ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಡ್ಯಾಂ ಭರ್ತಿಗೆ ಕ್ಷಣಗಣನೆ

Tunga Dam in Shivamogga is nearly full due to heavy rainfall

ಶಿವಮೊಗ್ಗದ ಗಾಜನೂರಿನಲ್ಲಿರುವ  ತುಂಗಾ ಡ್ಯಾಂ ಭರ್ತಿಗೆ ಕ್ಷಣಗಣನೆ
Tunga Dam in Shivamogga

SHIVAMOGGA | MALENADUTODAY NEWS | Jun 10, 2024 ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ತುಂಗಾ ಡ್ಯಾಂ ಭರ್ತಿಯಾಗುವ ಹಂತಕ್ಕೆ ಬಂದಿದ್ದು ಯಾವುದೇ ಸಮಯದಲ್ಲಿ ನದಿಗೆ ನೀರುಬಿಡಲಾಗುವುದು ಎಂದು ಸಂಬಂಧ ಪಟ್ಟ ಇಲಾಖೆ ಮುನ್ನೆಚ್ಚರಿಕೆಯನ್ನ ನೀಡಿತ್ತು. ಇದೀಗ ತುಂಗಾ ಜಲಾಶಯ ಭರ್ತಿಗೆ ಒಂದುವರೆ ಅಡಿಯಷ್ಟೆ ಬಾಕಿಯಿದೆ. ಡ್ಯಾಂಗೆ ಒಳಹರಿವು ಒಂದೂವರೆ ಸಾವಿರ ಕ್ಯೂಸೆಕ್ಸ್ ಇದ್ದು ಸಂಜೆಯೊಳಗೆ ಪವರ್ ಹೌಸ್ ಮೂಲಕ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಮೂಲಕ 5 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡುವ ಸಾಧ್ಯತೆ ಇದೆ. 

ಹೆಚ್ಚುವರಿಯಾಗಿ ನೀರು ಡ್ಯಾಂಗೆ ಹರಿದು ಬಂದರೆ ಡ್ಯಾಂ ಗೇಟ್‌ ಓಪನ್‌ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.  ಇನ್ನೂ ವಾರ್ತಾಇಲಾಖೆ ನೀಡಿದ ಮಾಹಿತಿ ಪ್ರಕಾರ,  ತುಂಗಾ ಡ್ಯಾಂ ಮಟ್ಟ ಹೀಗಿದೆ. ಡ್ಯಾಂನ  588.24 (ಗರಿಷ್ಠ), 587.54 (ಇಂದಿನ ಮಟ್ಟ), 1789.00 (ಒಳಹರಿವು), 65.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.25 ಇದೆ. 

The Tunga Dam in Shivamogga is nearly full due to heavy rainfall. The dam is expected to release water into the river by evening, as the inflow is 1500 cusecs and the dam is only 1.5 feet from full capacity. current water level of the dam is 587.54 feet, with an inflow of 1789.00 cusecs and an outflow of 65.00 cusecs.