮೊಬೈಲ್ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!
ಸಚಿವರಾದ ಬಳಿಕ ಶಿವಮೊಗ್ಗಕ್ಕೆ ಮೊದಲ ಭೇಟಿಕೊಟ್ಟ ಮಧು ಬಂಗಾರಪ್ಪ ಹೇಳಿದ್ದೇನು ಗೊತ್ತಾ?
ಶಿವಮೊಗ್ಗದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಸ್ವಾಗತ ಹಾಗೂ ಅಭಿನಂದನೆಯನ್ನ ಸ್ವೀಕರಿಸಿದ ಮಾತನಾಡಿದ ನೂತನ ಸಚಿವ ಮಧು ಬಂಗಾರಪ್ಪ, ಸಚಿವ ಸ್ಥಾನ ದೊರಕಿದ್ದಕ್ಕೆ ಶಿವಮೊಗ್ಗ ಜಿಲ್ಲೆಯ ಜನರಿಗೆ ಧನ್ಯವಾದ ತಿಳಿಸಿದ್ಧಾರೆ.
ವೃದ್ಧನ ಕಿಡ್ನ್ಯಾಪ್ ಕೇಸ್! 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಅಪಹರಣಕಾರರು 24 ಗಂಟೆಯಲ್ಲಿ ಸೆರೆ
ಜಿಲ್ಲೆಯ ಜನರ ಜೊತೆಗಿರುತ್ತೇನೆ
ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿದ್ದ ವೇಳೆ ನನಗೆ ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಅಭಿಮಾನ ತೊರಿದ್ದರು ಅದಕ್ಕೆ ನಾನು ಅಭಾರಿಯಾಗಿದ್ದೇನೆ, ಮುಂದಿನ ಎಲ್ಲಾ ಚುನಾವಣೆಗಳ ಜವಾಬ್ದಾರಿ ಯನ್ನು ಹೊರುತ್ತೇನೆ ಹಾಗೂ ನಾನು ಜಿಲ್ಲೆಯ ಜನರ ಜೊತೆ ಇರುತ್ತೇನೆ ಎಂದರು,
Madhubangarappa/ ನೂತನ ಸಚಿವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಕಳ್ಳರ ಕಾಟ! ಕಾಂಗ್ರೆಸ್ ಮುಖಂಡರ ಮೊಬೈಲ್ ! 15 ಸಾವಿರ ದುಡ್ಡು ಕಳ್ಳತನ
ಸಚಿವ ಸ್ಥಾನದ ಸವಾಲು
ಈ ಸಚಿವ ಸ್ಥಾನ ನನಗೆ ಒಂದು ಸವಾಲು ಎಂದು ಮಧುಬಂಗಾರಪ್ಪ ಒಂದು ಕೋಟಿ ಕ್ಕಿಂತ ಹೆಚ್ಚು ಮಕ್ಕಳು ಹಾಗೂ ಮೂರುವರೆ ಲಕ್ಷಕ್ಕಿಂತ ಹೆಚ್ಚು ಶಿಕ್ಷಕರು ನಮ್ಮ ವ್ಯಾಪ್ತಿಗೆ ಬರುತ್ತಾರೆ. ಹಾಗಾಗಿ ಇದೊಂದು ಗುರುತರ ಜವಾಬ್ದಾರಿಯುಳ್ಳ ಸಚಿವ ಸ್ಥಾನ ಎಂದರು.
ಎಲ್ಲೂ ಇಲ್ಲದ ಕಾರ್ಯಕ್ರಮ
ಇನ್ನೂ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ ಯಾವ ರಾಜ್ಯದಲ್ಲು ಇತಂಹ ಕಾರ್ಯಕ್ರಮ ಕೊಟ್ಟಿಲ್ಲ.ಬಿಜೆಪಿಯವರ ಬಾಯಿಮುಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಬಿಜೆಪಿಯವರು 17 ಲಕ್ಷ ಕೋಟಿಯನ್ನು ಶ್ರೀಮಂತರಿಗೆ ಸಾಲ ಮನ್ನ ಮಾಡಿದ್ದಾರೆ. ಸಾಲ ಮನ್ನ ಮಾಡದೇ ಇದ್ದರೆ ಎಲ್ಕಾ ರಾಜ್ಯಗಳಿಗೆ ತಲಾ 50 ಸಾವಿರ ಕೋಟಿ ಕೂಡಬಹುದಾಗಿತ್ತು ಎಂದು ಟೀಕಿಸಿದ್ರು.
ಎತ್ತು ಸಾಗಿಸ್ತಿದ್ದವನ ಮೇಲೆ ಹಲ್ಲೆ ಆರೋಪಕ್ಕೆ ದಾಖಲಾಯ್ತು 9 ಮಂದಿ ವಿರುದ್ಧ ಕೇಸ್! ಹೆಚ್ಚುವರಿಯಾಗಿ ಪೊಲೀಸರೇ ಹಾಕಿದ್ರು ಸುಮೋಟೋ ಕೇಸ್
ಶಿರಾಳಕೊಪ್ಪ ಪೊಲೀಸ್ ಸ್ಠೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರ ಸಂಬಂಧ ಸುಮೊಟೋ ಕೇಸ್ ಹಾಗೂ ಹಲ್ಲೆ ಪ್ರಕರಣದ ಕೇಸ್ ದಾಖಲಾಗಿದೆ. ಎತ್ತುಗಳನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ತಡೆದು ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪದ ಅಡಿಯಲ್ಲಿ9 ಮಂದಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಇನ್ನೂ ಪ್ರಾಣಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿಯಲ್ಲಿ ವಾಹನದ ಚಾಲಕನ ವಿರುದ್ಧವೂ ಕೇಸ್ ದಾಖಲಾಗಿದೆ.
odisha balasore train accident/ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕಾಫಿನಾಡಿನ 110 ಮಂದಿ ಸುರಕ್ಷಿತ!
ನಡೆದಿದ್ಧೇನು?
ಇಲ್ಲಿ ಮಂಚಿಕೊಪ್ಪ ಗ್ರಾಮದ ಬಳಿ ಶುಕ್ರವಾರ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ವಾಹನವೊಂದನ್ನ ಗುಂಪೊಂದು ತಡೆದು ವಿಚಾರಿಸಿದೆ. ಆ ಸಂದರ್ಭದಲ್ಲಿ ದಾದಾಪೀರ್ ಎಂಬುವವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು, ಇನ್ನೊಂದೆಡೆ ಅಕ್ರಮವಾಗಿ ಎತ್ತುಗಳನ್ನ ಕೊಂಡೊಯ್ದ ಆರೋಪ ಸಂಬಂಧವೂ ಸುಮೊಟೊ ಕೇಸ್ ದಾಖಲಾಗಿದೆ.
shimoga crime news today live/ ಕಾಡಿನಲ್ಲಿ ಮಹಿಳೆಯ ಶವ! ಹೊಲದಲ್ಲಿ ಅರೆಬರೆ ಸುಟ್ಟ ಪುರಷನ ಶವ ಪತ್ತೆ! ಅನುಮಾನ ಮೂಡಿಸಿದ ಎರಡು ಸಾವು!?
ವೃದ್ಧನ ಕಿಡ್ನ್ಯಾಪ್ ಕೇಸ್! 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಅಪಹರಣಕಾರರು 24 ಗಂಟೆಯಲ್ಲಿ ಸೆರೆ
ದಾವಣಗೆರೆ/ ವೃದ್ದರೊಬ್ಬರ ಕಿಡ್ನ್ಯಾಪ್ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಬರೋಬ್ಬರಿ 20 ಲಕ್ಷ ರೂಪಾಯಿ ನೀಡುವಂತೆ ಈ ಪ್ರಕರಣದಲ್ಲಿ ಅಪಹರಣ ಕಾರರು ಬೇಡಿಕೆಯಿಟ್ಟಿದ್ದರು. ಒಟ್ಟಾರೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೆರೆಮನೆಯ ವ್ಯಕ್ತಿಯಿಂದ ಅಶ್ಲೀಲ ವರ್ತನೆ! ಕಿರುಕುಳ ಆರೋಪ! ಎಫ್ಐಆರ್ ಹಾಕಿಸಲು ತಡರಾತ್ರಿ 1 ಗಂಟೆಯವರೆಗೂ ಪುಟ್ಟು ಮಗುವಿನ ಜೊತೆ ಸ್ಟೇಷನ್ನಲ್ಲಿಯೇ ಕಾದ ಮಹಿಳೆ!
ಕೆಟಿಜೆ ನಗರ ಪೊಲೀಸರು ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ದಾವಣಗೆರೆಯ ನಿಟುವಳ್ಳಿಯ ಸಾಗರ್, ನಂದಿಹಳ್ಳಿ ಯುವರಾಜ, ಸುಂದರ್ ನಾಯ್ಕ, ಚೇತನ್ ಕುಮಾರ, ಸೇರಿದಂತೆ ಐವರನ್ನ ಬಂಧಿಸಿದ್ದಾರೆ.
292 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ! ಶಿವಮೊಗ್ಗ ಜಿಲ್ಲೆಯ ಸ್ಟೇಷನ್ಗಳಿಗೆ ಯಾರೀಗ ಇನ್ಸ್ಪೆಕ್ಟರ್ ! ವಿವರ ಇಲ್ಲಿದೆ
ನಡೆದಿದ್ದೇನು?.
ಗುರುವಾರ ಮಧ್ಯಾಹ್ನದ ಸಮಯದಲ್ಲಿ ಅಂಬಿಕಾ ನಗರದಲ್ಲಿ ಲೊಕೇಶ್ ಎಂಬ 60 ವರ್ಷದ ವೃದ್ಧನನ್ನು ದುಷ್ಕರ್ಮಿಗಳು ಅಪಹರಣಮಾಡಿದ್ದರು.ಈ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಕರೆ ಬಂದ ಮೊಬೈಲ್ ಹಾಗೂ ಲೋಕಲ್ ಪೊಲೀಸಿಂಗ್ ಮೂಲಕ ಆರೋಪಿಗಳನ್ನ ಬಂಧಿಸಿದ್ಧಾರೆ.