ನೀವೆ ಬಂದು ಕಟ್ಟಿಂಗ್ ಮಾಡಿ ಎಂದ ಸಚಿವರು, ಪ್ರತಿ ತಿಂಗಳು ಹಣ ಕಳಿಸ್ತೀನಿ ಎಂದ ರಾಜ್ಯಾಧ್ಯಕ್ಷರು | ಏನಿದು ಹೇರ್ ಕಟ್ಟಿಂಗ್ ಸಮರ
debate over the Education Minister's haircut in state politics has caused a war of words between BY Vijayendra and Madhu Bangarappa.

SHIVAMOGGA | MALENADUTODAY NEWS | May 28, 2024 ಮಲೆನಾಡು ಟುಡೆ
ರಾಜ್ಯ ರಾಜಕಾರಣದಲ್ಲಿ ಶಿಕ್ಷಣ ಸಚಿವರ ವಿಚಾರವೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಟ್ರೋಲ್ ಆಗುತ್ತಿರುವ ವಿಷಯವನ್ನು ಇಟ್ಟುಕೊಂಡು ರಾಜಕಾರಣಿಗಳ ನಡುವೆ ವಾಗ್ವಾದ ತಾರಕಕ್ಕೇರಿದೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಬಿವೈ ವಿಜಯೇಂದ್ರರವರು ಮಧು ಬಂಗಾರಪ್ಪರವರ ಹೇರ್ ಸ್ಟೈಲ್ ಬಗ್ಗೆ ಮಾತನಾಡುತ್ತಾ, ಅವರು ತಲೆ ಎಣ್ಣೆಗೆ ಹಾಕಿಕೊಂಡು ತಲೆ ಬಾಚಿಕೊಂಡು ಬರಲಿ ಎಂದಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿದ್ದ ಮಧು ಬಂಗಾರಪ್ಪರವರು ನನ್ನ ಹೇರ್ ಕಟ್ ಮಾಡುವವರು ಪ್ರೀ ಇಲ್ಲ. ವಿಜಯೇಂದ್ರರವರು ಫ್ರೀ ಇದ್ದಲ್ಲಿ ಬಂದು ಹೇರ್ ಕಟ್ ಮಾಡಲಿ ಎಂದು ವ್ಯಂಗ್ಯವಾಡಿದ್ದರು. ಇದೀಗ ಮಧು ಬಂಗಾರಪ್ಪರವರ ವಿರುದ್ಧ ಹರಿಹಾಯ್ದಿರುವ ಬಿವೈ ವಿಜಯೇಂದ್ರರವರು, ಮಧು ಬಂಗಾರಪ್ಪನವರ ಬಗ್ಗೆ ಶಿಕ್ಷಕರು ಹೇಳಿದ್ದನ್ನ ನಾನು ಹೇಳಿದ್ದೇನಷ್ಟೆ. ಅವರ ಅಭಿಪ್ರಾಯವನ್ನು ಸಚಿವರಿಗೆ ತಲುಪಿಸುವ ಕೆಲಸವನ್ನ ಮಾಡಿದ್ದೇನೆ ಅಷ್ಟೆ.
ಶಿಕ್ಷಣ ಸಚಿವರು ಇಲಾಖೆಯಲ್ಲಿ ಅವಾಂತರ ಸೃಷ್ಟಿಸುತ್ತಿದ್ಧಾರೆ. ಒಂದು ಕಡೆ ಕನ್ನಡ ಬರಲ್ಲ ಅಂತಾರೆ, ಇನ್ನೊಂದೆಡೆ ಬೆಂಗಳೂರಿನಲ್ಲಿ ಶಿಕ್ಷಕರ ನೇಮಕಕ್ಕೆ ಲೇಬರ್ ಕಾಂಟ್ರಾಕ್ಟರ್‌ಗಳಿಗೆ ಜವಾಬ್ದಾರಿ ನೀಡಿದ್ಧಾರೆ ಎಂಬ ಮಾಹಿತಿ ಎಂದು ಆರೋಪಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ಪೋಷಕರು ಹಾಗೂ ಶಿಕ್ಷಕರು ಮತ್ತು ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ.
ನಾನು ಹೇಳಿದ ವಿಚಾರವನ್ನು ಅವರು ಮನಸ್ಸಿಗೆ ಹಚ್ಚಿಕೊಂಡಂತೆ ಕಾಣುತ್ತಿದೆ. ಅವರಿಗೆ ಹಣಕಾಸಿನ ಸಮಸ್ಯೆಯಿದ್ದರೇ ನಮ್ಮ ಪಕ್ಷದ ಯುವಮೋರ್ಚಾದಿಂದ ಹಣ ಸಂಗ್ರಹ ಮಾಡಿ ಪ್ರತಿ ತಿಂಗಳು ಸಂದಾಯ ಮಾಡುವ ಕೆಲಸವನ್ನು ಮಾಡಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.