ನೆರೆಮನೆಯ ವ್ಯಕ್ತಿಯಿಂದ ಅಶ್ಲೀಲ ವರ್ತನೆ! ಕಿರುಕುಳ ಆರೋಪ! ಎಫ್​ಐಆರ್ ಹಾಕಿಸಲು ತಡರಾತ್ರಿ 1 ಗಂಟೆಯವರೆಗೂ ಪುಟ್ಟು ಮಗುವಿನ ಜೊತೆ ಸ್ಟೇಷನ್​ನಲ್ಲಿಯೇ ಕಾದ ಮಹಿಳೆ!

Malenadu Today

KARNATAKA NEWS/ ONLINE / Malenadu today/ Jun 2, 2023 SHIVAMOGGA NEWS

ಚಿಕ್ಕಮಗಳೂರು : ಕೊಟ್ಟ ದೂರು ದಾಖಲಿಸುತ್ತಿಲ್ಲ ಎಂದು ಪೊಲೀಸ್ ಸ್ಟೇಷನ್​ನಲ್ಲಿಯೇ ರಾತ್ರಿ ಒಂದು ಗಂಟೆಯುವರೆಗೂ ನಾಲ್ಕು ವರ್ಷದ ಮಗು ಜೊತೆ ಮಹಿಳೆಯೊಬ್ಬರು ಪೊಲೀಸ್ ಸ್ಟೇಷನ್​ನಲ್ಲಿಯೇ ಕಾದಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ಇನ್​​ಸ್ಪೆಕ್ಟರ್ ಕಚೇರಿಯಲ್ಲಿ ನಡೆದಿದೆ. 

ಶಿವಮೊಗ್ಗದಲ್ಲಿ ಮೊಬೈಲ್​ಗಳ ಕಳ್ಳತನ! ಮೂವರನ್ನ ಬಂಧಿಸಿದ ಪೊಲೀಸರು!

ಸಂಜೆ ಆರು ಗಂಟೆಯ ನಂತ ಸ್ಟೇಷನ್​ಗಳಲ್ಲಿ ಯಾವುದೇ ಮಹಿಳೆಯರನ್ನಾಗಲಿ, ಹಿರಿಯ ವಯಸ್ಸಿನವರನ್ನಾಗಲಿ ಇಟ್ಟುಕೊಳ್ಳುವುದಿಲ್ಲ, ಅವರ ದೂರು ಇದ್ದರೇ ಆಲಿಸಿ, ಇತ್ಯರ್ಥದ ಮಾತುಗಳನ್ನ ಆಡಿ ಕಳುಹಿಸಲಾಗುತ್ತದೆ. ಆದರೆ ಕಳಸ ಸ್ಟೇಷನ್​ನಲ್ಲಿ ದೂರು ಕೊಡಲು ಬಂದಿದ್ದ ಮಹಿಳೆಯು ತನ್ನ ಮಗುವಿಗೆ ಸ್ಟೇಷನ್​ನಲ್ಲಿಯೇ ಊಟ ಮಾಡಿಸಿ, ಬೆಂಚು ಕಾಯುತ್ತಿರುವ ದೃಶ್ಯವೂ ವಿಡಿಯೋ ರೆಕಾರ್ಡ್​ ಆಗಿದೆ. 

ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ! ಹೃದಯ ಕಲಕುತ್ತಿದೆ ಭೀಕರ ಘಟನೆ

ಇನ್ನೂ ಮಹಿಳೆಯು, ನೆರೆಮನೆಯವರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ದೂರುಕೊಡಲು ಬಂದಿದ್ದು, ಎಫ್ಐಆರ್​ ಮಾಡದಿದ್ದಕ್ಕೆ , ಎಫ್​ಐಆರ್​ ದಾಖಲಾಗುವರೆಗೂ ಸ್ಟೇಷನ್​ನಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಅಲ್ಲದೆ ಈ ವಿಚಾರದಲ್ಲಿ ಪೊಲೀಸರು ಎಫ್​ಐಆರ್ ದಾಖಲಿಸಲು ನಿರ್ಲಕ್ಷ್ಯ ತೋರಿದ್ಧಾರೆ ಎಂದು ಆರೋಪಿಸಲಾಗಿದೆ. 

ನಡೆದಿದ್ಧೆನು? 

ಸಂತ್ರಸ್ತ ಮಹಿಳೆಯು ಆರೋಪಿಸುವ ಪ್ರಕಾರ, ಕುದುರೆ ಮುಖ ವ್ಯಾಪ್ತಿಯ ಊರೊಂದರಲ್ಲಿ ಮಹಿಳೆಯ ಪಕ್ಕದ ಮನೆಯವರು ಈಕೆಗೆ ಹಾಗೂ ಇವರ ಪತಿಗೆ ಕಿರುಕುಳ ನೀಡಿದ್ಧಾರೆ ಎನ್ನಲಾಗಿದೆ. ಮನೆಯ ಬಳಿ ಬಂದು ಹಲ್ಲೆ ಮಾಡಲು ಮುಂದಾಗಿದ್ದಷ್ಟೆ ಅಲ್ಲದೆ, ಕಿಟಕಿ ಮೂಲಕ ಕೆಟ್ಟದಾಗಿ ವರ್ತಿಸಿ, ಅಶ್ಲೀಲವಾಗಿ ಮಾತನಾಡಿದ ಬಗ್ಗೆ ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಜೀವ ಭಯವಿದೆ ಎಂದು ದೂರು ಕೊಟ್ಟಿದ್ದರೇ, ಅದನ್ನ ಎಫ್​ಐಆರ್ ಮಾಡಿಸಲು ಹಠ ಹಿಡಿದು ತಡರಾತ್ರಿಯವರೆಗೂ ಸ್ಟೇಷನ್​ನಲ್ಲಿಯೇ ಕಾದು ಕುಳಿತುಕೊಳ್ಳಬೇಕಾಯ್ತು ಎಂಬುದು ಮಹಿಳೆಯ ಆರೋಪ. 

ಮಂಗಳೂರು ಏರ್​ಪೋರ್ಟ್​ನಲ್ಲಿ ಸ್ಫೋಟಕ ಇಟ್ಟಿದ್ದ ಆದಿತ್ಯರಾವ್ ವಿರುದ್ಧ ಶಿವಮೊಗ್ಗಲ್ಲಿ ಕೇಸ್ ! ಕಾರಣವೇನು?

ಪ್ರಕರಣದಲ್ಲಿ ನಡೆದಿರುವ ಘಟನೆಗಳು ಪರಿಪೂರ್ಣವಾಗಿಲ್ಲವಾದರೂ, ಸಂತ್ರಸ್ತ ಮಹಿಳೆಯ ಕಾಯುವಿಕೆ ಹಾಗೂ ಆಕೆಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಚಿಕ್ಕಮಗಳೂರು ಎಸ್​ಪಿಯವರ ಬಳಿಗೂ ವಿಚಾರ ತಲುಪಿದೆ ಎನ್ನಲಾಗುತ್ತಿದೆ. 

ಅಡಕೆ ದರ ಹೆಚ್ಚುತ್ತಿದೆ! ಕ್ವಿಂಟಾಲ್​ 50 ಸಾವಿರ ದಾಟಿದ ಧಾರಣೆ!

ಶಿವಮೊಗ್ಗ ಅಡಕೆ ಧಾರಣೆಯಲ್ಲಿ ಉತ್ತಮ ಏರಿಕೆ ಕಾಣಿಸಿದೆ. ರಾಶಿ ಇಡಿ ಮಾದರಿ ಅಡಕೆ ಧಾರಣೆಯು ಗುರುವಾರ ಪ್ರತಿ ಕ್ವಿಂಟಾಲ್‌ಗೆ 50 ಸಾವಿರ ರೂಪಾಯಿ ದಾಟಿದೆ. 

 

ಕಳೆದ 2022ರ ಅಕ್ಟೋಬರ್ ವೇಳೆಯಲ್ಲಿ ರಾಶಿಇಡಿ ಅಡಕೆ ಧಾರಣೆಯು ಪ್ರತಿ ಕ್ವಿಂಟಾಲ್‌ಗೆ 55 ಸಾವಿರ ರೂಪಾಯಿ ತಲುಪಿತ್ತು, ಇದು 60 ಸಾವಿರ ರೂಪಾಯಿ ಮುಟ್ಟುತ್ತದೆ ಎಂದೇ ಊಹಿಸಲಾಗಿತ್ತು. ಇದರಿಂದ ರೈತರು ತಮ್ಮಲ್ಲಿನ ಅಡಕೆ ಹಾಗೆಯೇ ಉಳಿಸಿಕೊ೦ಡಿದ್ದರು. 

ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

ಆದರೆ ದರ ಕುಸಿದಿದ್ದರಿಂದ 42-45 ಸಾವಿರ ರೂಪಾಯಿಗೆ ಅಡಕೆ ಮಾರಿದ್ದರು. ಇದೀಗ ಕಳೆದ ಐದಾರು ದಿನದಿಂದ ರಾಶಿಇಡಿ ಮಾದರಿಯ ಅಡಕೆ ಬೆಲೆ ಏರುತ್ತಿದ್ದು ಗುರುವಾರ 50 ಸಾವಿರ ರೂಪಾಯಿ .ದಾಟಿದೆ. 

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮಾದರಿಯ ಅಡಕೆ ಪ್ರತಿಕ್ವಿಂಟಾಲ್‌ ಗೆ50,000–82,503 ರೂಪಾಯಿ, ಬೆಟ್ಟೆ ಮಾದರಿಯ ಅಡಕೆ 46000 ದಿಂದ 54699 ರೂಪಾಯಿ ರಾಶಿಇಡಿ ಮಾದರಿಯ ಅಡಕೆ 33419-50,099 ರೂಪಾಯಿನಷ್ಟಿದೆ ಮತ್ತು ಗೊರಬಲು 18000 -36300 ರೂಪಾಯಿನಷ್ಟು ದಾಖಲಾಗಿತ್ತು. 

ಮೊಬೈಲ್​ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್​ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!

ಸೀದಾ ಕೆರೆಗೆ ಉರುಳಿದ ಬಿದ್ದ ನಾಟಾ ಸಾಗಿಸುತ್ತಿದ್ದ ಲಾರಿ

ನಾಟಾ ತುಂಬಿದ ಲಾರಿಯೊಂದು ಕೆರೆಗೆ ಉರುಳಿಬಿದ್ದ ಘಟನೆ ಸೊರಬ ತಾಲ್ಲೂಕಿನ ದೂಗೂರು ಸಮೀಪ ಸಂಭವಿಸಿದೆ.  

ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿವೆ. ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ದೂಗೂರು ರಸ್ತೆಯಲ್ಲಿ ಓಡಾಡುತ್ತಿದ್ದವರು, ಘಟನೆ ಬೆನ್ನಲ್ಲೆ ಚಾಲಕನನ್ನ ರಕ್ಷಿಸಿದ್ದಾರೆ. ಆತನನ್ನ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ನಡೆದಿದ್ದೇಗೆ ಘಟನೆ? 

ಸೊರಬ ಕಡೆಯಿಂದ ಸಾಗರದತ್ತ ನಾಟಾ ತುಂಬಿಕೊಂಡು ಲಾರಿ ಸಾಗುತ್ತಿತ್ತು. ಉಳುವಿ- ದೂಗೂರು ನಡುವೆ ಇರುವ ಕೆರೆಯ ಬಳಿಯಲ್ಲಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

 

 

Share This Article