ರಾಜ್ಯದಲ್ಲಿ ವನ್ಯಜೀವಿಗಳಿಗಿಲ್ಲ ಡಾಕ್ಟರ್! ಪ್ರಾಣಿಗಳ ಆರೈಕೆಗೆ ನಿಪುಣ ವೈದ್ಯರ ಕೊರತೆ ಕಾಡುತ್ತಿರುವುದೇಕೆ? JP STORY

JP writes on what causes the shortage of wildlife doctors in the state ರಾಜ್ಯದಲ್ಲಿ ವನ್ಯಜೀವಿ ವೈದ್ಯರ ಕೊರತೆಗೆ ಕಾರಣವೇನು ಎಂಬುದನ್ನ ಜೆಪಿ ಬರೆಯುತ್ತಾರೆ

ರಾಜ್ಯದಲ್ಲಿ ವನ್ಯಜೀವಿಗಳಿಗಿಲ್ಲ ಡಾಕ್ಟರ್!  ಪ್ರಾಣಿಗಳ ಆರೈಕೆಗೆ ನಿಪುಣ ವೈದ್ಯರ ಕೊರತೆ ಕಾಡುತ್ತಿರುವುದೇಕೆ? JP STORY

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA |  ರಾಜ್ಯದಲ್ಲಿ ವನ್ಯಜೀವಿ ವೈದ್ಯರ ಹುದ್ದೆ ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲವೇಕೆ..? ವನ್ಯಜೀವಿ ವೈದ್ಯರ ಶ್ರಮಕ್ಕೆ ಬೆಲೆ ಕೊಡುತ್ತಿಲ್ಲವೇ ಹಿರಿಯ ಅರಣ್ಯಾಧಿಕಾರಿಗಳು..? ಜೆಪಿ ಬರೆಯುತ್ತಾರೆ.

ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ದಿನದಿನಕ್ಕೂ ತಾರಕಕ್ಕೇ ಏರುತ್ತಿರುವ ಸಂದರ್ಭದಲ್ಲಿ ವನ್ಯಜೀವಿಗಳನ್ನು ಸೆರೆಹಿಡಿಯಸಲು ಅಥವಾ ಹಿಮ್ಮೆಟ್ಟಿಸುವ ಕಾರ್ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆಯ ಇದಕ್ಕೆ ಪ್ರಮುಖ ಕಾರಣ ವನ್ಯ ಪ್ರಾಣಿಗಳನ್ನು ಸೆರೆ ಹಿಡಿಯಲು ಬೇಕಾದ ನುರಿತ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. 

READ : ಸಕ್ರೆಬೈಲ್ ಆನೆ ಬಿಡಾರ | ಹೆಣ್ಣು ಮರಿಗೆ ಜನ್ಮ ನೀಡಿದ ಬಾನುಮತಿ ಆನೆ | ಸುದ್ದಿ ಬಹಿರಂಗ ಪಡಿಸಲಿಲ್ಲವೇ ಅಧಿಕಾರಿಗಳು?

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಹಿಂದೆ ಉಮಾಶಂಕರ್ ಎಂಬುವರು ವನ್ಯಜೀವಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಬಿಟ್ಟು ತಿಂಗಳಾಯಿತು ಅಷ್ಟೆ.ಈಗ ಬನ್ನೇರುಘಟ್ಟದಲ್ಲಿ ಅನುಭವಿ ವೈದ್ಯರುಗಳು ಒಬ್ಬರೂ ಇಲ್ಲ. ಮೊನ್ನೆ ಚಿರತೆ ದಾಳಿಗೆ ಒಳಗಾದ ಡಾಕ್ಟರ್ ಕಿರಣ್ ಕರ್ತವ್ಯಕ್ಕೆ ಜಾಯಿನ್ ಆಗಿ ಎಳೆಂಟು ತಿಂಗಳಾಗಿರಬಹುದು ಅಷ್ಟೆ. ರಾಜ್ಯದಲ್ಲಿ ಈಗಿರುವುದು ಬೆರಳೆಣಿಕೆಯಷ್ಟು ವನ್ಯಜೀವಿ ವೈದ್ಯರು ಮಾತ್ರ.

ಡಾಕ್ಟರ್ ರಮೇಶ್, ಡಾಕ್ಟರ್ ವಿನಯ್, ಡಾಕ್ಟರ್ ವಾಸಿಂ ಮತ್ತು ಡಾಕ್ಟರ್ ಮುಜಿಬ್..ಡಾಕ್ಟರ್ ಪ್ರಯಾಗ್ ಇವರುಗಳೇ ಅನುಭವಿ ನುರಿತ ವನ್ಯಜೀವಿ ವೈದ್ಯರುಗಳಾಗಿದ್ದಾರೆ. ಇವರುಗಳು ಹುಲಿ ಆನೆ ಚಿರತೆ ಮುಷ್ಯ ಎಂತಹ ಪ್ರಾಣಿಯನ್ನಾದರೂ ನಿಖರವಾಗಿ ಡಾರ್ಟ್ ಮಾಡಬಲ್ಲರು ಚಾಣಾಕ್ಷರು. ಆದರೆ ಪ್ರಶ್ನೆ ಹುಟ್ಟುವುದು ಇಲ್ಲಿಂದಲೇ..ಅಪಾರ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಹೊಂದಿರುವ ಕರ್ನಾಟಕ ರಾಜ್ಯಕ್ಕೆ ಈ ನಾಲ್ವರೇ ವನ್ಯಜೀವಿ ವೈದ್ಯರು ಸಾಕೆ..ಎಂಬುದು ಪ್ರಶ್ನೆಯಾಗಿ ಮೂಡುತ್ತೆ. ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವನ್ಯಜೀವಿ ವೈದ್ಯರ ಹುದ್ದೆಗಳು ಖಾಲಿ ಇವೆ. 

READ : ಚಿರತೆಯೋ? ಬೆಕ್ಕೋ? ಇದು ಎರಡು ಹೌದು! ಪತ್ತೆಯಾಯ್ತು ಅಪರೂಪದ ಜೀವಿ!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಒಬ್ಬ ಪರ್ಮನೆಂಟ್ ಡಾಕ್ಚರ್ ಇಲ್ಲ.

ಹೌದು ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಸ್ತುವಾರಿಗೆ ಒಬ್ಬ ಖಾಯಂ ವನ್ಯಜೀವಿ ವೈದ್ಯರಿಲ್ಲ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ. ಇದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವಲ್ಲದೇ ಮತ್ತೇನು ಅಲ್ಲ. 

ಈ ಹಿಂದೆ ಡಾಕ್ಟರ್ ವಿಜಯ್ ಎಂಬುವರು ಇದ್ದರು. ಅವರು ಕೂಡ ಬಿಟ್ಟು ಹೋದರು. ಇನ್ನೊಬ್ಬ ಅಸಿಸ್ಟೆಂಟ್ ಡೈರೆಕ್ಟರ್ ಉಮಾಶಂಕರ್ ಅವರು ಕೂಡ ಕೆಲಸಕ್ಕೆ ವಿದಾಯ ಹೇಳಿ ಹೋದ್ರು. ನಿವೃತ್ತಿಯ ಆಸುಪಾಸಿನಲ್ಲಿದ್ದ ಅವರಿಗೆ ಕೆಲಸ ಸಾಕೆನಿಸಿರಬುಹುದೇನೋ ಗೊತ್ತಿಲ್ಲ. ಇದ್ದ ಇಬ್ಬರು ವೈದ್ಯರು ಬೇರೆ ಹುದ್ದೆಗೆ ಹೋದ ನಂತರ ಬನ್ನೇರು ಘಟ್ಟದಲ್ಲಿ ಖಾಯಂ ವನ್ಯಜೀವಿ ವೈದ್ಯರು ಇಲ್ಲದಂತಾಗಿದೆ. ಯಾಕೆ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ವೈದ್ಯರಾಗಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೂ ಇಲ್ಲಿದೆ ಉತ್ತರ



READ : ಬೆಂಗಳೂರು ಚಿರತೆಯ ಕೊಲೆಗಾರ ಯಾರು? ನರಭಕ್ಷಕ ಅಲ್ಲದ ಜೀವಿಯನ್ನ ಕೊಂದಿದ್ದೇಕೆ? ಜೆಪಿ ಬರೆಯುತ್ತಾರೆ

ವನ್ಯಜೀವಿ ವೈದ್ಯರು ಮತ್ತು ಅರಣ್ಯಾಧಿಕಾರಿಗಳ ಹೊಂದಾಣಿಕೆ ಕೊರತೆ

ರಾಜ್ಯದ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ವೈದ್ಯರ ಹುದ್ದೆಗಳು ಖಾಲಿ ಇದ್ದರೂ ಯಾರೊಬ್ಬ ಪಶುವೈದ್ಯರು ಅಲ್ಲಿ ನಿಯುಕ್ತಿಗೊಳ್ಳಲು ಬಯಸುವುದಿಲ್ಲ ಎಂದರೆ ಅದಕ್ಕೆ ಕಾರಣ ಅರಣ್ಯಾಧಿಕಾರಿಗಳ ವರ್ತನೆ. ವನ್ಯಜೀವಿ ವೈದ್ಯರು ಕೂಡ ಗ್ರೇಡ್ ಒನ್ ಅಧಿಕಾರಿಯ ಹುದ್ದೆಯಲ್ಲಿಯೇ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದರೂ, ಅವರು ಅರಣ್ಯಾಧಿಕಾರಿಯ ಕೆಳಗೆ ಕೆಲಸ ಮಾಡಬೇಕಾಗುತ್ತದೆ. ವನ್ಯಜೀವಿ ವಿಚಾರಗಳಲ್ಲಿ ಏಕಪಕ್ಷೀಯ ನಿರ್ದಾರ ತೆಗೆದುಕೊಳ್ಳಲು ಅಧಿಕಾರವಿಲ್ಲ. ಅದೇ ಪಶುಸಂಗೋಪಮನಾ ಇಲಾಖೆಯಲ್ಲಿ ಕೆಲಸ ಮಾಡಿದರೆ, ಈ ವೈದ್ಯರುಗಳೇ ಡ್ರಾಯಿಂಗ್ ಆಫಿಸರ್ ಗಳಾಗಿರುತ್ತಾರೆ. ಸ್ವತಂತ್ರ ನಿರ್ದಾರಗಳನ್ನು ತೆಗೆದುಕೊಳ್ಳಬಹುದು. ಮಾತೃ ಇಲಾಖೆಯಿಂದ ಅರಣ್ಯ ಇಲಾಖೆಗೆ ಬರುವ ವನ್ಯಜೀವಿ ವೈದ್ಯರು ಅರಣ್ಯಾಧಿಕಾರಿಗೆ ಕೆಲಸ ಹೀಗೆ ಮಾಡಿದರೆ ಒಳ್ಳೆಯಾದಾಗುತ್ತದೆ ಎಂದು ಸಲಹೆ ಕೊಟ್ಟರೆ ಅದನ್ನು ಸ್ವೀಕರಿಸುವ ಮನೋಭಾವದಲ್ಲಿ ಕೆಲವು ಆಯ್ದ ಅಧಿಕಾರಿಗಳಲ್ಲಿ ಇರೋದಿಲ್ಲ.

ವನ್ಯಜೀವಿ ಸೆರೆಹಿಡುವ ಅಥವಾ ಹಿಮ್ಮೆಟ್ಟಿಸುವ ಕಾರ್ಯಾಚರಣೆಲ್ಲಿ ವನ್ಯಜೀವಿ ವೈದ್ಯರ ಪಾತ್ರ ಪ್ರಮುಖವಾಗಿರುತ್ತದೆ. ಆದರೆ ಇಲ್ಲಿ ಅವರು ಸ್ವತಂತ್ರ ನಿರ್ಧಾರ ಕೈ ಗೊಳ್ಳಲು ಸಾಧ್ಯವಿರೋದಿಲ್ಲ. ಅಧಿಕಾರಿಯ ಮೂಗಿನ ನೇರಕ್ಕೆ ಕಾರ್ಯಾರಣೆಗಿಳಿಯಬೇಕಾದ ಸಂದರ್ಭದಲ್ಲಿ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಮತ್ತದೇ ವನ್ಯಜೀಲಿ ವೈದ್ಯರು. ಇತ್ತಿಚೆಗೆ ಕಾಡಾನೆಗೆ ತುತ್ತಾದ ಶಿವಮೊಗ್ಗದ ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಆಸ್ಪತ್ರೆ ಚಿಕಿತ್ಸಾ ವೆಚ್ಚ 30 ಲಕ್ಷ ರೂಪಾಯಿ ತಗುಲಿದ್ದು, ಸರ್ಕಾರ ಈವರೆಗೆ ಹಣ ಭರಿಸಿಲ್ಲ. 

ವನ್ಯಜೀವಿ ವೈದ್ಯರಿಗೆ ಕೆಲವು ಅಧಿಕಾರ ಸ್ವತಂತ್ರವಾಗಿ ನೀಡಿ, ಅವರನ್ನು ಇಲಾಖೆಯಲ್ಲಿ ಗೌರವಯುತವಾಗಿ ನಡೆಸಿಕೊಂಡರೆ, ಎಂತಹ ವೈದ್ಯರು ಕೂಡ ಕೆಲಸ ಮಾಡುತ್ತಾರೆ. ಈಗಿರುವ ಹಾಲಿ ವೈದ್ಯರಿಗೂ ಸರಿಯಾದ ಮೂಲಭೂತ ಸೌಕರ್ಯಗಳನ್ನು ಕೊಟ್ಟಿಲ್ಲ.. ಅರಣ್ಯ ಸಚಿವರಾಗಿರುವ ಈಶ್ವರ ಖಂಡ್ರೆಯವರು ಈ ಬಗ್ಗೆ ಗಮನ ಹರಿಸಿ ಇಲಾಖೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಬೇಕಿದೆ.

.