ಹಬ್ಬಗಳ ನಡುವೆ ಫ್ಲೆಕ್ಸ್​ ಕಿರಿಕಿರಿಗೆ ಕಡಿವಾಣ ಹಾಕುತ್ತಾ ಜಿಲ್ಲಾಡಳಿತ? ಶಿವಮೊಗ್ಗ ಪ್ರಮುಖ ಸರ್ಕಲ್​​ಗಳಲ್ಲಿ ಬೇಕಿದೆ ನಿಯಮ! ಏಕೆ ಗೊತ್ತಾ?

Is the district administration restricting flexes between festivals? Shimoga needs rules in major circles! Do you know why?ಹಬ್ಬಗಳ ನಡುವೆ ಫ್ಲೆಕ್ಸ್​ಗಳಿಗೆ ಕಡಿವಾಣ ಹಾಕುತ್ತಾ ಜಿಲ್ಲಾಡಳಿತ? ಶಿವಮೊಗ್ಗ ಪ್ರಮುಖ ಸರ್ಕಲ್​​ಗಳಲ್ಲಿ ಬೇಕಿದೆ ನಿಯಮ! ಏಕೆ ಗೊತ್ತಾ?

ಹಬ್ಬಗಳ ನಡುವೆ  ಫ್ಲೆಕ್ಸ್​ ಕಿರಿಕಿರಿಗೆ ಕಡಿವಾಣ ಹಾಕುತ್ತಾ ಜಿಲ್ಲಾಡಳಿತ? ಶಿವಮೊಗ್ಗ  ಪ್ರಮುಖ ಸರ್ಕಲ್​​ಗಳಲ್ಲಿ ಬೇಕಿದೆ ನಿಯಮ!  ಏಕೆ ಗೊತ್ತಾ?

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS

ಕಳೆದ ವರ್ಷದ ಆ ಘಟನೆ ಶಿವಮೊಗ್ಗದವರಿಗೆ ಸ್ಪಷ್ಟವಾಗಿ ನೆನಪಿದೆ. ಆ ಸಂದರ್ಭಕ್ಕೆ ಕಾರಣವಾದ ವಿಚಾರ,  ಪೊಲೀಸ್ ಇಲಾಖೆಗೆ ದೊಡ್ಡ ಕೆಲಸವನ್ನೆ ಕೊಟ್ಟಿತ್ತು. ಅಲ್ಲದೆ ಶಿವಮೊಗ್ಗದ ಶಾಂತಿಗೆ ಭಂಗವಾಗಿತ್ತು. ಆವತ್ತಿನ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಡಳಿತವನ್ನು ಮಾಧ್ಯಮಗಳು ಒಂದು ಪ್ರಶ್ನೆಯನ್ನು ಪ್ರಮುಖವಾಗಿ ಕೇಳಿದ್ದವು. ಎಲ್ಲದಕ್ಕೂ ಕಾರಣವಾಗುತ್ತಿರುವುದು ಫ್ಲೆಕ್ಸ್​ , ಬ್ಯಾನರು, ಬಂಟಿಂಗ್ಸ್​ಗಳು. ಅವುಗಳ ನಿಷೇಧಕ್ಕೆ ಕ್ರಮ ಕೈಗೊಳ್ಳುತ್ತೀರಾ ಎಂಬುದೇ ಪ್ರಶ್ನೆಯಾಗಿತ್ತು.  

ಮತ್ತದೇ ಪ್ರಶ್ನೆ?

ಅಂದಿನ ಸನ್ನಿವೇಶಕ್ಕೆ ತಕ್ಕಂತೆ  ಅಂದು, ಕಠಿಣ ಕ್ರಮಗಳನ್ನು ಜಿಲ್ಲಾಡಳಿತ ಹಾಗೂ ಶಿವಮೊಗ್ಗ ಪೊಲೀಸ್ ಇಲಾಖೆ ಕೈಗೊಂಡಿತ್ತು. ಆನಂತರ ಫ್ಲೆಕ್ಸ್​ ಬ್ಯಾನರ್​ಗಳ ವಿಚಾರವೂ ತಣ್ಣಗಾಗಿತ್ತು. ಇದೀಗ ಅಂದಿನ ಪ್ರಶ್ನೆ ಮತ್ತೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಶಿವಮೊಗ್ಗ ನಗರದ ಪ್ರಮುಖ ಸರ್ಕಲ್​ಗಳಲ್ಲಿ, ಮುಖ್ಯವಾಗಿ ಅಮೀರ್ ಅಹಮದ್ ವೃತ್ತದಲ್ಲಿ ಫ್ಲೆಕ್ಸ್​ ಬ್ಯಾನರ್​ಗಳನ್ನು ನಿಷೇಧ ಮಾಡಿದರೆ ಒಳಿತು ಎಂಬುದು ಸಮಾಜದ ಮುಖ್ಯವಾಹಿನಿಯ ಪ್ರಮುಖರ ಅಭಿಪ್ರಾಯ. ಇದಕ್ಕೆ ಕಾರಣ ಹಿಂದೆ ನಡೆದ ಶಾಂತಿ ಭಂಗ

ಒಟ್ಟೊಟ್ಟಿಗೆ ಮೆರವಣಿಗೆ

ಈ ಸಲ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಈದ್ ಮೀಲಾದ್ ಒಟ್ಟೊಟ್ಟಿಗೆ ಬರುವ ಸಾಧ್ಯತೆ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಎಸ್​ಪಿ ನೇತೃತ್ವದಲ್ಲಿ ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಅಲ್ಲದೆ ಮಿಥುನ್​ ಕುಮಾರ್​ ಜಿಕೆಯವರು ಈಗಾಗಲೇ ಶಾಂತಿ ಸಭೆ ನಡೆಸಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಈ ಕ್ರಮಗಳ ಜೊತೆಯಲ್ಲಿ ಶುಭಾಶಯಗಳನ್ನು ಕೋರುವಂತಹ ಫ್ಲೆಕ್ಸ್​ಗಳು ಸೇರಿದಂತೆ ಎಲ್ಲಾ ರೀತಿ ಫ್ಲೆಕ್ಸ್​ಗಳಿಗೆ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ನಿಷೇಧಿಸಿದರೆ, ವಿನಾಕಾರಣ ಆಗುವ ಸಮಸ್ಯೆಗಳನ್ನ ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಯಿಂದ ಸೂಕ್ತ ಮಾಹಿತಿ  ಹೊರಬೀಳಬೇಕಿದೆ. 

ಕಳೆದ ವರ್ಷ

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ದಿನ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದರೆ, ಶಿವಮೊಗ್ಗ ಆತಂಕದಲ್ಲಿತ್ತು. ಫ್ಲೆಕ್ಸ್ ವಿಚಾರವೊಂದು ಸಿಟಿಯಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು. ಅಂದು  ಶಾಂತಿ ನೆಮ್ಮದಿ ಕಳೆದುಕೊಂಡಿದ್ದ ಶಿವಮೊಗ್ಗ ನಗರ ಸದ್ಯ ತಣ್ಣಗಿದೆ. ಸನ್ನಿವೇಶ ಹೀಗೆ ತಣ್ಣಗಿರಲಿ, ಎಲ್ಲರೂ ನೆಮ್ಮದಿಯಾಗಿರಲಿ ಎಂಬುದು ಎಲ್ಲರ ಉದ್ದೇಶವೂ ಆಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಡುವಿಲ್ಲದ ಶ್ರಮವಹಿಸ್ತಿದೆ ಎಂಬುದರಲ್ಲಿಯು ಎರಡು ಮಾತಿಲ್ಲ. ಅದರ ಜೊತೆಯಲ್ಲಿ  ಒಟ್ಟೊಟ್ಟಿಗೆ ನಡೆವ ಧಾರ್ಮಿಕ ಆಚರಣೆಗಳಿಗೆ ಶುಭಕೋರಲೆಂದೇ ತಲೆಯೆತ್ತುವ ನೂರಾರು ಫ್ಲೆಕ್ಸ್​ಗಳ  ಮೇಲೂ ಒಂದಿಷ್ಟು ಕಡಿವಾಣ ಹಾಕಲಿ ಎಂಬ ಅಭಿಪ್ರಾಯ ಜನರದ್ದಾಗಿದೆ. 

 ಅಮೀರ್ ಅಹಮದ್ ಸರ್ಕಲ್ ಮತ್ತು ಅದರ ನೆನಪು

ಅಮೀರ್​ ಅಹಮದ್ ವೃತ್ತ ಶಿವಮೊಗ್ಗ ನಗರದ ಪ್ರಮುಖ ಸರ್ಕಲ್​ ಅಷ್ಟೆಅಲ್ಲ, ಮೆರವಣಿಗೆಗಳಿಗೆ ಸಾಕ್ಷಿಯಾಗುವ ಪ್ರಮುಖ ಸ್ಥಳವಾಗಿದೆ. ಈ ಹಿಂದೆ ನಡೆದಿದ್ದ ಅಹಿತಕರ ಘಟನೆಗಳಿಗೂ ಈ ಸರ್ಕಲ್​ ಮೂಕ ಸಾಕ್ಷಿಯಾಗಿತ್ತು. ಹಿಂದೆಲ್ಲಾ   ಸರ್ಕಲ್ ನಲ್ಲಿ ಧಾರ್ಮಿಕ ಆಚರಣೆ ವೇಳೇ ಅಲಂಕಾರಕ್ಕಾಗಿ ಅಷ್ಟು ಮಹತ್ವ ನೀಡಲಾಗುತ್ತಿರಲಿಲ್ಲ.  ಸರ್ಕಲ್​ ನಡುವೆ  ವಿಶಾಲವಾದ ವೃತ್ತ ನಿರ್ಮಾಣವಾದ ನಂತರ ಅಲಂಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು. ಬಣ್ಣ ಬಣ್ಣಗಳಲ್ಲಿ ಸಿಂಗಾರಗೊಳ್ಳುವ ಸರ್ಕಲ್​​ನಲ್ಲಿ ಫ್ಲೆಕ್ಸ್​ಗಳನ್ನು ನಿರ್ದಿಷ್ಟ ಜಾಗಕ್ಕೆ ಸೀಮಿತಗೊಳಿಸಬೇಕಿದೆ ಅಥವಾ ಲಿಮಿಟೇಷನ್​ಗಳನ್ನು ಅನ್ವಯಿಸಬೇಕಿದೆ. 

ಒಟ್ಟಾರೆ , ಜಿಲ್ಲಾಡಳಿತ ಹಬ್ಬಗಳ ಬಂದೋಬಸ್ತ್​ ಮೇಲ್ವಿಚಾರಣೆ ನಡುವೆ,  ಪ್ಲೆಕ್ಸ್ ಬ್ಯಾನರ್ ಬಂಟಿಂಗ್ಸ್ ಅಳವಡಿಸುವ ಬಗ್ಗೆ ಸೂಕ್ತ ಜಾಗಗಳನ್ನು ಗುರುತಿಸಬೇಕಿದೆ. ಜೊತೆಯಲ್ಲಿ ಶಾಂತಿಯುತವಾಗಿ ಹಬ್ಬಗಳನ್ನ ಆಚರಿಸುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರ ಪ್ರಯತ್ನಕ್ಕೆ ಸರ್ವಧರ್ಮದ ಮುಖಂಡರು ಜಿಲ್ಲಾಡಳಿತದ ಜೊತೆ ಕೈಜೋಡಿಸಬೇಕಿದೆ.

ಇನ್ನಷ್ಟು ಸುದ್ದಿಗಳು



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು