ಕುವೆಂಪುರವರ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಕವಿಶೈಲದ ಬಂಡೆ ಮೇಲೆ ಹಾಡು ಹಾಡಿದ್ದೀರಾ!? ಕವಿನಮನದ ಹಳೆ ನೆನಪಿನ ವಿಡಿಯೋ ನೋಡಿ

ಕುವೆಂಪು ಸಾಹಿತ್ಯದ ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ ಪರ್ವತಾರಣ್ಯ ಪ್ರಪಂಚದಂತೆ ಬೆರಗು ಹುಟ್ಟಿಸುತ್ತವೆ.ಇದೆಲ್ಲದಕ್ಕೂ ಸ್ಪೂರ್ತಿಯಾದದ್ದು ಕವಿಶೈಲ.ಕವಿಶೈಲದಲ್ಲಿ ಕಂಡ ದೃಶ್ಯಗಳನ್ನು ಕುವೆಂಪು ಹಲವಾರು ಕವನಗಳಲ್ಲಿ ಕಡೆದಿಟ್ಟಿದ್ದಾರೆ.ಕವಿಯೇ ಹೇಳುವಂತೆ ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲು ಕಾಡು.ಕಲಾವಂತನಿಗೆ ಅದು ಸಗ್ಗವೀಡು A story about Rashtrakavi Kuvempu

A story about Rashtrakavi Kuvempu ಕಲಾವಂತನಿಗೆ ಅದು ಸಗ್ಗವೀಡು : ಕುವೆಂಪು ಚಿಕ್ಕವರಿದ್ದಾಗಿನಿಂದಲೇ ಆಕರ್ಷಿತರಾಗಿ ಪದೇ ಪದೇ ಭೇಟಿ ನೀಡುತ್ತಿದ ಸ್ಥಳ ಕವಿಶೈಲ.ಮಹಾಕವಿಯ ಸ್ಪೂರ್ತಿಯ ತಾಣ.ದಟ್ಟ ಹಸಿರಿನ ಬೆಟ್ಟಗಳ ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು,ಸುತ್ತಲಿನ ನಿಸರ್ಗ ಸೌಂದರ್ಯವನ್ನು  ನೋಡುವುದೇ ಒಂದು ಸೊಗಸು.ಮಲೆನಾಡಿನ ಪರ್ವತಗಳಲ್ಲಿ ಅಂತಹ ಸ್ಥಾನಗಳು ಅಪೂರ್ವ.ಆ ಸ್ಥಳಕ್ಕೆ ಕವಿಶೈಲವೆಂದು ಕುವೆಂಪು ಅವರೇ ನಾಮಕರಣ ಮಾಡಿದ್ದಾರೆ.

ಇದನ್ನು ಓದಿ : ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?

ಕುವೆಂಪು ಸಾಹಿತ್ಯದ ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ ಪರ್ವತಾರಣ್ಯ ಪ್ರಪಂಚದಂತೆ ಬೆರಗು ಹುಟ್ಟಿಸುತ್ತವೆ.ಇದೆಲ್ಲದಕ್ಕೂ ಸ್ಪೂರ್ತಿಯಾದದ್ದು ಕವಿಶೈಲ.ಕವಿಶೈಲದಲ್ಲಿ ಕಂಡ ದೃಶ್ಯಗಳನ್ನು ಕುವೆಂಪು ಹಲವಾರು ಕವನಗಳಲ್ಲಿ ಕಡೆದಿಟ್ಟಿದ್ದಾರೆ.ಕವಿಯೇ ಹೇಳುವಂತೆ ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲು ಕಾಡು.ಕಲಾವಂತನಿಗೆ ಅದು ಸಗ್ಗವೀಡು.ಕವಿಶೈಲದಲ್ಲಿ ಕಂಡ ಎಲ್ಲಾ ದೃಷ್ಯ ವೈವಿಧ್ಯಗಳನ್ನು ಕವನದಲ್ಲಿ ಹಿಡಿದಿಡಲು ಸಾದ್ಯವೇ ಎಂದು ಸ್ವತ ಕವಿಯೇ ಪ್ರಶ್ನಿಸಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ