ವಿಶ್ವ ವಿಖ್ಯಾತ ಜೋಗ ಜಲಪಾತ ಆವರಣದಲ್ಲಿ ರೈನ್​ ಡ್ಯಾನ್ಸ್ ಗೆ ಅವಕಾಶ?

Rain dance allowed in world famous Jog falls premises

ವಿಶ್ವ ವಿಖ್ಯಾತ ಜೋಗ ಜಲಪಾತ ಆವರಣದಲ್ಲಿ ರೈನ್​ ಡ್ಯಾನ್ಸ್ ಗೆ ಅವಕಾಶ?
Rain dance allowed in world famous Jog falls premises

SHIVAMOGGA  |  Jan 7, 2024  |  ಸವಿಶ್ವವಿಖ್ಯಾತ ಜೋಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಳೆಗಾಲದ ಆರಂಭದೊಳಗೆ ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.

ಸೆಲ್ವಮಣಿ ತಿಳಿಸಿದ್ದಾರೆ. 

ಜೋಗ ಜಲಪಾತ 

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಜೋಗ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೋಗ ಅಭಿವೃದ್ಧಿಯ ಕನಸು ಅತಿ ಶೀಘ್ರದಲ್ಲಿ ನನಸಾಗಲಿದೆ ಎಂದರು. 

ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲಾಗುತ್ತದೆ ಎಂದ ಅವರು, . ಒಟ್ಟು 184 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು. 



ಇದನ್ನೂ ಸಹ ಓದಿ :ನಿನ್ನೆ ಎಷ್ಟಿತ್ತು ಅಡಿಕೆ ದರ? ಇವತ್ತು ಎಷ್ಟಿದೆ ಅಡಿಕೆ ದರ? ಮಾರುಕಟ್ಟೆಯಲ್ಲಿ  Arecanut Rate

ಜೋಗ ಜಲಪಾತ ಆವರಣದಲ್ಲಿ ಶಾಪಿಂಗ್

ವಿಶಾಲವಾದ ಉದ್ಯಾನ, ಕಾರಿಡಾರ್ ಶಾಪಿಂಗ್ ಮಳಿಗೆಗಳು, ಹೋಟೆಲ್ ವ್ಯವಸ್ಥೆ, ನೀರಿನ ಕಾರಂಜಿ, ಮಳೆ ನೃತ್ಯ ಮೊದಲಾದ ವಿನೂತನ ಸೌಲಭ್ಯ ಗಳನ್ನು ಕಲ್ಪಿಸಲಾಗುತ್ತಿದೆ. ಮೊದಲಿದ್ದ ಜಲಪಾತದ ರೂಪಕ್ಕೆ ಹೆಚ್ಚಿನ ಮೆರಗು ನೀಡಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ

ಪ್ರವಾಸಿಗರ ರಕ್ಷಣೆ, ಸುರಕ್ಷತೆಗಾಗಿ ವಿಶೇಷ ಪೊಲೀಸ್ ಚೌಕಿ ಸ್ಥಾಪಿಸಲಾಗುವುದು. ಜಲಪಾತದ  ಇತಿಹಾಸ, ಸ್ಥಳದ ಮಾಹಿತಿ, ಒದಗಿಸುವ ಗೈಡ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ರು. 

ಜೋಗದಲ್ಲಿ ರೈನ್​ ಡ್ಯಾನ್ಸ್​

ಇನ್ನೂ ಇದೇ ವೇಳೆ ಮಾತನಾಡಿದ ಸಾಗರ  ಶಾಸಕ ಗೋಪಾಲಕೃಷ್ಣ  ಬೇಳೂರುರವರು ರಾಜ್ಯದಲ್ಲಿಯೇ ಮಾದರಿ ಪ್ರವಾಸೋದ್ಯಮ ಆಕರ್ಷಣೆಯಾಗಿ ರೈನ್​ ಡ್ಯಾನ್ಸ್​ಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹೈದರಬಾದ್​ನಲ್ಲಿರುವ ವ್ಯವಸ್ಥೆಯನ್ನು ಈ ಸಂಬಂಧ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದ್ರು.  

ಜಲಪಾತದಲ್ಲಿ ರೋಪ್ ವೇ ಹಾಗೂ ಕೆಲವು ಹಳೆಯ ಕಟ್ಟಡವನ್ನು ಹೊಸ ಮಾದರಿಯಲ್ಲಿ ನಿರ್ಮಿಸಲಾಗುವುದು. ಈ ಬಗ್ಗೆ ಶೀಘ್ರ ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.