KARNATAKA NEWS/ ONLINE / Malenadu today/ Jun 2, 2023 SHIVAMOGGA NEWS
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕವಿಟ್ಟ ಪ್ರಕರಣದ ಆರೋಪಿ ಆದಿತ್ಯರಾವ್ ವಿರುದ್ಧ ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.
ನಡೆದಿದ್ದೇನು?
ಕಳೆದ 31 ನೇ ತಾರೀಖು ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಕೈದಿಗಳು ಹಾಜರಾಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆದಿತ್ಯರಾವ್ ಬಂದಿದ್ದಾನೆ. ಮಂಗಳೂರು ವಿಮಾನ ನಿಲ್ದಾಣದ ಬಳಿಯಲ್ಲಿ ಸ್ಪೋಟಕವಿಟ್ಟು ದೊಡ್ಡ ಮಟ್ಟಿಗೆ ಸುದ್ದಿಯಾಗಿದ್ದ ಆದಿತ್ಯರಾವ್ನನ್ನ ಮಂಗಳೂರು ಪೊಲೀಸರು ಬಂಧಿಸಿದ್ದರು.
ಇದನ್ನು ಸಹ ಓದಿ : ಚೀಲೂರು ಡಬ್ಬಲ್ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?
ಆನಂತರ ಆತನನ್ನ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಆತ ತನ್ನ ಮೇಲಿನ ಪ್ರಕರಣ ಸಂಬಂಧ ಕೋರ್ಟ್ ಹಿಯರಿಂಗ್ ಇದೆಯೇ ಎಂದು ಕೇಳಲು ಜೈಲಿನಲ್ಲಿರುವ ವಿಸಿ ಕೊಠಡಿಗೆ ಬಂದಿದ್ದಾನೆ.
ಮೊಬೈಲ್ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!
ಅಲ್ಲಿ ತನ್ನಪ್ರಕರಣ ಸಂಬಂಧ ವಿಚಾರಣೆ ಇದೆಯೇ ಎಂದು ಸಿಬ್ಬಂದಿಯನ್ನ ವಿಚಾರಿಸಿದ್ದಾನೆ. ಇದಕ್ಕೆ ಸಿಬ್ಬಂದಿ ಆತನಿಗೆ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಿದ್ದರು. ಈ ಮಧ್ಯೆ ಆತನಿಗೆ ಏನು ಆಯಿತೋ? ಅಲ್ಲಿ ಏನು ನಡೆಯಿತೋ? ಸ್ಪಷ್ಟವಾಗಿಲ್ಲ.
ಆರ್ಎಂ ಮಂಜುನಾಥ್ ಗೌಡರಿಗೆ ಕೆಪಿಸಿಸಿಯಿಂದ ಸಿಕ್ತು ಮಹತ್ತರ ಜವಾಬ್ದಾರಿ!
ಆದರೆ ಆದಿತ್ಯರಾವ್ ವಿಸಿ ಕೊಠಡಿಯಲ್ಲಿದ್ದ 2 ಟಿವಿಗಳನ್ನ ಕಲ್ಲಿನಿಂದ ಒಡೆದು ಹಾಕಿದ್ಧಾನೆ. ಈ ವೇಳೆ ಈತನನ್ನ ಹಿಡಿಯಲು ಬಂದ ಸಿಬ್ಬಂಧಿಯನ್ನ ತಳ್ಳಾಡಿದ್ಧಾನೆ. ನಂತರ ಹೆಚ್ಚುವರಿ ಸಿಬ್ಬಂದಿ ಆದಿತ್ಯರಾವ್ನನ್ನ ಹಿಡಿದು, ಸಹಾಯಕ ಜೈಲರ್ ವಶಕ್ಕೆ ಒಪ್ಪಿಸಿದ್ದಾರೆ.
ಸದ್ಯ ಸರ್ಕಾರಿ ಆಸ್ತಿ ಹಾಳುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ, ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದಾರೆ.
