ಚಂದ್ರಶೇಖರನ್‌ ಆತ್ಮಹತ್ಯೆ | 2 ದಿನದ ಬಳಿಕ ಸಿಡಿದ್ದೆದ್ದ ರಾಜಕಾರಣ | ಶಿವಮೊಗ್ಗದಲ್ಲಿ ಏನಾಯ್ತು?

suicide of Chandrashekhar, an officer with the Valmiki Development Corporation in Shivamogga, has sparked a political uproar in Karnataka. The BJP staged a protest, accusing government officials of involvement in a significant financial scandal and alleging that the government is protecting corrupt officials.

ಚಂದ್ರಶೇಖರನ್‌ ಆತ್ಮಹತ್ಯೆ  | 2 ದಿನದ ಬಳಿಕ ಸಿಡಿದ್ದೆದ್ದ ರಾಜಕಾರಣ | ಶಿವಮೊಗ್ಗದಲ್ಲಿ ಏನಾಯ್ತು?
Valmiki Development Corporation officer, Chandrashekhar suicide case

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ  ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಕೋಟಿ ಕೋಟಿ ಹಣವನ್ನು ಅವ್ಯವಹಾರ ಮಾಡಿಕೊಂಡಿರುವುದನ್ನ ಖಂಡಿಸಿ ಹಾಗೂ ಸರ್ಕಾರದಿಂದ ಅಧಿಕಾರಿಗಳಿಗೆ ಕುಣಿಕೆ ಭಾಗ್ಯ ಸಿಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಇವತ್ತು ಪ್ರತಿಭಟನೆ ನಡೆಸಿದೆ. 

ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಪ್ರತಿಭಟನೆ ನಡೆಸದ ಬಿಜೆಪಿ ಕಾರ್ಯಕರ್ತರು ವಾಲ್ಮೀಕಿ ನಿಗಮದ 185 ಕೋಟಿ ಹಗರಣದ ಬಿಚ್ಚಿಟ್ಟು ಅಧಿಕಾರಿ ನೇಣಿಗೆ ಶರಣಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯತೆಯಿಂದ ಸರ್ಕಾರಿ ಅಧಿಕಾರಿಯೊಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. 

ಶಾಸಕ ಎಸ್‌ಎನ್‌ ಚನ್ನಬಸಪ್ಪ ಹಾಗೂ ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು  ಸಚಿವ ನಾಗೇಂದ್ರರವರ ರಾಜಿನಾಮೆಗೆ ಒತ್ತಾಯಿಸಿದ್ರು.ಇದಕ್ಕೂ ಮೊದಲು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಎಸ್‌ಎನ್‌ ಚನ್ನಬಸಪ್ಪ ಮೃತ ಅಧಿಕಾರಿಯವರ ಮನೆಗೆ ಭೇಟಿಕೊಟ್ಟು ನಡೆದಿದ್ದನ್ನ ವಿಚಾರಿಸಿದರು. ಅಲ್ಲದೆ ಮೃತ ಅಧಿಕಾರಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು. 

ಉಳಿದಂತೆ ಈ ಬಗ್ಗೆ ಮಾತನಾಡಿರುವ ಕೋಟ ಶ್ರೀನಿವಾಸ ಪೂಜಾರಿ ಚಂದ್ರಶೇಖರ್ ಒಬ್ಬ ‌ಪ್ರಾಮಾಣಿಕ ಅಧಿಕಾರಿಯಾಗಿದ್ದವರು.ಅವರು ತಮ್ಮ ಡೆತ್ ನೋಟ್ ನಲ್ಲಿ ಅಧಿಕಾರಿಗಳ ಹೆಸರು ಬರೆದಿದ್ದಾರೆ. ಪರಿಶಿಷ್ಟ ಅಭಿವೃದ್ಧಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸಬೇಕು ಎಂದರು. ನಿಮ್ಮ ಸಚಿವ ಶಾಮೀಲು ಆಗಿದ್ದರೂ ತಕ್ಷಣ ವಜಾ ಮಾಡಬೇಕಿತ್ತು, ನಿಮ್ಮ ಗೌರವ ಉಳಿಯಬೇಕಾದರೆ ಸಚಿವನನ್ನು ತಕ್ಷಣ ವಜಾ ಮಾಡಿ ಎಂದು ಅವರು,  ಪ್ರಕರಣವನ್ನು ಸಿಬಿಐಗೆ ವಹಿಸಿ ಇಲ್ಲದಿದ್ದರೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅವರಿಂದ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು. ಅಷ್ಟೆ ಅಲ್ಲದೆ ಹಾಗೊಂದು ವೇಳೆ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸದೇ ಇದ್ದರೆ ಪ್ರಕರಣದಲ್ಲಿ ನಿಮ್ಮ ಕೈವಾಡ ಇದೆಯೇನೋ ಎಂಬ ಅನುಮಾನ ಬರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು, ಪೆನ್ ಡ್ರೈವ್ ಅನ್ನು ಕುಟುಂಬದ ಗಮನಕ್ಕೆ ತರದೇ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ಏನಿತ್ತು ಎಂಬ ಬಗ್ಗೆ ಬಹಿರಂಗ ಆಗಬೇಕು. ಈಶ್ವರಪ್ಪ ಅವರಿಗೊಂದು ನ್ಯಾಯ ನಾಗೇಂದ್ರನಿಗೆ ಒಂದು ನ್ಯಾಯನಾ, ಈ ಹಿಂದೆ ನಡೆದಿದ್ದ ಘಟನೆಯ ಬೆನ್ನಲ್ಲೆ  ಕೆಎಸ್‌ ಈಶ್ವರಪ್ಪ ರಾಜೀನಾಮೆ ಕೊಟ್ಟರು

ನಾಗೇಂದ್ರರವರು ಈಗ  ಏಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ರು.  

87 ಕೋಟಿ ರೂ ವಂಚನೆ ಆಗಿದೆ‌ ಇದುವರೆಗೆ ಒಬ್ಬರೇ ಒಬ್ಬರನ್ಜು ಬಂಧಿಸಿಲ್ಲ, ಪ್ರಕರಣ ಮುಚ್ಚಿ ಹಾಕಲು ಸಚಿವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ. ಸಚಿವರನ್ನು ವಜಾ ಮಾಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಚಿವ ನಾಗೇಂದ್ರ ವಜಾ ಮಾಡದಿದ್ದರೆ ಹೋರಾಟ ಮಾಡುತ್ತೇವೆ. ವಜಾ ಮಾಡದಿದ್ದರೆ ವಿಧಾನಸಭಾ ಕಲಾಪದಲ್ಲು ಹೋರಾಟ ಮಾಡುತ್ತೇವೆ. ರಾಜ್ಯಪಾಲರಿಗೆ ಈ ಬಗ್ಗೆ ದೂರು ಕೊಡುವ ಬಗ್ಗೆ ಚಿಂತನೆ ಮಾಡ್ತೇವೆ ಎಂದರುThe suicide of Chandrashekhar, an officer with the Valmiki Development Corporation in Shivamogga, has sparked a political uproar in Karnataka. The BJP staged a protest, accusing government officials of involvement in a significant financial scandal and alleging that the government is protecting corrupt officials.