ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗೇರುಬೀಸು ಗ್ರಾಮದಲ್ಲಿ ಬೆಂಕಿಗೆ ಅಡಿಕೆ, ಶುಂಠಿ ಹಾಗೂ ಪೈಪ್ ಲೈನ್ ಸುಟ್ಟುಹೋಗಿದೆ. ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟವಾಗಿದೆ.
ಗೇರುಬೀಸು ಗ್ರಾಮದ ಶಿಲ್ಪ ಎಂಬವರ ಎರಡು ಎಕರೆ ಅಡಿಕೆ ತೋಟವಿದೆ. ಇಲ್ಲಿ ಅವರು ಒಂದುವರೆ ಎಕರೆ ಶುಂಠಿ ಕೂಡ ಹಾಕಿದ್ದರು, ಈ ಮಧ್ಯೆ ಹೊಲಕ್ಕೆ ಬೆಂಕಿಬಿದ್ದಿದ್ದು ಸುಮಾರು 10 ಲಕ್ಷ ಮೌಲ್ಯದ ಬೆಳೆ ಹಾಗೂ ಹೊಲಕ್ಕೆ ನೀರುಣಿಸಲು ಬಳಸಿದ್ದ ಪೈಪ್ಗಳು ಸುಟ್ಟು ಹೋಗಿದೆ.
ಘಟನೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟಿದ್ದು ಪರೀಶೀಲನೆ ನಡೆಸಿದ್ದಾರೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
