ಮಳೆ ಆರ್ಭಟಕ್ಕೆ ಕುಸಿದ ಧರೆ! ಅಡಿಕೆ ತೋಟಕ್ಕೆ ನುಗ್ಗಿದ ನೀರು!

Due to the landslide near Thumari, water entered the arecanut plantation and caused immense damage. ತುಮರಿ ಸಮೀಪ ಭೂ ಕುಸಿತದಿಂದಾಗಿ, ಹಳ್ಳದ ನೀರು ಅಡಿಕೆ ತೋಟಕ್ಕೆ ನುಗ್ಗಿ ಅಪಾರ ಹಾನಿಯಾಗಿದೆ.

ಮಳೆ ಆರ್ಭಟಕ್ಕೆ ಕುಸಿದ ಧರೆ!  ಅಡಿಕೆ ತೋಟಕ್ಕೆ ನುಗ್ಗಿದ ನೀರು!

KARNATAKA NEWS/ ONLINE / Malenadu today/ Jul 24, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ನದಿಗಳು ತುಂಬಿ ಹರಿಯುತ್ತಿರುವುದರ ನಡುವೆ ಜಿಲ್ಲೆಯ  ತುಮರಿ ಸಮೀಪದ ಮಣಕಂದೂರು ಬಳಿಯಲ್ಲಿ ಧರೆ ಕುಸಿತವಾಗಿರುವ ಬಗ್ಗೆ ವರದಿಯಾಗಿದೆ. 

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾನಮನೆ ಬೀರಪ್ಪ ಮತ್ತು ಪದ್ಮನಾಯ್ಕ್  ಆಡಿಕೆ ತೋಟದ ಮೇಲೆ ಧರೆಕುಸಿದಿದೆ. ಪರಿಣಾಮ ಹತ್ತಿರದಲ್ಲಿಯೇ ಹರಿಯುತ್ತಿರುವ ಹಳ್ಳದ ನೀರು ತೋಟಕ್ಕೆ ನುಗ್ಗಿ, ತೋಟದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ತೋಟಕ್ಕೆ ಹಾಕಿದ್ದ ಗೊಬ್ಬರ, ಮಣ್ಣು ಸೇರಿದಂತೆ ಏಲಕ್ಕಿ, ವೆನಿಲಾ ಬೆಳೆಗಳು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಅಪಾರ ಹಾನಿಯಾಗಿದೆ. 


ಸುರಿಯುವ ಮಳೆಯಲ್ಲಿಯೇ ಸಾಗರ ಸಬ್​ಜೈಲ್​ ಎದುರು ಜೋರು ಧರಣಿ! ಆಕ್ರೋಶಕ್ಕೆ ಕಾರಣವಾದ ಕೊಲೆಯತ್ನ ಕೇಸ್​

ಸಾಗರ : ತಾಲ್ಲೂಕಿನ ಮಡಸೂರು ಗ್ರಾಮದ ಏಳು ಜನ ರೈತರ ಮೇಲೆ ಕೊಲೆಯತ್ನ ಆರೋಪ ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ  ದಾಖಲಿಸಿ, 15 ದಿನಗಳಿಂದ ಜೈಲಿನಲ್ಲಿರಿಸಿರುವುದನ್ನ ಖಂಡಿಸಿ  ಸಾಗರ ಉಪಕಾರಾಗೃಹದ ಎದುರು ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. 

 ರೈತ ಸಂಘ ದ (ಡಾ. ಎಚ್.ಗಣಪತಿಯಪ್ಪ ಬಣ)  ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ನೇತೃತ್ವದಲ್ಲಿ  ಸಬ್ ಜೈಲ್ ಎದುರು ಜೈಲ್‌ಭರೋ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಮೊದಲು ಪೊಲೀಸ್ ಸ್ಟೇಷನ್ ವೃತ್ತದಿಂದ ಮೆರಣವಣಿಗೆ ಮೂಲಕ ಸೊರಬ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಆನಂತರ ಜೈಲ್​ ಬರೋ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ತಡೆದರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತ ಸಂಘಟನೆ ಕಾರ್ಯಕರ್ತರ ಮನವಿ ಆಲಿಸಿದರು. ಇದೇ ವೇಳೆ ರೈತರನ್ನ ಬಂಧಿಸಿರುವ ಬಗ್ಗೆ  ಯಾವುದೇ ಪಕ್ಷದ ಮುಖಂಡರು ಸರಿಯಾಗಿ ಸ್ಪಂದಿಸುತ್ತಿಲ್ಲ. ಮಾಜಿ ಶಾಸಕರು ನೆಪಮಾತ್ರಕ್ಕೆ ಹೇಳಿಕೆ ನೀಡಿದ್ದರೇ, ಹಾಲಿ ಶಾಸಕರು ಘಟನೆ ಕುರಿತು ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು.  

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 


ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​