24 ಗಂಟೆಯಲ್ಲಿ ಶಿವಮೊಗ್ಗದಲ್ಲಿ 538.10 ಮಿಮಿ ಮಳೆ! ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಮಳೆ ದಾಖಲು! ವಿವರ ಇಲ್ಲಿದೆ

Malenadu Today

KARNATAKA NEWS/ ONLINE / Malenadu today/ Jul 24, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಲಭ್ಯವಾಗಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ,  24 ಗಂಟೆಗಳ ಅವಧಿಯಲ್ಲಿ ಒಟ್ಟು 538.10 ಮಿಮಿ ಮಳೆಯಾಗಿದೆ.  ಸರಾಸರಿ 76.87 ಮಿಮಿ ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  570.89 ಮಿಮಿ ಮಳೆ ದಾಖಲಾಗಿದೆ.

ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಮಳೆ?

ಶಿವಮೊಗ್ಗ 48.20 ಮಿಮಿ., ಭದ್ರಾವತಿ 32.20 ಮಿಮಿ., ತೀರ್ಥಹಳ್ಳಿ 103.90 ಮಿಮಿ., ಸಾಗರ 104.50 ಮಿಮಿ., ಶಿಕಾರಿಪುರ 53.30 ಮಿಮಿ., ಸೊರಬ 72.50 ಮಿಮಿ. ಹಾಗೂ ಹೊಸನಗರ 123.50 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ: 

ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1775.20 (ಇಂದಿನ ಮಟ್ಟ), 73505.00 (ಒಳಹರಿವು), 93.65 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1798.00.  

ಭದ್ರಾ: 186 (ಗರಿಷ್ಠ), 149.50 (ಇಂದಿನ ಮಟ್ಟ), 39348.00 (ಒಳಹರಿವು), 170.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.70.   ತುಂಗಾ: 588.24 (ಗರಿಷ್ಠ), 587.78 (ಇಂದಿನ ಮಟ್ಟ), 47273.00 (ಒಳಹರಿವು), 46891.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 577.98 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 7138 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 583.80 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 562.08 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 2405 (ಒಳಹರಿವು), 1990.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.46 (ಎಂಎಸ್‍ಎಲ್‍ಗಳಲ್ಲಿ).. 

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 573.10 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 4098.00 (ಒಳಹರಿವು), 761.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 575.50 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 579.36 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3457.00 (ಒಳಹರಿವು), 1595.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.88 (ಎಂಎಸ್‍ಎಲ್‍ಗಳಲ್ಲಿ).  


ಮಳೆ ಆರ್ಭಟಕ್ಕೆ ಕುಸಿದ ಧರೆ! ಅಡಿಕೆ ತೋಟಕ್ಕೆ ನುಗ್ಗಿದ ನೀರು!

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ನದಿಗಳು ತುಂಬಿ ಹರಿಯುತ್ತಿರುವುದರ ನಡುವೆ ಜಿಲ್ಲೆಯ ಸಾಗರ ತಾಲ್ಲೂಕು ತುಮರಿ ಸಮೀಪದ ಮಣಕಂದೂರು ಬಳಿಯಲ್ಲಿ ಧರೆ ಕುಸಿತವಾಗಿರುವ ಬಗ್ಗೆ ವರದಿಯಾಗಿದೆ.  ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾನಮನೆ ಬೀರಪ್ಪ ಮತ್ತು ಪದ್ಮನಾಯ್ಕ್  ಆಡಿಕೆ ತೋಟದ ಮೇಲೆ ಧರೆಕುಸಿದಿದೆ. ಪರಿಣಾಮ ಹತ್ತಿರದಲ್ಲಿಯೇ ಹರಿಯುತ್ತಿರುವ ಹಳ್ಳದ ನೀರು ತೋಟಕ್ಕೆ ನುಗ್ಗಿ, ತೋಟದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ತೋಟಕ್ಕೆ ಹಾಕಿದ್ದ ಗೊಬ್ಬರ, ಮಣ್ಣು ಸೇರಿದಂತೆ ಏಲಕ್ಕಿ, ವೆನಿಲಾ ಬೆಳೆಗಳು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಅಪಾರ ಹಾನಿಯಾಗಿದೆ. 


ಸುರಿಯುವ ಮಳೆಯಲ್ಲಿಯೇ ಸಾಗರ ಸಬ್​ಜೈಲ್​ ಎದುರು ಜೋರು ಧರಣಿ! ಆಕ್ರೋಶಕ್ಕೆ ಕಾರಣವಾದ ಕೊಲೆಯತ್ನ ಕೇಸ್​

ಸಾಗರ : ತಾಲ್ಲೂಕಿನ ಮಡಸೂರು ಗ್ರಾಮದ ಏಳು ಜನ ರೈತರ ಮೇಲೆ ಕೊಲೆಯತ್ನ ಆರೋಪ ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ  ದಾಖಲಿಸಿ, 15 ದಿನಗಳಿಂದ ಜೈಲಿನಲ್ಲಿರಿಸಿರುವುದನ್ನ ಖಂಡಿಸಿ  ಸಾಗರ ಉಪಕಾರಾಗೃಹದ ಎದುರು ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. 

 ರೈತ ಸಂಘ ದ (ಡಾ. ಎಚ್.ಗಣಪತಿಯಪ್ಪ ಬಣ)  ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ನೇತೃತ್ವದಲ್ಲಿ  ಸಬ್ ಜೈಲ್ ಎದುರು ಜೈಲ್‌ಭರೋ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಮೊದಲು ಪೊಲೀಸ್ ಸ್ಟೇಷನ್ ವೃತ್ತದಿಂದ ಮೆರಣವಣಿಗೆ ಮೂಲಕ ಸೊರಬ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಆನಂತರ ಜೈಲ್​ ಬರೋ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ತಡೆದರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತ ಸಂಘಟನೆ ಕಾರ್ಯಕರ್ತರ ಮನವಿ ಆಲಿಸಿದರು. ಇದೇ ವೇಳೆ ರೈತರನ್ನ ಬಂಧಿಸಿರುವ ಬಗ್ಗೆ  ಯಾವುದೇ ಪಕ್ಷದ ಮುಖಂಡರು ಸರಿಯಾಗಿ ಸ್ಪಂದಿಸುತ್ತಿಲ್ಲ. ಮಾಜಿ ಶಾಸಕರು ನೆಪಮಾತ್ರಕ್ಕೆ ಹೇಳಿಕೆ ನೀಡಿದ್ದರೇ, ಹಾಲಿ ಶಾಸಕರು ಘಟನೆ ಕುರಿತು ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು.  

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 

Malenadu Today

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

 

Share This Article