ದುರ್ಯೋಧನನಿಗೂ ದೇವಾಲಯವಿದೆ | ಎಲ್ಲಿದೆ ಗೊತ್ತಾ ಕೌರವನ ಟೆಂಪಲ್‌

temple dedicated to Duryodhana, a character from the Indian epic Mahabharata, located in the Malanada village of Kerala's Kollam district

ದುರ್ಯೋಧನನಿಗೂ ದೇವಾಲಯವಿದೆ | ಎಲ್ಲಿದೆ ಗೊತ್ತಾ ಕೌರವನ ಟೆಂಪಲ್‌
Mahabharata, Malanada village ,Duryodhana,Kerala, Kollam district

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆ

ನಿಮಗೆ ಗೊತ್ತ ಕೇರಳದಲ್ಲಿ ದುರ್ಯೋಧನನ ದೇವಾಲಯವಿದೆ. ಹೌದು ಕೇರಳದ ಕೊಲ್ಲಂ ಜಿಲ್ಲೆಯ ಮಲನಾಡ ಗ್ರಾಮದಲ್ಲಿ ನೆಲೆಸಿರುವ ದುರ್ಯೋಧನ ದೇವಾಲಯವು ಭಾರತದ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿ ಹೇಳುತ್ತಿದೆ. 

ಈ ದೇವಾಲಯವನ್ನು ಪೊರುವಾಜಿ ಪೆರುವಿರುತ್ತಿ ಮಲನಾಡ ದುರ್ಯೋಧನ ದೇವಾಲಯ ಎಂದು ಕರೆಯಲಾಗುತ್ತದೆ. ಮಹಾಭಾರತದ ಸರ್ವಶ್ರೇಷ್ಟರ ದೇಗುಲಗಳು ಹಲವೆಡೆ ಕಾಣಸಿಗುತ್ತದೆ. ಆದರೆ ಪಾಂಡವರ ಎದುರಾಳಿ ಕೌರವನ ದೇಗುಲ ದೇಶದಲ್ಲಿ ಅಷ್ಟಾಗಿ ಕಾಣ ಸಿಗದು. 

ಆದರೆ ಕೇರಳದಲ್ಲಿ ದುರ್ಯೋಧನನ ದೇಗುಲ ನಿರ್ಮಿಸಲಾಗಿದೆ. ಇಲ್ಲಿಯ ಜನಪದ ಮಾತುಗಳ ಪ್ರಕಾರ,  13 ವರ್ಷಗಳ ವನವಾಸದ ಅವಧಿಯಲ್ಲಿ ಪಾಂಡವರನ್ನು ದುರ್ಯೋಧನನು  ಹುಡುಕುತ್ತಿರುವಾಗ ಈ ಪ್ರದೇಶದಲ್ಲಿ ಕೇರಳದ ಕಾಡುಗಳ ಮೂಲಕ ಪ್ರಯಾಣಿಸಿದ್ದ ಎಂಬ ನಂಬಿಕೆ ಇದೆ. ಹಾಗೆ ಪಾಂಡವರನ್ನ ಆತನ ಹುಡುಕುತ್ತಿದ್ದ ಸಂದರ್ಭದಲ್ಲಿ ದಣಿದ ದುರ್ಯೋಧನ ಮಲನಾಡ ಗ್ರಾಮದಲ್ಲಿ ಆಶ್ರಯ ಪಡೆದಿದ್ದನೆಂದು ನಂಬಲಾಗಿದೆ, ಆಗ ಅಲ್ಲಿನ ಸ್ಥಳೀಯರು ನೀಡಿದ ಆತಿಥ್ಯಕ್ಕೆ ಕೃತಜ್ಞತೆಯಾಗಿ, ದುರ್ಯೋಧನನು ಗ್ರಾಮವನ್ನು ನೀಡಿದನಂತೆ. ಆನಂತರ ದುರ್ಯೋಧನನ ದೇಗುಲ ನಿರ್ಮಿಸಿ ಗ್ರಾಮಸ್ಥರು ಇವತ್ತಿಗೂ ಆತನನ್ನು ಸ್ಮರಿಸುತ್ತಾರೆ.  

a temple dedicated to Duryodhana, a character from the Indian epic Mahabharata, located in the Malanada village of Kerala's Kollam district. The temple, known as Poruvazhy Peruviruthy Malanada Duryodhana Temple, stands as a testament to India's cultural heritage.