ಬೆಂಗಳೂರು ಚಿರತೆಯ ಕೊಲೆಗಾರ ಯಾರು? ನರಭಕ್ಷಕ ಅಲ್ಲದ ಜೀವಿಯನ್ನ ಕೊಂದಿದ್ದೇಕೆ? ಜೆಪಿ ಬರೆಯುತ್ತಾರೆ

JP writes about the leopard operation seen in Bangalore ಬೆಂಗಳೂರಿನಲ್ಲಿ ಕಾಣಿಸಿದ್ದ ಚಿರತೆಯ ಕಾರ್ಯಾಚರಣೆ ಬಗ್ಗೆ ಜೆಪಿ ಬರೆಯುತ್ತಾರೆ

ಬೆಂಗಳೂರು ಚಿರತೆಯ ಕೊಲೆಗಾರ ಯಾರು? ನರಭಕ್ಷಕ ಅಲ್ಲದ ಜೀವಿಯನ್ನ ಕೊಂದಿದ್ದೇಕೆ? ಜೆಪಿ ಬರೆಯುತ್ತಾರೆ

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS

SHIVAMOGGA |  ಅವೈಜ್ಞಾನಿಕ ಕಾರ್ಯಾಚರಣೆಯಿಂದ ಚಿರತೆ ಕೊಂದರೆ ಅರಣ್ಯ ಅಧಿಕಾರಿಗಳು.?.ಅಷ್ಟಕ್ಕೂ ಚಿರತೆ ಏನಾದ್ರು ಮ್ಯಾನ್ ಈಟರ್ ಆಗಿತ್ತಾ. ?. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಕೊಟ್ಟಿದ್ದೆಲ್ಲಿ ? ಜೆಪಿ ಬರೆಯುತ್ತಾರೆ

ಆ ದಿನ ನಿಜ್ಕೂ ಅರಣ್ಯ ಇಲಾಖೆ ಪಾಲಿಗೆ ಕರಾಳ ದಿನ. ವೈಜ್ಞಾನಿಕ ಮಾದರಿ ಎಲ್ಲಾ ಮಾದರಿ ಜೀವ ರಕ್ಷಕ ಉಪಕರಣಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳಿದ್ದರೂ..ಡಾರ್ಟ್ ಮಾಡಿ ಸೆರೆ ಹಿಡಿಯಬೇಕಾದ ಚಿರತೆಯನ್ನು ಕೊಂದಿದ್ದು ನಿಜಕ್ಕೂ ವಿಪರ್ಯಾಸಯ 

READ : ಹಾಲಿ ಸಿಎಂ ಮತ್ತು ಮಾಜಿ ಸಿಎಂ! ದಿಗ್ಗಜರ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ ಭದ್ರಾವತಿ ವಿಐಎಸ್​ಎಲ್​!

ಇದು ಕಾರ್ಯಾಚರಣೆಯ ವೈಫಲ್ಯತೆಯನ್ನು ಎತ್ತಿ ತೋರಿಸಿದೆ. ಬೆಂಗಳೂರು ಆನೆಕಲ್ ಬಳಿಯ ಕೂಡ್ಲುಗೇಟ್ ಅಪಾರ್ಟ್ ಮೆಂಟ್ ಬಳಿ ಕಾಣಿಸಿಕೊಂಡ ಚಿರತೆ ಜನರಲ್ಲಿ ಭೀತಿ ಹುಟ್ಟಿಸಿತ್ತೇ ವಿನಃ ಅದು ಯಾರನ್ನು ಕೊಂದಿರಲಿಲ್ಲ. ನಾಯಿಗಳು ರಾತ್ರಿ ಅಟ್ಟಿಸಿಕೊಂಡು ಹೋದ ಸಂದರ್ಭದಲ್ಲಿ ಚಿರತೆ ಓಡಿ ಹೋಗಿತ್ತು  ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಲೆಪರ್ಡ್ ಟಾಸ್ಕ್ ಫೋರ್ಸ್ ಅತ್ಯಾಧುನಿಕ ಉಪಕರಣಗಳೊಂದಿಗೆ ಕಾರ್ಯಾಚರಣೆ ಕೈಗೊಂಡಿತ್ತು. 

ಅಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಬೇಕಾದ ಎಲ್ಲಾ ಉಪಕರಣಗಳಿದ್ದವು. ಡ್ರೋನ್ ಬಳಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಸೆರೆ ಹಿಡಿಯಲ್ಪಡಬೇಕಿದ್ದ ಚಿರತೆಯನ್ನು ಅಮಾನವೀಯವಾಗಿ ಕೊಲ್ಲಲಾಯ್ತು.

ಕಾರ್ಯಾಚರಣೆಯಲ್ಲಿ ನುರಿತ ಅನುಭವಿ ವನ್ಯಜೀವಿ ವೈದ್ಯರು ಇರಲಿಲ್ಲ.

ಬೆಂಗಳೂರಿನ ಚಿರತೆ ಕಾರ್ಯಾಚರಣೆಯಯಲ್ಲಿ  ನುರಿತ ವನ್ಯಜೀವಿ ವೈದ್ಯರ ಕೊರತೆ ಎದ್ದು ಕಾಣುತ್ತಿತ್ತು. ಯಾವುದೇ ವನ್ಯಜೀವಿಯನ್ನು ಸೆರೆ ಹಿಡಿಯಹೇಕಾದ ಸಂದರ್ಭದಲ್ಲಿ  ಕಾರ್ಯಾಚರಣೆ ಒಂದೆ ರೀತಿಯಲ್ಲಿ ಇರುವುದಿಲ್ಲ. ಆನೆ ಹುಲಿ ಚಿರತೆ ಕಾಣಿಸಿಕೊಂಡಾಗ ಅಲ್ಲಿ ವಾಸ್ತವ ಸತ್ಯಗಳೇ ಬೇರೆ ಇರುತ್ತದೆ. 

ಅದರಲ್ಲೂ ಅಟ್ಯಾಕಿಂಗ್ ನೇಚರ್ ಹೊಂದಿರುವ ಚಿರತೆ ಕಾರ್ಯಾಚರಣೆಯಲ್ಲಿ ಡಾರ್ಟ್ ಮಾಡೋ ವೈದ್ಯರು ಬಹಳ ಎಚ್ಚರಿಕೆಯಿಂದ ಇರಬೇಕು. ಕಾರ್ಯಾಚರಣೆಯಲ್ಲಿ ಕನಿಷ್ಠ ಎಂದರೂ ಮೂವರು ವನ್ಯಜೀವಿ ವೈದ್ಯರು ಚಿರತೆ ಕಾಣಿಸಿಕೊಳ್ಳಬಹುದಾದ ಸ್ಥಳದಲ್ಲಿ ಆಂಬುಷ್ ನಲ್ಲಿದ್ದರೆ ಕೆಲಸ ಸಲೀಸು.

READ : ತೀರ್ಥಹಳ್ಳಿಯಲ್ಲಿ ಆರ್ಟ್ ಆಫ್​​ ಲೀವಿಂಗ್​ ನ ರವಿಶಂಕರ್ ಗುರೂಜಿ!

ಯಾವ ದಿಕ್ಕಿನಲ್ಲಿ ಚರತೆ ಸನಿಹವಾಗುತ್ತದೋ..ಆ ದಿಕ್ಕಿನಲ್ಲಿ ಸನಿಹವಿರುವ ವೈದ್ಯರು ಚಿರತೆಯನ್ನು ಡಾರ್ಟ್ ಮಾಡುತ್ತಾರೆ. ಆದರೆ ಬೆಂಗಳೂರಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವನ್ಯಜೀವಿ ವೈದ್ಯ ಡಾಕ್ಟರ್ ಕಿರಣ್ ಗೆ ಇನ್ನು ಅನುಭವ ಕಡಿಮೆ.

ಹಾಗಂತ ಅವರ ಕಾರ್ಯವೈಖರಿಯನ್ನು ಕರ್ತವ್ಯ ಪ್ರಜ್ಞೆಯನ್ನು ಅಲ್ಲಗಳೆಯುತ್ತಿಲ್ಲ. ಬದಲಾಗಿ ಇವರಿಗೆ ನುರಿತ ವೈದ್ಯರ ನೆರವು ಸಿಕ್ಕಿದ್ದರೆ, ಇಂತಹ ನೂರು ಕಾರ್ಯಾಚರಣೆಯನ್ನು ಮಾಡುವಂತ ಅನುಭವ ಅವರಿಗೆ ಸಿಗುತ್ತಿತ್ತು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹೊರಗುತ್ತಿಗೆ ವನ್ಯಜೀವಿ ವೈದ್ಯಾಗಿರುವ ಕಿರಣ್ ಮೂರ್ನಾಲ್ಕು ಕಾರ್ಯಾಚರಣೆಯಲ್ಲಿ ಪಾಲ್ಹೊಂಡಿದ್ದಾರೆ.ಅವರಿಗೆ ಅನುಭವಿ ವನ್ಯಜೀವಿ ವೈದ್ಯರು ಸಾಥ್ ನೀಡಿದ್ದರೆ, ಇವರ ಮೇಲೆ ದಾಳಿಯಾಗುತ್ತಿರಲಿಲ್ಲ.

ಅಷ್ಟಕ್ಕೂ ಸೆರೆ ಹಿಡಿಬೇಕಾದ ಪ್ರಾಣಿಗೆ ಅರವಳಿಕೆ ನೀಡುವಾಗ ಙೈಲೋಜಿನ್ ಮತ್ತು ಕೆಟಮಿನ್ ಎಂಬ ಔಷಧಿಯನ್ನು ಬಳಸಲಾಗುತ್ತದೆ. ಚಿರತೆಯಾಗಲಿ ಹುಲಿ ಆನೆ ಆಗಲಿ ಅವುಗಳ ದೇಹದ ತೂಕವನ್ನು ಅಂದಾಜಿಸಿ ಎಂಎಲ್ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರಾಣಿಯ ಮೇಲೆ ಬಂದೂಕಿನಿಂದ ಡಾರ್ಟ್ ಮಾಡಲಾಗುತ್ತದೆ. 



ಇಲ್ಲಿ ಪ್ರಾಣಿಯ ತೂಕವನ್ನು ಲೆಕ್ಕ ಮಾಡಬೇಕಾದರೆ ವನ್ಯಜೀವಿ ವೈದ್ಯರಿಗೆ  ಅಗಾಧ ಜ್ಞಾನ ಹಾಗು ಅನುಭವ ಇರಬೇಕು. ಝೈಲೋಜಿನ್  ಜಾಸ್ತಿ ಹಾಕಿದ್ರೆ ಎಲ್ಲಿ ಎಡವಟ್ಟಾಗುತ್ತದೋ ಎಂದು ಕಡಿಮೆ ಪ್ರಮಾಣದಲ್ಲಿ ಅರವಳಿಕೆ ಔಷದಿ ಬಳಸಿದರೆ, ಪ್ರಾಣಿ ಪ್ರಜ್ಞೆ ತಪ್ಪುವುದಿಲ್ಲ. ರಾಜ್ಯದ ಇತರೆಡೆ ಇರುವ ಕೆಲವು  ಅನುಭವಿ ವನ್ಯಜೀವಿ ವೈದ್ಯರು ಒಂದು ಪ್ರಾಣಿಯನ್ನು ಡಾರ್ಟ್ ಮಾಡಿದರೆ ಅದು  ಮೂರರಿಂದ ಹತ್ತು ನಿಮಿಷದಲ್ಲಿ ಪ್ರಜ್ಞೆ ತಪ್ಪುತ್ತದೆ. ಒಂದು ಗಂಟೆಯವರೆಗೂ ಅದು ಪ್ರಜ್ಞಾಹೀನವಾಗಿ ಮಲಗಿರುತ್ತದೆ.  ನಂತರ ಪ್ರಾಣಿಯನ್ನು ಕೇಜ್ ಹಾಕಿ ಸಾಗಿಸಲಾಗುತ್ತದೆ

READ : ಮಹಾರಾಜರು ಮನೆಗೆ ಊಟಕ್ಕೆ ಬರುತ್ತಾರೆ | ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿಎಸ್​ವೈ ಮಾತು!.



ಮೆಡಿಸಿನ್  ಡೋಸೇಜ್ ಪ್ರಮಾಣ ಕಡಿಮೆಯಿದ್ದರೆ ಡಾರ್ಟ್ ಆದ ಪ್ರಾಣಿ ಪ್ರಜ್ಞೆ ತಪ್ಪಲು ಕನಿಷ್ಟ 15 ರಿಂದ ಇಪ್ಪತ್ತು ನಿಮಿಷವಾದ್ರು ಬೇಕು. ಉದಾಹರಣೆ ಒಂದು ವನ್ಯ ಪ್ರಾಣಿ 40 ರಿಂದ 50 ಕೇಜಿ ಇದ್ದರೆ ಗರಿಷ್ಠ 3.5 ಎಂಎಲ್ ಅರವಳಿಕೆ ಔಷದಿಯನ್ನು ವೈದ್ಯರು ಉಪಯೋಗಿಸುತ್ತಾರೆ ಆದರೆ ನೆನ್ನೆ ಆನೆಕಲ್ ನಲ್ಲಿ ಡಾರ್ಟ್ ಮಾಡಲು ಪ್ರಯೋಗಿಸದ ಔಷಧಿ ಪರಿಮಾಮಕಾರಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 



ಹೀಗಾಗಿ ಡಾರ್ಟ್ ಆದ ಚಿರತೆ ಪ್ರಜ್ಞೆ ತಪ್ಪಲಿಲ್ಲ. ಅರೆಬರೆ ಪ್ರಜ್ಞಾವಸ್ಥೆಯಲ್ಲಿದ್ದ ಚಿರತೆ ಮತ್ತಷ್ಟು ವೈಲ್ಡ್ ಆಗಿ ಕಾರ್ಯಚರಣೆಯಲ್ಲಿದ್ದ ವೈದ್ಯರ ಮೇಲೆ ಎರಗಿದೆ. ಓರ್ವ ಸಿಬ್ಬಂದಿಯನ್ನು ಗಾಯಗೊಳಿಸಿದೆ. ಝೈಲೋಜಿನ್ ಮತ್ತು ಕೆಟಮಿನ್ ಅನ್ನು ಚಿರತೆಯ ತೂಕವನ್ನು ದೂರದ ಕಣ್ಣಿನಲ್ಲೇ ಗೇಜ್ ಮಾಡಿ, ಡಾರ್ಟ್ ಮಾಡಿದ್ದರೆ ನಿಜಕ್ಕೂ ಚಿರತೆ ಪ್ರಜ್ಞೆ ತಪ್ಪುತ್ತಿತ್ತು. ಅದನ್ನು ಕೊಲ್ಲುವ ಅಗತ್ಯವೇ ಇರಲಿಲ್ಲ. 

ಇನ್ನು ಅಪಾರ್ಟ್ ಮೆಂಟ್ ಬಳಿ ಚಿರತೆ ಕಾಣಿಸಿಕೊಂಡಾಗ ಅಲ್ಲಲ್ಲಿ ಇಟ್ಟ ಕೇಜ್ ಗಳು ಕೂಡ ಅವೈಜ್ಞಾನಿಕವಾಗಿತ್ತು. ಮನೆ ಮಾದರಿಯಂತಿರುವ ದೊಡ್ಡ ಕೇಜ್ ಇಟ್ಟಿದ್ದರೆ ಚಿರತೆ ಸಲೀಸಾಗಿ ಸೆರೆಯಾಗುತ್ತಿತ್ತು. ತುಮಕೂರಿನ ಅರಣ್ಯ ಇಲಾಖೆ ಸುಪರ್ಧಿಯಲ್ಲಿರುವ ಮನೆ ಮಾದರಿ.ಯ ಕೇಜ್ ವಿಶಾಲವಾಗಿದೆ. ಇಲ್ಲಿ ಚಿರತೆ ತನ್ನ ಬೇಟೆ ಮುಂದಿದ್ದರೂ, ಅದು ಕೇಜ್ ಎಂದು ಗ್ರಹಿಸುವಲ್ಲಿ ವಿಪಲವಾಗುತ್ತದೆ. 

ಅತ್ಯಂತ ಸೂಕ್ಷ್ಮ ಪ್ರಾಣಿಯಾಗಿರುವ ಚಿರತೆ ಸಣ್ಣ ಕೇಜ್ ನ ಒಳ ಪ್ರವೇಶಿಸುವುದು ಬಹುತೇಕ ಕಷ್ಟ ಸಾಧ್ಯ. ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಯ ಆವರಣದಲ್ಲಿ ತುಂಬಾ ಕಾಟ ಕೊಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು ತುಮಕೂರಿನಿಂದ ಕೇಜ್ ತರಿಸಿಕೊಳ್ಳಲಾಗಿತ್ತು. ಮುಂದುವರಿದ ಭಾಗವಾಗಿ ಕಾರ್ಯಾಚರಣೆ ಕೂಡ ಯಶಸ್ನಿಯಾಗಿತ್ತು. 

ಮನುಷ್ಯರನ್ನ ಕೊಲ್ಲದ ಹಾಗೂ  ಯಾರಿಗೂ ಉಪಟಳ ನೀಡದೆ ಇದ್ದ ಚಿರತೆ ನಗರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲಿ ತಪ್ಪಾಗಿ ಹೋಯ್ಟು.  ಷೆಡ್ಯುಲ್ ಒನ್ ಎನಿಮಲ್ ಅನ್ನು ಸೆರೆ ಹಿಡಿಯಲು ನುರಿತ ವೈದ್ಯರನ್ನು ಬಳಸಿಕೊಳ್ಳದೆ, ಕಾರ್ಯಾಚರಣೆ ವಿಫಲವಾಗುತ್ತಿದ್ದಂತೆ ಬಂದೂಕಿನಿಂದ ಗುರಿ ಇಟ್ಟು ಕೊಂದಿದ್ದು,.ಯವ ನ್ಯಾಯ? 

ಕೊಂದ ನಂತರ ಡಾರ್ಟ್ ಮಾಡುವುದು ಪೊಲೀಸರ ನಕಲಿ ಎನ್ಕೌಂಟರ್ ದೃಶ್ಯ ವೈಭವದಂತಿದೆ. ಸತ್ತ ಪ್ರಾಣಿಯನ್ನು ಡಾರ್ಟ್ ಮಾಡುವ ಹಿಂದಿನ ಉದ್ದೇಶ ಇಲಾಖೆಯ ಆಂತರೀಕ ತನಿಖೆ, ಎನ್.ಜಿ ಓ ಗಳ ಹಾಗು ಪ್ರಾಣಿ ಪ್ರೀಯರ ಕಾನೂನಿನ ಹೋರಾಟದಿಂದ ತಪ್ಪಿಸಿಕೊಳ್ಳುವ ವಾಮಮಾಗವಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.