ಹೊಳೆಹೊನ್ನೂರು | ಪ್ರಸಿದ್ಧ ದೇವಸ್ಥಾನದಲ್ಲಿ ಕಳ್ಳತನ
donation box containing an estimated ₹1.5 lakhs from the ancient Sri Anjaneyaswamy temple in Sanyasikodamagge village, Shivamogga district.

SHIVAMOGGA | MALENADUTODAY NEWS | Jun 10, 2024 ಮಲೆನಾಡು ಟುಡೆʼ
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಸನ್ಯಾಸಿಕೋಡಮಗ್ಗೆ ಗ್ರಾಮದ ಪುರಾತನ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯನ್ನ ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ. ದೇವಸ್ಥಾನದ ಹುಂಡಿಯಲ್ಲಿ 1.5ಲಕ್ಷ ರೂ. ಇತ್ತೆಂದು ಅಂದಾಜಿಸಲಾಗಿದೆ. ಅರ್ಚಕ ಕೃಷ್ಣಮೂರ್ತಿ ಭಾನುವಾರ ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆದಾಗ ಕಾಣಿಕೆ ಹುಂಡಿ ಕಾಣೆಯಾಗಿರುವುದು ಗೊತ್ತಾಗಿದೆ. ಆ ಬಳಿಕ ಅವರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ಆ ಬಳಿಕ ಸ್ಥಳೀಯರು ಸುತ್ತಮುತ್ತ ಹುಡುಕಾಡಿದ್ದಾರೆ. ಊರಿನಿಂದ ಹೊಳೆಗೆ ಹೋಗುವ ರಸ್ತೆ ಪಕ್ಕದಲ್ಲಿ ಹುಂಡಿ ಒಡೆದು ಅದರಲ್ಲಿದ್ದ ಹಣ ದೋಚಿಕೊಂಡು ಕಳ್ಳರು ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Thieves stole a donation box containing an estimated ₹1.5 lakhs from the ancient Sri Anjaneyaswamy temple in Sanyasikodamagge village, Shivamogga district.