ತುಂಗಾ ಡ್ಯಾಂ ಭರ್ತಿ | ಗೇಟ್‌ ಓಪನ್‌ ಯಾವಾಗ ಗೊತ್ತಾ? | ರೈತರಿಗೆ ಸಂಭ್ರಮ

Tunga Dam in Shivamogga is nearing its full capacity due to rainfall in the region

ತುಂಗಾ ಡ್ಯಾಂ ಭರ್ತಿ | ಗೇಟ್‌ ಓಪನ್‌ ಯಾವಾಗ ಗೊತ್ತಾ? | ರೈತರಿಗೆ ಸಂಭ್ರಮ
Tunga Dam in Shivamogga

SHIVAMOGGA | MALENADUTODAY NEWS | Jun 13, 2024 ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ವರ್ಷಧಾರೆಯ ಆರ್ಭಟ ನಿಧಾನವಾಗಿ ಹೆಚ್ಚಾಗುತ್ತಿದೆ. ಇನ್ನೂ ಒಂದೆರಡು ಮಳೆಗೆ ಭರ್ತಿಯಾಗುವ ತುಂಗಾ ಡ್ಯಾಂಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಮಳೆ ಮುಂದುವರಿದು ಇನ್ನಷ್ಟು ಒಳಹರಿವು ಬಂದರೆ, ಇವತ್ತು ಡ್ಯಾಂ ಗೇಟ್‌ ಓಪನ್‌ ಮಾಡುವ ಸಾಧ್ಯತೆ ಇದೆ. 

ನಿನ್ನೆಯ ಮಾಹಿತಿ ಪ್ರಕಾರ,  ತುಂಗಾ ಜಲಾಶಯದ  ನೀರಿನ ಮಟ್ಟ 588.11 ಮೀಟರ್ ಇತ್ತು. ಒಳಹರಿವು 1,765 ಕ್ಯುಸೆಕ್ ಇದ್ದು, ಜಲಾಶಯದಿಂದ ನದಿಗೆ 1,700 ಕ್ಯುಸೆಕ್ ನೀರು ಹರಿಯಬಿಡಲಾಗುತ್ತಿದೆ. 3.25 ಟಿಎಂಸಿ ಸಾಮರ್ಥ್ಯದ ಜಲಾಶಯದ ಗೇಟ್‌ಗಳನ್ನ ಸದ್ಯದಲ್ಲಿಯೇ ಓಪನ್‌ ಮಾಡಿ ನದಿಗೆ ನೀರು ಬಿಡುವ ಸಾಧ್ಯತೆ ಇದೆ. ತುಂಗಾ ಜಲಾಶಯ ಕಳೆದ ವರ್ಷ ಜುಲೈ 5ರಂದು ಭರ್ತಿಯಾಗಿತ್ತು. ಆದರೆ, ಈ ಬಾರಿ ಮಳೆ ಬೇಗನೇ ಶುರುವಾಗಿದ್ದರಿಂದ ಒಂದು ತಿಂಗಳು ಮೊದಲೇ ಭರ್ತಿ ಹಂತಕ್ಕೆ ಬಂದಿದೆ  

Tunga Dam in Shivamogga is nearing its full capacity due to rainfall in the region. The dam's water level is currently at 588.11 meters with an inflow of 1,765 cusecs. The dam authorities are likely to open the gates today to release water into the river if the inflow increases further.