ನೆಟ್‌ವರ್ಕ್‌ಗಾಗಿ ಟವರ್‌ ಏರಿದ ಗ್ರಾಮಸ್ಥರು | ಸಿಗ್ನಲ್‌ ಕಡ್ಡಿ ಸಿಗದೇ ಹಿಡಿಶಾಪ |

Villagers in the Malenadu region are protesting the lack of network connectivity despite the presence of BSNL towers in the dense forest area. The villagers climbed the towers and expressed their frustration over the BSNL and Forest Department's dispute.  villagers also accused BSNL of not providing proper network service despite being given free land for the towers.

ನೆಟ್‌ವರ್ಕ್‌ಗಾಗಿ ಟವರ್‌ ಏರಿದ ಗ್ರಾಮಸ್ಥರು | ಸಿಗ್ನಲ್‌ ಕಡ್ಡಿ ಸಿಗದೇ ಹಿಡಿಶಾಪ |
BSNL towers, Malenadu region

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ 

ಮಲೆನಾಡಿನ ದಟ್ಟ ಅರಣ್ಯ ಪ್ರದೇಶದಲ್ಲಿ ಬಿ.ಎಸ್.ಎನ್.ಎಲ್ ಟವರ್ ಗಳಿವೆ. ಆದರೆ ಜನರಿಗೆ ನೆಟ್‌ವರ್ಕ್‌ ಸಿಗುತ್ತಿಲ್ಲ. ಬಿ.ಎಸ್ ಎನ್.ಎಲ್ ಮತ್ತು ಅರಣ್ಯ ಇಲಾಖೆಯ ಜಟಾಪಟಿಯಲ್ಲಿ ಕೆಲವು ಟವರ್ ಗಳು ಆಕ್ಟಿವ್ ಆಗಿಲ್ಲ. ಇದರಿಂದಾಗಿ ಬೇಸತ್ತ  ಮಲೆನಾಡಿನ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ. 

ನೆಟ್‌ವರ್ಕ್‌ ಟವರ್‌ ಇಲ್ಲದೆ ನಾನಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದ ಹೊಸನಗರ ತಾಲ್ಲೂಕು ಮತ್ತಿಮನೆ ಗ್ರಾಮ ಪಂಚಾಯಿತಿಯ ನಗರ, ಸಂಪೇಕಟ್ಟೆ, ನಿಟ್ಟೂರು ಭಾಗದ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ. 

ಕಟ್ಟಿನ ಹೊಳೆಯಲ್ಲಿ ಟವರ್ ಇದ್ದರೂ ಇನ್ನೂ ಸಹ ಕನೆಕ್ಷನ್ ನೀಡಿಲ್ಲ.ಮತ್ತಿಕೆರೆಯಲ್ಲಿ ಟವರ್ ಆಗಿದ್ದರೂ ಸೇವೆಗೆ ಲಭ್ಯವಾಗುತ್ತಿಲ್ಲ. ಟವರ್ ಅರಣ್ಯ ಪ್ರದೇಶದಲ್ಲಿರುವುದರಿಂದ ಅರಣ್ಯ ಇಲಾಖೆ ಮತ್ತು ಬಿ.ಎಸ್ ಎನ್ ಎಲ್ ನಡುವೆ ಜಟಾಪಟಿ ನಡೆಯುತ್ತಿದೆ. ವಿದ್ಯುತ್ ಕೈ ಕೊಟ್ಟರೆ ಜನರೇಟರ್ ವ್ಯವಸ್ಥೆಯೂ ಲಭ್ಯವಿರುವುದಿಲ್ಲ. ಇದರಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ. ತಕ್ಷಣ ವ್ಯವಸ್ಥೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನು ಪಂಚಾಯಿತಿ ತೀರ್ಮಾನದಂತೆ ಬಿ.ಎಸ್.ಎನ್.ಎಲ್ ಟವರ್ ಗೆ ಯಾವುದೇ ನೆಲದ ಬಾಡಿಗೆಯನ್ನು ಪಡೆಯಲಾಗುತ್ತಿಲ್ಲ. ಟವರ್ ಹಾಕಿದಿನಿಂದ ಈವರೆಗೂ ಉಚಿತವಾಗಿ ನೀಡಿರುವ ಜಾಗದಲ್ಲಿ ಟವರ್ ಅಳವಡಿಸಿದ್ದರೂ. ಬಿ.ಎಸ್.ಎನ್.ಎಲ್ ನವರು ಗ್ರಾಮಸ್ಥರಿಗೆ ಸರಿಯಾದ ನೆಟ್‌ವರ್ಕ್‌  ಸೇವೆಯನ್ನು ಒದಗಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಟವರ್ ಗಳ ನಿರ್ವಹಣೆಯ ಜವಬ್ದಾರಿಯನ್ನು ಖಾಸಗಿ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರುಗಳು ಟವರ್ ಬಳಿ ಸುಳಿವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 

ಇನ್ನೂ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದರು. ಏನಾದರೂ ಸರಿಯೇ ಕೆಲಸ ಮಾಡಿಕೊಡುವ ಭರವಸೆ ನೀಡಿದರು. ಆದರೆ ಗ್ರಾಮಸ್ಥರು ಜನರೇಟರ್‌ ಮೂಲಕ ನೆಟ್‌ವರ್ಕ್‌ ನಿರಂತವಾಗಿ ಸಿಗುವಂತೆ ಪಟ್ಟು ಹಿಡಿದರು. ಅಂತಿಮವಾಗಿ ಅಧಿಕಾರಿಗಳು ಆರು ದಿನಗಳ ಕಾಲಾವಕಾಶ ಕೇಳಿದ ನಂತರ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು. 