ಶಿವಮೊಗ್ಗ | ದುಮ್ಮಳ್ಳಿಯಲ್ಲಿ ಓರ್ವ ಯುವಕನ ಕೊಲೆ | ನಡೆದಿದ್ದೇನು?

Shimoga | Youth m in Dummalli | What happened? Shivamogga News, Malnad Today Crime Report, Today Report, BJP Worker, Dummalli,

ಶಿವಮೊಗ್ಗ | ದುಮ್ಮಳ್ಳಿಯಲ್ಲಿ ಓರ್ವ ಯುವಕನ ಕೊಲೆ | ನಡೆದಿದ್ದೇನು?
Shivamogga News, Malnad Today Crime Report, Today Report, BJP Worker, Dummalli,

SHIVAMOGGA | MALENADUTODAY NEWS | May 13, 2024  ಮಲೆನಾಡು ಟುಡೆ

ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಜಮೀನು ವಿಚಾರಕ್ಕೆ ಓರ್ವನನ್ನ ಕೊಲೆ ಮಾಡಲಾಗಿದೆ. ಇಲ್ಲಿನ ನಿವಾಸಿ ಸತೀಶ್‌ ನಾಯ್ಕ ಕೊಲೆಯಾದ ಯುವಕ. ಘಟನೆ ಬೆನ್ನಲ್ಲೆ ‍ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ದಾರೆ. 

ಶಿವಮೊಗ್ಗ ದುಮ್ಮಳ್ಳಿಯಲ್ಲಿ  ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಶೇಷನಾಯ್ಕ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅವರ ಪುತ್ರ ಮೃತ ಸತೀಶ್‌ ನಾಯ್ಕ, ವಯಸ್ಸು 28. 

ಶೇಷನಾಯ್ಕ ಹಾಗೂ ಮಂಜನಾಯ್ಕ ಎಂಬವರು ಅಕ್ಕಪಕ್ಕದಲ್ಲಿ ಜಮೀನು ಹೊಂದಿದವರು. ಇವರ ನಡುವೆ ಜಮೀನಿನ ವಿಚಾರದಲ್ಲಿ ವ್ಯಾಜ್ಯವಿತ್ತು. ಈ ವಿಚಾರ ಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತ್ತು. ಕೋರ್ಟ್‌ನಲ್ಲಿ ಜಮೀನು ಶೇಷನಾಯ್ಕನ ಪರವಾಗಿ ಆಗುವ ಸಾಧ್ಯತೆ ಇತ್ತು ಎನ್ನಲಾಗಿದೆ. 

ಈ ಕಾರಣಕ್ಕೆ ಅಸಮಾಧಾನಗೊಂಡಿದ್ದ ಮಂಜಾನಾಯ್ಕನ ಪುತ್ರ ಅಖಿಲೇಶ್‌ ನಾಯ್ಕ ಇವತ್ತು ಜಮೀನಿನಲ್ಲಿ ಸತೀಶ್‌ ಕೆಲಸ ಮಾಡಲು ಬಂದಿದ್ದ ವೇಳೆ ಅಟ್ಯಾಕ್‌ ಮಾಡಿದ್ದಾರೆ. ಕನ್ಲಿಯಿಂದ ಕೊಚ್ಚಿ ಸತೀಶ್‌ನನ್ನ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. 

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಮಿಥುನ್‌ ಕುಮಾರ್‌ ಪ್ರಕರಣ ಸಂಬಂಧ ಅಖಿಲೇಶ್‌ ನಾಯ್ಕನನ್ನ ಬಂಧಿಸಲಾಗಿದೆ. ಸತೀಶ್‌ ನಾಯ್ಕ  ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಜಮೀನು ವಿಚಾರಕ್ಕೆ ಗಲಾಟೆ ತೆಗೆದು ಅಖಿಲೇಶ್‌ ಹಾಗೂ ಆತನ ಕಡೆಯವರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಎಂದಿದ್ದಾರೆ