ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ

ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ಮಾರ್ಗದ ತಿರುವುಗಳಲ್ಲಿ ಮೊಳೆಗಳು ಬಿದ್ದಿದ್ದವು. ಇದೊಂದು ಕಿಡಿಗೇಡಿಗಳ ಕೃತ್ಯವಾಗಿದ್ದು, ಎಲ್ಲಾ ಅಡೆತಡೆಗಳನ್ನೂ ಮೀರಿ ದತ್ತಜಯಂತಿ ಚೆನ್ನಾಗಿ ನಡೆಯುತ್ತದೆ

ದತ್ತಾತ್ರೇಯ ಜಯಂತಿಗೆ ಚಾಲನೆ,   ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ  ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ
ದತ್ತಪೀಠಕ್ಕೆ ಹೋಗುವ ದಾರಿಯಲ್ಲಿ ಪತ್ತೆಯಾದ ಮೊಳೆಗಳ ರಾಶಿ

ಚಿಕ್ಕಮಗಳೂರಿನಲ್ಲಿ ದತ್ತಜಯಂತಿಗೆ ಚಾಲನೆ  ಸಿಕ್ಕಿದೆ.  ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಇನಾಂ ದತ್ತಾತ್ರೇಯ ಪೀಠದಲ್ಲಿ (dattatreya peeta)ಮೂರು ದಿನಗಳ ಕಾಲ ನಡೆಯಲಿದೆ. ವಿಶ್ವಹಿಂದೂ ಪರಿಷತ್-ಬಜರಂಗದಳ ನಿನ್ನೆ  ಅನಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆಯನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. 

BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

ದತ್ತಪೀಠ ಮಾರ್ಗದಲ್ಲಿ ಮೊಳೆಗಳ ರಾಶಿ : ದತ್ತ ಜಯಂತಿ ಹಿನ್ನೆಲೆಯಲ್ಲಿ ನಿನ್ನೆ ಚಿಕ್ಕಮಗಳೂರಿನಲ್ಲಿ ಬೃಹತ್ ಮೆರವಣಿಗೆಯು ನಡೆಯಿತು.  ಮಹಿಳಾ ಭಕ್ತರು, ದಾರಿಯುದ್ಧಕ್ಕೂ ದತ್ತಾತ್ರೇಯರು, ದೇವರ ಸಂಕೀರ್ತನೆಗಳನ್ನು ಹಾಡಿದರು.  ಇನ್ನೂ ಈ ನಡುವೆ  ದತ್ತಪೀಠದ ಮಾರ್ಗದ ಮೂರು ನಾಲ್ಕು ಕಡೆಗಳಲ್ಲಿ ಮೊಳೆಗಳು ರಾಶಿ ಬಿದ್ದಿರುವುದು ಪತ್ತೆಯಾಗಿದೆ. 

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಕಿಡಿಗೇಡಿಗಳ ಕೃತ್ಯ ಆರೋಪ : ಮೇಲ್ನೋಟಕ್ಕೆ ರಸ್ತೆ ಮೇಲೆ ಯಾರೋ ಮೊಳೆಗಳನ್ನು ಚೆಲ್ಲಿ ಹೋದಂತೆ ಕಾಣುತ್ತಿದ್ದುದ್ದನ್ನ ಗಮನಿಸಿದ ಸಾರ್ವಜನಿಕರು ಇದ್ಯಾರೋದ್ದೋ ಕುತಂತ್ರ ಎಂದು ಆರೋಪಿಸಿದ್ರು. ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಭಜರಂಗದಳದ ಮುಖಂಡ ಶ್ಯಾಂ ವಿ.ಗೌಡ ಸೇರಿದಂತೆ ಹಲವರು ದೌಡಾಯಿಸಿದ್ರು.  ಅವರೆಲ್ಲಾ ಸೇರಿಕೊಂಡು ಬಿದ್ದಿದ್ದ ಮೊಳೆಗಳನ್ನು ಹೆಕ್ಕಿ ತೆಗೆದರು.

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗದ ಮತ್ತೊಂದು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಹಾ ಗೋಲ್​ಮಾಲ್​?/ ರಿಪೋರ್ಟ್​ ಕೊಡದ ತನಿಖಾಧಿಕಾರಿ

ಸಿಟಿ ರವಿ ಪ್ರತಿಕ್ರಿಯೆ : ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ಮಾರ್ಗದ ತಿರುವುಗಳಲ್ಲಿ ಮೊಳೆಗಳು ಬಿದ್ದಿದ್ದವು. ಇದೊಂದು ಕಿಡಿಗೇಡಿಗಳ ಕೃತ್ಯವಾಗಿದ್ದು, ಎಲ್ಲಾ ಅಡೆತಡೆಗಳನ್ನೂ ಮೀರಿ ದತ್ತಜಯಂತಿ ಚೆನ್ನಾಗಿ ನಡೆಯುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link