ಭದ್ರಾವತಿ ಕಾರೇಹಳ್ಳಿಯಲ್ಲಿ ದೈತ್ಯ ಚಿರತೆ ಸೆರೆ! ನಾಯಿಯು ಸೇಫ್​! ಹೇಗಿದೆ ನೋಡಿ

Malenadu Today

SHIVAMOGGA NEWS / ONLINE / Malenadu today/ Nov 24, 2023 NEWS KANNADA

Shivamogga   |  Malnenadutoday.com  ದೈತ್ಯಾಕಾರದ ಚಿರತೆ ಸೆರೆ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಮನೆಯಂತಿದ್ದ ಕೇಜ್ ನಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ? ಭದ್ರಾವತಿಯ ಕಾರೆಹಳ್ಳಿಯಲ್ಲಿ ಇಂದು ಬಹುದೊಡ್ಡ ಚಿರತೆಯನ್ನೇ ಅರಣ್ಯಇಲಾಖೆ ಅಧಿಕಾರಿಗಳು ಖೆಡ್ಡಾಗೆ ಬೀಳಿಸಿದ್ದಾರೆ.

Malenadu Today

READ :ಕಬಾಬ್​ ಕರಿದ ಎಣ್ಣೆ ಎರಚಿದ! ಜೀಪ್​ನಡಿ ಬಿದ್ದು ಹೊರಳಾಡಿದ! ಬಿ.ಹೆಚ್​.ರೋಡ್​ನಲ್ಲಿ ಜೋರಿತ್ತು ಕುಡುಕನ ಹೈಡ್ರಾಮಾ!

ಇತ್ತಿಚ್ಚಗೆ ಕಾರೆಹಳ್ಳಿ ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರ ಜನರ ನಿದ್ದೆಗೆಡಿಸಿತ್ತು. ನಾಯಿಯ ಮೇಲೂ ದಾಳಿ ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ತೀವ್ರ ಒತ್ತಡವಿತ್ತು.

Malenadu Today

ಮನೆಯಂತಹ ಕೇಜ್ ಬಳಸಿ ಚಿರತೆ ಸೆರೆ

ಸಾಮಾನ್ಯವಾಗಿ ಚಿರತೆ ಸೆರೆ ಹಿಡಿಯಲು ಸಣ್ಣ ಕೇಜ್ ಬಳಸಲಾಗುತ್ತದೆ. ಆದರೆ ಕಾರೆಹಳ್ಳಿ ಕಾರ್ಯಾಚರಣೆಯಲ್ಲಿ ಮನೆ ಮಾದರಿಯ ಕೇಜ್ ಬಳಸಲಾಗಿದೆ.. ಸಣ್ಣ ಕೇಜ್ ನಲ್ಲಿ ನಾಯಿ ಕಟ್ಟಿ ಚಿರತೆಯನ್ನ ಕೇಜ್​ಗೆ ಬೀಳಿಸಲು ಸ್ಕೆಚ್ ಹಾಕಿದರೆ. ಅದು ವರ್ಕೌಟ್ ಆಗೋದಿಲ್ಲ. ಅತ್ಯಂತ ಸೂಕ್ಷ್ಮ ಪ್ರಾಣಿಯಾಗಿರುವ ಚಿರತೆ ತನ್ನನ್ನೆ ಬಂಧನಕ್ಕೆ ಬೀಸಿರುವ ಬಲೆ ಎಂಬುದು ಗೊತ್ತಾಗಿಯೇ.ಕೇಜ್ ಒಳಗೆ ನುಸುಳದೇ ತನ್ನ ಬೇಟೆಯನ್ನ ಕದ್ದೊಯ್ಯುತ್ತದೆ. ಹೀಗಾಗಿಯೇ ಇತ್ತಿಚ್ಚೆಗೆ ಮನೆ ಮಾದರಿಯ ಕೇಜ್ ಬಳಸಲಾಗುತ್ತದೆ. ಅದರೊಳಗೆ ಸಣ್ಣ ಕೇಜ್ ಇಡಲಾಗುತ್ತದೆ.

Malenadu Today

ಹೇಗಿತ್ತು ಕಾರೆಹಳ್ಳಿ ಕಾರ್ಯಾಚರಣೆ

ಕಾರೆಹಳ್ಳಿಯಲ್ಲಿ ಮನೆ ಮಾದರಿ ಕೇಜ್ ನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಅದಕ್ಕೆ ವಿಶಾಲವಾದ ಬಯಲು ಅನಿಸಿಕೊಂಡೇ ಅದು ಬೇಟೆಯನ್ನು ಅರಸಿಕೊಂಡು ಕೇಜ್ ಒಳಗೆ ಮದ್ಯರಾತ್ರಿ ಪ್ರವೇಶಿಸಿತ್ತು. ಇಂದು ಬೆಳಿಗ್ಗೆ ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಸ್ಥಳಕ್ಕೆ ಬೇಟಿ ನೀಡಿದರು. ದೊಡ್ಡ ಕೇಜ್ ನಲ್ಲಿದ್ದ ಚಿರತೆಯನ್ನು ಅರವಳಿಕೆ ನೀಡಿ ಡಾರ್ಟ್ ಮಾಡಿದರು. ಚಿರತೆ ಪ್ರಜ್ಞಾ ಹೀನ ಸ್ಥಿತಿಯಲ್ಲಿರುವಾಗಲೇ ಸಣ್ಣ ಕೇಜ್ ಒಳಗೆ ಅದನ್ನು ಸ್ಥಳಾಂತರಿಸಲಾಯಿತು

Malenadu Today

ನಾಯಿಯ ರಕ್ಷಣೆ

ಚಿರತೆಯ ಬೇಟೆಗಾಗಿಯೇ ಬಳಸಲಾಗಿದ್ದ ನಾಯಿಯನ್ನು ಈ ಬಾರಿ ಕಾರ್ಯಾಚರಣೆಯಲ್ಲಿ ಡಾಕ್ಟರ್ ವಿನಯ್ ರಕ್ಷಿಸಿದ್ದಾರೆ. ನಾಯಿಯನ್ನು ನೋಡಿಯೇ ಕೇಜ್ ಒಳ ಪ್ರವೇಶಿಸಿದ ಚಿರತೆ ನಾಯಿಯ ಮುಖವನ್ನು ತರಚಿತ್ತು ಅಷ್ಟೆ. ಡಾಕ್ಟರ್ ವಿನಯ್ ಚಿರತೆಗೆ ಡಾರ್ಟ್ ಮಾಡಿದ ನಂತರ ನಾಯಿಗೆ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.

READ :ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು!

ದೈತ್ಯಾಕಾರದ ಚಿರತೆ

ಇನ್ನು ಸೆರೆಯಾದ ಚಿರತೆ ಅತ್ಯಂತ ಬಲಿಷ್ಟವಾಗಿದ್ದು ಸಧೃಡವಾಗಿದೆ. ಐದರಿಂದ ಆರು ವರ್ಷದ ಚಿರತೆ ಇದಾಗಿದ್ದು.,ಒಮ್ಮೆಲೆ ನೋಡಿದರೆ ಹುಲಿಯಂತೆ ಭಾಸವಾಗುತ್ತದೆ. ದಷ್ಟಪುಷ್ಟವಾಗಿರುವ ಚಿರತೆಯನ್ನು ಅರಣ್ಯಾಧಿಕಾರಿಗಳು ಪುನಃ ಕಾಡಿಗೆ ಬಿಡುವರೋ ಅಥವಾ ಲಯನ್ ಸಫಾರಿ ಸ್ಥಳಾಂತರಿಸುವರೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಚಿರತೆಯ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

 

Share This Article