ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?

ಮ್ಯೂಸಿಯಂ ನಲ್ಲಿ ಕುವೆಂಪುರವರ ಭಾವಚಿತ್ರಗಳು,ಕುವೆಂಪು ಬಳಸುತ್ತಿದ್ದ ವಸ್ತುಗಳು,ಅವರ ಹಸ್ತ ಪ್ರತಿಗಳು,ಕೃತಿಗಳು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಗೃಹೋಪಯೋಗಿ ವಸ್ತುಗಳು ಪ್ರದರ್ಶನಕ್ಕಿಡಲಾಗಿದೆ.ಕುವೆಂಪುರವರು ಜೀವಮಾನದಲ್ಲಿ ಗಳಿಸಿದ ಪ್ರಶಸ್ತಿಗಳನ್ನು ಇಲ್ಲಿ ಕಾಣಬಹುದಾಗಿದೆ.ಕವಿಮನೆಯನ್ನು ನೋಡಲು ಒಂದು ದಿನವಾದರೂ ಸಾಲದು.ಈಗ ಕವಿಮನೆ ಕವಿಶೈಲ ಪ್ರವಾಸಿತಾಣವಾಗಿದ್ದು, ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತಿದೆ.

ಕುಪ್ಪಳಿಯಲ್ಲಿ  ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?

ಕುವೆಂಪುರವರ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದ ಕವಿಶೈಲ,ಇಲ್ಲಿನ ನಿಸರ್ಗ  ಸೌಂದರ್ಯ ಅವರನ್ನು ರಾಷ್ಟ್ರಕವಿಯನ್ನಾಗಿಸಿದರೆ, ಮನುಜಮತ ವಿಶ್ವಪಥದ ಚಿಂತನೆಗೆ ಓರೆ ಹಚ್ಚಿದ ಇಲ್ಲಿನ ಪರಿಸರ ವಿಶ್ವಮಾನವರನ್ನಾಗಿಸಿದೆ. ಅಂದಹಾಗೆ,ರಸಋಷಿ ಚಿಂತನೆಗಳಿಗೆ ಸ್ಪೂರ್ತಿಯ ಸೆಲೆಯಾದ ಆ ಪರಿಸರ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಎಂಬ ಪುಟ್ಟಗ್ರಾಮ.ಕುವೆಂಪುರವರ 116 ನೇ ಜನ್ಮದಿನದ ಆಚರಣೆ ಸಂದರ್ಭದಲ್ಲಿ ಕುಪ್ಪಳಿ ಪರಿಸರದ ಕುರಿತು ವಿಶೇಷ ವರದಿ ಇಲ್ಲಿದೆ. 

ಧ್ಯಾನಾಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ : ಎಂದು ವರ್ಣಿಸಿರುವ ರಾಷ್ಟ್ರಕವಿ ಕುವೆಂಪು ಯಾವ ಪರಿಸರವನ್ನು ನೋಡಿ ಈ ರೀತಿ ಕವಿತೆಯನ್ನು ರಚಿಸಿದರೆಂದು ಅಚ್ಚರಿಯಾಗಬಹುದಲ್ಲವೇ. ಹೌದು ಕವಿ ಮನಸ್ಸಿಗೆ ಮುದವನ್ನು ನೀಡಿ ಅವರ ಬರವಣಿಗೆಗೆ ಸ್ಪೂರ್ತಿ ಪ್ರೇರಣೆ ನೀಡಿದ ಆ ಸ್ಥಳ ಕುಪ್ಪಳಿ ಕುಗ್ರಾಮದ ಪರಿಸರ.ತೀರ್ಥಹಳ್ಳಿ ತಾಲೂಕಿನಿಂದ 12 ಕಿಲೋಮೀಟರ್ ದೂರಲ್ಲಿರುವ ಕುಪ್ಪಳ್ಳಿ ಗ್ರಾಮ,ಪ್ರಕೃತಿ ಸೌಂದರ್ಯದ ನೆಲೆವೀಡಾದ ಸಹ್ಯಾದ್ರಿ ಶ್ರೇಣಿಯ ಗುಡ್ಡಬೆಟ್ಟಗಳ ನಡುವೆ ಇರುವ ಪುಟ್ಟಹಳ್ಳಿ.ಕುಪ್ಪಳಿ ಪರಿಸರ ರಸರುಷಿಯ ಬಾಲ್ಯದ ರಸ ಜೀವನದ ಬದುಕಿಗೆ, ಉಸಿರನ್ನಿತ್ತು ಪೊರೆದ ಪವಿತ್ರ ಸ್ಥಳ.

ಸರ್ವಜನಾಂಗದ ಶಾಂತಿಯ ತೋಟ: ಕುಪ್ಪಳ್ಳಿಯು ಪುಟ್ಟ ಕೋಟೆಯಂತಿರುವ ಹೆಮ್ಮನೆ.ಕುಪ್ಪಳಿ ಮನೆ ವನಾಲಂಕೃತ ಗಿರಿ ಶ್ರೇಣಿಗಳ ತಪ್ಪಲಲ್ಲಿ ಕೂತಿದೆ.ಸುಮಾರು 200ರಿಂದ 250 ವರ್ಷಗಳಷ್ಟು ಹಳೆಯದಾದ ಕವಿಯ ಮನೆ. ಮಲೆನಾಡಿನ ನೈಜತೆಯನ್ನು ಅನಾವರಣಗೊಳಿಸುತ್ತದೆ.ಕುವೆಂಪು ಬಾಲ್ಯದಿಂದ ಆಡಿ ಬೆಳೆದ ದೊಡ್ಡಮನೆಯನ್ನು ನೋಡುವುದೇ ಒಂದು ಸೊಬಗು.ಕುವೆಂಪು ಮರಣಾ ನಂತರ ಮನೆ ಕುಸಿಯುವ ಹಂತಕ್ಕೆ ತಲುಪಿತ್ತು.ಹಾಗೆಯೇ ಕವಿಶೈಲ ಸುತ್ತಣ ಕಾಡು ಬರಿದಾಗಿ ಬೋಳುಗುಡ್ಡಗಳಾಗುವ ಸ್ಥಿತಿಯಲ್ಲಿತ್ತು.ಕವಿ ಮನೆ ಪರಿಸರವನ್ನು  ಉಳಿಸುವುದಕ್ಕಾಗಿ ಸರ್ಕಾರ 1992 ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನ  ಅಸ್ತಿತ್ವಕ್ಕೆ ತಂದಿತು.ಮನೆಯಲ್ಲಿ ವಾಸವಾಗಿದ್ದ ವಾರಸುದಾರರಿಂದ ಮನೆಯನ್ನು ಪಡೆದುಕೊಂಡು ನವೀಕರಿಸಲು ಪ್ರತಿಷ್ಟಾನ ಮುಂದಾಯಿತು.ಕವಿ ಮೂಲ ಮನೆಗೆ ದಕ್ಕೆಯಾಗದ ರೀತಿ ಕವಿಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಮನೆಯನ್ನು ವ್ಯವಸ್ಥಿತ ಮ್ಯೂಸಿಯಂ ನ್ನಾಗಿ ರೂಪಿಸಲಾಗಿದೆ.

ಕವಿ ಮನೆ ನೋಡಲು ಸುಂದರ : ಮ್ಯೂಸಿಯಂ ನಲ್ಲಿ ಕುವೆಂಪುರವರ ಭಾವಚಿತ್ರಗಳು,ಕುವೆಂಪು ಬಳಸುತ್ತಿದ್ದ ವಸ್ತುಗಳು,ಅವರ ಹಸ್ತ ಪ್ರತಿಗಳು,ಕೃತಿಗಳು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಗೃಹೋಪಯೋಗಿ ವಸ್ತುಗಳು ಪ್ರದರ್ಶನಕ್ಕಿಡಲಾಗಿದೆ.ಕುವೆಂಪುರವರು ಜೀವಮಾನದಲ್ಲಿ ಗಳಿಸಿದ ಪ್ರಶಸ್ತಿಗಳನ್ನು ಇಲ್ಲಿ ಕಾಣಬಹುದಾಗಿದೆ.ಕವಿಮನೆಯನ್ನು ನೋಡಲು ಒಂದು ದಿನವಾದರೂ ಸಾಲದು.ಈಗ ಕವಿಮನೆ ಕವಿಶೈಲ ಪ್ರವಾಸಿತಾಣವಾಗಿದ್ದು, ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತಿದೆ.

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

ಕಲಾವಂತನಿಗೆ ಅದು ಸಗ್ಗವೀಡು : ಕುವೆಂಪು ಚಿಕ್ಕವರಿದ್ದಾಗಿನಿಂದಲೇ ಆಕರ್ಷಿತರಾಗಿ ಪದೇ ಪದೇ ಭೇಟಿ ನೀಡುತ್ತಿದ ಸ್ಥಳ ಕವಿಶೈಲ.ಮಹಾಕವಿಯ ಸ್ಪೂರ್ತಿಯ ತಾಣ.ದಟ್ಟ ಹಸಿರಿನ ಬೆಟ್ಟಗಳ ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು,ಸುತ್ತಲಿನ ನಿಸರ್ಗ ಸೌಂದರ್ಯವನ್ನು  ನೋಡುವುದೇ ಒಂದು ಸೊಗಸು.ಮಲೆನಾಡಿನ ಪರ್ವತಗಳಲ್ಲಿ ಅಂತಹ ಸ್ಥಾನಗಳು ಅಪೂರ್ವ.ಆ ಸ್ಥಳಕ್ಕೆ ಕವಿಶೈಲವೆಂದು ಕುವೆಂಪು ಅವರೇ ನಾಮಕರಣ ಮಾಡಿದ್ದಾರೆ.ಕುವೆಂಪು ಸಾಹಿತ್ಯದ ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ ಪರ್ವತಾರಣ್ಯ ಪ್ರಪಂಚದಂತೆ ಬೆರಗು ಹುಟ್ಟಿಸುತ್ತವೆ.ಇದೆಲ್ಲದಕ್ಕೂ ಸ್ಪೂರ್ತಿಯಾದದ್ದು ಕವಿಶೈಲ.ಕವಿಶೈಲದಲ್ಲಿ ಕಂಡ ದೃಶ್ಯಗಳನ್ನು ಕುವೆಂಪು ಹಲವಾರು ಕವನಗಳಲ್ಲಿ ಕಡೆದಿಟ್ಟಿದ್ದಾರೆ.ಕವಿಯೇ ಹೇಳುವಂತೆ ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲು ಕಾಡು.ಕಲಾವಂತನಿಗೆ ಅದು ಸಗ್ಗವೀಡು.ಕವಿಶೈಲದಲ್ಲಿ ಕಂಡ ಎಲ್ಲಾ ದೃಷ್ಯ ವೈವಿಧ್ಯಗಳನ್ನು ಕವನದಲ್ಲಿ ಹಿಡಿದಿಡಲು ಸಾದ್ಯವೇ ಎಂದು ಸ್ವತ ಕವಿಯೇ ಪ್ರಶ್ನಿಸಿದ್ದಾರೆ.

ಇದನ್ನು ಸಹ ಓದಿ : ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ

ಧ್ಯಾನಾಸ್ಥಯೋಗಿಯಾಗಿದೆ ಕವಿಶೈಲ : ಹಾಗಾಗಿ ಕವಿಗೆ ಕವಿಶೈಲ ಒಂದೊಂದು ಸಲವೂ ಕಲಾದೃಷ್ಠಿಯ ದರ್ಶನವನ್ನು ಉದ್ದೀಪನಂಗೈಯುವ ತಾಣವಾಗಿದೆ.ಶತಮಾನಗಳಿಂದ ಕವಿಶೈಲ ಇಂದಿಗೂ ಸಹ ಧ್ಯಾನಸ್ಥ ಯೋಗಿಯಂತೆ ಎಲ್ಲರನ್ನು ತನ್ನತ್ತ ಸೆಳೆಯುತ್ತಾ ತನ್ನ ಸೊಬಗನ್ನು ಉಳಿಸಿಕೊಂಡಿದೆ.ಈ ಪರಿಸರದಲ್ಲಿ ಮೌನ ಕ್ರಾಂತಿಯನ್ನು ನಡೆಸುತ್ತಿದೆ.ಕುವೆಂಪು ಬರಹಕ್ಕೆ ಕಲಿಶೈಲ ಪರಿಸರ ಎಷ್ಟು ಸ್ಪೂರ್ತಿಯಾಗಿತ್ತು ಎಂಬುದಕ್ಕೆ ಅವರ ದೂರದೃಷ್ಟಿಯುಳ್ಳ ಬರಹಗಳೇ ಸಾಕ್ಷಿಯಾಗಿದೆ.ಇಂದಿಗೂ ಕವಿಶೈಲದಲ್ಲಿ ಕೂತು,ಪ್ರವಾಸಿಗರು ಕುವೆಂಪುರವರ ಕವನಗಳನ್ನು ಹಾಡುತ್ತಾ ಮೈ ಮರೆಯುತ್ತಾರೆ.ಕುವೆಂಪುರವರಿಗೆ ಪ್ರೇರಣೆ ನೀಡಿದ ತಪೋಭೂಮಿ ಇಲ್ಲಿನ ಪ್ರವಾಸಿಗರಿಗೂ ಪ್ರೇರಣೆ ನೀಡುತ್ತದೆ.ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಮೊದಲ ಪ್ರವಾಸಿಗನೂ ಇಲ್ಲಿ ಕವಿಯಾಗುತ್ತಾನೆ.ಕುವೆಂಪು ಆಪ್ತ ಸ್ನೇಹಿತರು ಸಾಹಿತಿಗಳು ಆಗಾಗ ಕಪ್ಪಳಿಯ ಕವಿಶೈಲಕ್ಕೆ ಭೇಟಿ ನೀಡುತ್ತಿದ್ದರು.1936ರಲ್ಲಿ ಕವಿಶೈಲದ ಬಂಡೆಯ ಮೇಲೆ ದೇವರ ರುಜುವಿನ ಸಮ್ಮುಖದಲ್ಲಿ ತಮ್ಮ ಭೇಟಿಯ ನೆನಪುಗಳನ್ನು ಉಳಿಸಿಹೋಗಿದ್ದಾರೆ.

ಇದನ್ನು ಸಹ ಓದಿ : ಅಡಿಕೆ ಕೊಯ್ಲಿನ ನಡುವೆ ಗೃಹಸಚಿವರ ತವರು ತೀರ್ಥಹಳ್ಳಿಯಲ್ಲಿ ಹೆಚ್ಚಿದ ಒಂಟಿಮನೆಗಳ ಕಳ್ಳತನ

ಕವಿಶೈಲದಲ್ಲಿಯೇ ಕುವೆಂಪು ಲೀನ : ಬಾಲ್ಯದ ಒಡನಾಡಿಯಾಗಿ ನಂತರ ಸ್ಮೃತಿಕೋಶದ ಭಾಗವಾಗಿ ಕುವೆಂಪುರವರನ್ನು ಜೀವನದುದ್ದಕ್ಕೂ ಪ್ರಭಾವಿಸಿದ ಕವಿಶೈಲದಲ್ಲಿಯೇ 11.11.1994 ರಂದು ಅವರ ಭೌತಿಕ ಶರೀರ ಲೀನವಾಯಿತು.ಕವಿಯ ಪ್ರೀತಿಯ ಕವಿಶೈಲದ ಹಾಸು ಬಂಡೆಯ ಮೇಲೆ ಕುವೆಂಪುರವರ ಅಂತಿಮ ಸಂಸ್ಕಾರ ನಡೆಯಿತು.ಆ ಜಾಗವೀಗ ಇಲ್ಲಿನ ಪ್ರಕೃತಿಯ ಚೆಲುವಿನೊಡನೆ ಸೇರಿ ಪವಿತ್ರ ಪ್ರಭಾವಲಯವೊಂದನ್ನು ಸೃಷ್ಟಿಸಿದೆ.

ಕವಿಶೈಲ ಈಗ ಪ್ರವಾಸಿ ತಾಣವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಕವಿಯ ನಿಧನದ ನಂತರ ನಿರ್ಮಾಣಗೊಂಡಿರುವ ಶಿಲಾ ಸ್ಮಾರಕಗಳು ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತಿವೆ.ಇವು ಪಾರಂಪಾರಿಕಾ ಸ್ಮಾರಕಗಳಿಗೆ ಭಿನ್ನವೋ ಎಂಬಂತಿವೆ.ಕವಿಯ ಕವನಗಳು ಕೆತ್ತನೆ ರೂಪದಲ್ಲಿ ರಾರಾಜಿಸುತ್ತವೆ.ಕವಿಶೈಲದ ಸೂರ್ಯಸ್ಥ,ಹಚ್ಚ ಹಸಿರಿನ ಬೆಟ್ಟಗಳ ನೋಟ,ಕವಿ ಕೂತು ಬರೆಯುತ್ತಿದ್ದ ಜಾಗ,ಕವಿ ಸಮಾದಿ ಎಲ್ಲವೂ ಪವಿತ್ರತಾಣವಾಗಿದೆ

ಇದನ್ನು ಸಹ ಓದಿ : ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ

ಪೂರ್ಣಚಂದ್ರ ತೇಜಸ್ವಿ ಸಮಾದಿ ಪ್ರವಾಸಿಗರ ಆಕರ್ಷಣೆ ಕೇಂದ್ರಬಿಂದು :ಕುವೆಂಪು ಪರಿಸರ ಇಂದು ಜೈವಿಕ ತಾಣವಾಗಿದ್ದು,ದಟ್ಟ ಕಾನನದಿಂದ ಕೂಡಿದೆ.ಪಕ್ಕದಲ್ಲಿಯೇ ಪೂರ್ಣಚಂದ್ರ ತೇಜಸ್ವಿಯವರ ಸಮಾಧಿ ಇದ್ದು ಪ್ರಕೃತಿಯ ಹಲವಾರು ವಿಸ್ಮಯಗಳನ್ನು ಅದು ಸಾರಿ ಹೇಳುತ್ತದೆ.ಸಮಾಧಿ ಬಳಿ ನಿಂತರೆ ತೇಜಸ್ವಿಯವರ ಎಲ್ಲಾ ಸಾಹಿತ್ಯ ಕಣ್ಣಮುಂದೆ ಹರಿದಾಡುತ್ತದೆ.ಕವಿ ಆಶಯದಂತೆ ಕುವೆಂಪು ಪ್ರತಿಷ್ಟಾನ ಕೆಲಸ ಮಾಡಿಕೊಂಡು ಬರುತ್ತಿದೆ.

ಕುವೆಂಪು ಜನ್ಮದಿನೋತ್ಸವ ಭವನದಲ್ಲಿ ತೇಜಸ್ವಿಯವರನ್ನು ಪರಿಚಯಿಸುವ ಆರ್ಟ್ ಗ್ಯಾಲರಿ ಇದೆ . ಮಲ್ಟಿಮೀಡಿಯಾದ ಮೂಲಕ ಕುವೆಂಪುರವರನ್ನು ಈಗಾಗಲೇ ಪರಿಚಯಿಸಲಾಗಿದೆ.ಕುವೆಂಪುರವರ ನುಡಿತೋರಣ ಅಂದರೆ ಕುವೆಂಪು ಬರಹದ ಆಯ್ದ 650 ಕೊಟೇಷನ್ ಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಕುವೆಂಪು ಸಾಹಿತ್ಯ ಕುರಿತ ಕಿರು ಸಾಕ್ಷ್ಯಾ ಚಿತ್ರ,ಹಾಗು ತೇಜಸ್ವಿಯವರ ಮಲೆನಾಡ ಹಕ್ಕಿಗಳ ಪೋಟೋ ಮತ್ತು ಕುವೆಂಪುರವರ ಪದ್ಯದ ಸಾಲುಗಳನ್ನು ಬಳಸಿಕೊಂಡು ಗ್ರೀಟಿಂಗ್ ಕಾರ್ಡ್ ಕೂಡ ಮಾಡಿದೆ.

ಇದನ್ನು ಸಹ ಓದಿ : ಶಿವಮೊಗ್ಗ ರೈಲ್ವೆ ಸ್ಟೇಷನ್​ನಲ್ಲಿ 15 ವರ್ಷದ ಬಾಲಕನ ರಕ್ಷಣೆ

ಕವಿಶೈಲದ ಸೂರ್ಯಾಸ್ಥ ನೋಡುವುದೇ ಒಂದು ಸೊಗಸು :ಕುಪ್ಪಳ್ಳಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲು ಎಲ್ಲಡೆ ಮಾಹಿತಿ ಫಲಕಗಳನ್ನು ಹಾಕಲಾಗಿದೆ.ಕವಿ ಸಾಹಿತ್ಯಕ್ಕೆ ಪ್ರೇರಣೆ  ನೀಡಿದ ಕವಿಶೈಲ,ಇಲ್ಲಿನ ಸೂರ್ಯಾಸ್ಥ .ಮಲೆನಾಡಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ.ಕವಿ ಮನೆಗೆ ಬರುವ ಪ್ರವಾಸಿಗರಿಗೆ 5 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತಿದ್ದು,ಅದರಿಂದ ಬರುವ ನೆರವಿನಿಂದ ಕವಿಮನೆ ಮೇಲುಸ್ತುವಾರಿ ನೋಡಿಕೊಳ್ಳಲಾಗುತ್ತಿದೆ.ಇಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.ಯಾವುದಕ್ಕೂ ಮುಂಗಡವಾಗಿ ರೂಂ ಗಳನ್ನು ಕಾಯ್ದಿರಿಸಿರಬೇಕಷ್ಟೆ.

ಇದನ್ನು ಸಹ ಓದಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ

ಕುವೆಂಪು ಪರಿಸರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ : ಕುವೆಂಪು ಪರಿಸರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಸಂಶೋಧನಾ ಕೇಂದ್ರ ಸ್ಥಾಪಿಸಿ ಕುವೆಂಪುರವರ ಸಾಹಿತ್ಯವನ್ನು ಅಧ್ಯಯನ ಮಾಡಲು ನವ ವಿದ್ಯಾಂಸರಿಗೆ ಪ್ರೇರಣೆ ನೀಡಿದೆ.ಹಲವಾರು ಸಂಶೋಧನಾ ವಿದ್ಯಾರ್ಥಿಗಳು ಈ ಪರಿಸರದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದಾರೆ.

ಇದನ್ನು ಸಹ ಒದಿ : ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ

ದೇಸಿ ಕೇಂದ್ರ : ಕುಪ್ಪಳಿ ಪರಿಸರದಲ್ಲಿಯೇ ಕುವೆಂಪು ಪ್ರತಿಷ್ಟಾನ ಹಾಗು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುವೆಂಪು ಸಹ್ಯಾದ್ರಿ ದೇಸಿ ಕೇಂದ್ರವನ್ನು ತೆರೆದಿದೆ.ಮಲೆನಾಡು ಕರಾವಳಿ ಜಿಲ್ಲೆಗಳ ಪಾರಂಪಾರಿಕ ಜೀವನ ಕ್ರಮವನ್ನು ಪ್ರತಿನಿಧಿಸುವ ವಸ್ತು ವಿಶೇಷತೆಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿದೆ.ಇಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಲು ಅವಕಾಶವಿದೆ.ಮರದ ವಸ್ತುಗಳು ಲೋಹದ ವಸ್ತುಗಳ ಎತ್ತಿನಗಾಡಿ,ಕಣಜ ನೇಗಿಲು ನೊಗ ಕೊಳಗ ಮಣೆ, ಹಳೆ ಮನೆಯ ಚೌಕಟ್ಟುಗಳನ್ನುಕಾಣಬಹುದಾಗಿದೆ.

ಇದನ್ನು ಸಹ ಒದಿ :ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ

ಕವಿಮನೆ,ಕವಿಶೈಲ ಪರಿಸರ ಒಂದು ಸಾಂಸ್ಕೃತಿಕ ಕಲಾಕೇಂದ್ರವಾಗಿದೆ ಹೇಮಾಂಗಣ: ಕವಿ ಬಯಕೆಯಂತೆ ಕವಿಮನೆ,ಕವಿಶೈಲ ಪರಿಸರ ಒಂದು ಸಾಂಸ್ಕೃತಿಕ ಕಲಾಕೇಂದ್ರವಾಗಿ ರೂಪುಗೊಂಡಿದೆ.ಈ ಪರಿಸರದಲ್ಲಿ ವಿಶ್ವಮಾನವ ಸಂದೇಶವನ್ನು ಜನತೆಯಲ್ಲಿ ಜಾಗೃತಗೊಳಿಸುವ ವೈಜ್ಞಾನಿಕತೆ,ವೈಚಾರಿಕತೆ ಕಡೆಗೆ ಜನರನ್ನು ಎಚ್ಚರಗೊಳಿಸುವ ಕಾರ್ಯಗಾರಗಳು,ಸಭೆ ಶಿಬಿರಗಳು, ಕುಪ್ಪಳಿ ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿರುತ್ತವೆ.

ಕುಪ್ಪಳಿಯಲ್ಲಿ ಸಾಂಸ್ಕೃತಿಕ ಸಾಹಿತ್ಯಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕೆಂಬುದು ಇಲ್ಲಿಗೆ ಪದೇ ಪದೇ ಭೇಟಿ ನೀಡುವ ಸಾಹಿತ್ಯಾಸಕ್ತರ ಅಬಿಪ್ರಾಯವಾಗಿದೆ.ಕುಪ್ಪಳಿ ಪರಿಸರಕ್ಕೆ ಪ್ರವಾಸಿಗರಗಾಗಿ ಬರುವ  ಬಹುಪಾಲು ಜನರು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳುವುದಕ್ಕೆ ಸ್ಪೂರ್ತಿಯನ್ನಿಡುವ ತಾಣ ಕುಪ್ಪಳಿಯಾಗಿರುವುದು ನಿಜಕ್ಕೂ ಮಲೆನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link