ಹುಲಿಯೂರು ದುರ್ಗದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮೂಲದ ಮಹಿಳೆಯ ಬರ್ಬರ ಕೊಲೆ

A woman named Pushpa was killed by her husband Shivaram in Huliyuru Durga, Kunigal taluk, Tumakuru district. She is  originally from Sagar taluk, Shivamogga district 

ಹುಲಿಯೂರು ದುರ್ಗದಲ್ಲಿ  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮೂಲದ ಮಹಿಳೆಯ ಬರ್ಬರ ಕೊಲೆ
Huliyuru Durga, Kunigal taluk, Tumakuru district

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನ ಪುಷ್ಪಾ ಎಂಬವರನ್ನು, ಆಕೆಯ  ಪತಿಯೇ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕು ಹುಲಿಯೂರು ದುರ್ಗದಲ್ಲಿ ನಡೆದಿದೆ. ಪತಿ ಶಿವರಾಮ್‌ರನ್ನ ಪೊಲೀಸರು ಬಂಧಿಸಿದ್ದಾರೆ. 

ಸುಗ್ಗನಹಳ್ಳಿ ಶಿವರಾಮ್‌ ಎಂಬವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮೂಲದ ಪುಷ್ಪಾ ಎಂಬವರನ್ನ ಮದುವೆಯಾಗಿದ್ದರು. ಈ ದಂಪತಿಗೆ 8 ವರ್ಷದ ಮಗುವಿದೆ. ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ಧಾರೆ. ನಿನ್ನೆಯು ಇಬ್ಬರ ನಡುವೆ ಗಲಾಟೆ ನಡೆದಿದ್ದು ಪತ್ನಿ ಪುಷ್ಪಾ ಅರಚಾಡುತ್ತಿರುವುದನ್ನ ಕೇಳಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಪತಿ ಶಿವರಾಮ್‌ ಪತ್ನಿಯ ಕತ್ತು ಸೀಳಿದ್ದಲ್ಲದೆ ಆಕೆಯನ್ನ ಅಂಗಾಂಗವನ್ನು ಕತ್ತರಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಪ್ರಕರಣದಲ್ಲಿ ಪೊಲೀಸರು ಶಿವರಾಮ್‌ನನ್ನ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

A woman named Pushpa was killed by her husband Shivaram in Huliyuru Durga, Kunigal taluk, Tumakuru district. She is  originally from Sagar taluk, Shivamogga district