854 ಮರಗಳನ್ನು ಉಳಿಸಿ, ಪಶ್ಚಿಮಘಟ್ಟ ರಕ್ಷಿಸಿ ! ಶಿವಮೊಗ್ಗದಲ್ಲಿ ಮತ್ತೊಂದು ಅಭಿಯಾನ! ಹೆದ್ದಾರಿ ವಿಸ್ತರಣೆಗೆ ವಿರೋಧ

Save 854 trees, save Western Ghats! Another campaign in Shimoga! Opposition to highway expansion

854 ಮರಗಳನ್ನು ಉಳಿಸಿ, ಪಶ್ಚಿಮಘಟ್ಟ ರಕ್ಷಿಸಿ ! ಶಿವಮೊಗ್ಗದಲ್ಲಿ ಮತ್ತೊಂದು ಅಭಿಯಾನ! ಹೆದ್ದಾರಿ ವಿಸ್ತರಣೆಗೆ ವಿರೋಧ
854 ಮರಗಳನ್ನು ಉಳಿಸಿ, ಪಶ್ಚಿಮಘಟ್ಟ ರಕ್ಷಿಸಿ ! ಶಿವಮೊಗ್ಗದಲ್ಲಿ ಮತ್ತೊಂದು ಅಭಿಯಾನ! ಹೆದ್ದಾರಿ ವಿಸ್ತರಣೆಗೆ ವಿರೋಧ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ  ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ- 766 'ಸಿ' ಮಾರ್ಗದ ಇರುವಕ್ಕಿ- ನಾಗೋಡಿ ರಸ್ತೆ ವಿಸ್ತರಣೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊಸನಗರದಲ್ಲಿನ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಮೊನ್ನೆ ಮಂಗಳವಾರ ನಡೆದ ಈ ಕುರಿತು ನಡೆದ ಸಭೆಯಲ್ಲಿ, ಹೈವೆ ವಿಸ್ತರಣೆಗಾಗಿ 854 ಮರಳನ್ನು ಕಡಿಯಲಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಷ್ಟೊಂದು ಪ್ರಮಾಣದ ಮರ ಕಡಿಯಲು ಅನುಮತಿ ಕೇಳಲಾಗಿದೆ. ಆದರೆ ಇಲ್ಲಿ ಕೆಲವೊಂದು ಅನುಮಾನಗಳು ಕಾಡುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ವಿರೋಧದ ಕಾರಣ!

  • ಇರುವಕ್ಕಿಯಿಂದ ಬಟ್ಟೆಮಲ್ಲಪ್ಪ, ಜಯನಗರದಿಂದ ಹೊಸನಗರ, ನಾಗೋಡಿ ಭಾಗದಲ್ಲಿ ಕೆಲ ಕಿಲೋ ಮೀಟರ್ ದೂರವನ್ನ ಮಾತ್ರವಷ್ಟೆ, ವಿಸ್ತರಣೆ ಮಾಡಲಾಗ್ತಿದೆ.  ಇದಿಷ್ಟೇ ಮಾರ್ಗ ವಿಸ್ತರಣೆಗೆ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬುದು ಗುರುತರ ಪ್ರಶ್ನೆಯಾಗಿದೆ. 
  • ಸುಪ್ರೀಂಕೋರ್ಟ್​ನ ಸ್ಪಷ್ಟ ನಿರ್ದೇಶನದಂತೆ ಅರಣ್ಯ ಇಲಾಖೆ ಮರ ನೆಡುವ ವಿಚಾರದಲ್ಲಿ ನಡೆದುಕೊಂಡಿದೆಯೇ ಎಂದು ಪ್ರಶ್ನಿಸಿದ ಪರಿಸರ ಪ್ರೇಮಿಗಳು, ಸಾಗರ ತಾಲ್ಲೂಕಿನಲ್ಲಿ  8 ಕಿಲೋ ಮೀಟರ್​ ರಸ್ತೆ ವಿಸ್ತರಣೆಯಲ್ಲಿ ಎಷ್ಟು ಮರ ನಡೆಲಾಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು.
  • ಇನ್ನೂ ಹೈವೆ ವಿಸ್ತರಣೆ ಕಾಮಗಾರಿಯಲ್ಲಿ ನಡೆಸಿರುವ ಸರ್ವೆ ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತವಾಯಿತು. ಈ ಸಂಬಂಧ ಅರಣ್ಯ ಇಲಾಖೆ, ಹೆದ್ದಾರಿ ಪ್ರಾಧೀಕಾರ ಜಂಟಿ ಸರ್ವೆ ನಡೆಸಬೇಕು ಎಂದು ಒತ್ತಾಯಿಸಲಾಯ್ತು. 

ಇನ್ನೊಂದೆಡೆ ಈ ಸಂಬಂಧ ಪಶ್ಚಿಮ ಘಟ್ಟವನ್ನು ರಕ್ಷಿಸಿ, ಉಳಿಸಿ ಎಂಬ ಕ್ಯಾಂಪೇನ್​ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿದ್ದು, ಇದಕ್ಕೆ ಬೆಂಬಲವೂ ವ್ಯಕ್ತವಾಗುತ್ತಿದೆ.

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #