ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಕೋಣಗಳ ಉಪದ್ರವ ಹೆಚ್ಚಾಗಿದೆ. ಇಲ್ಲಿನ ಮುನ್ನೂರು, ಕೋಮನೆ, ಕೊಕ್ಕಡತಿ, ತಲಬಿ, ಹೆಗ್ಗೆಬೈಲು, ಮುತ್ತುಗುಂಡಿ, ಗೆರಸ, ಮತ್ತಿತರ ಕಡೆ ರೈತರ ತೋಟ ಗದ್ದೆಗಳಿಗೆ ನಿತ್ಯ ಕಾಡುಕೋಣಗಳು ನುಗ್ಗುತ್ತಿವೆ.
ಇದನ್ನು ಸಹ ಓದಿ : ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ
ರೈತರ ಬೆಳೆ ನಾಶ/ ನಡು ರಸ್ತೆಯಲ್ಲಿಯೇ ಠಿಕಾಣಿ : ರೈತರು ಬೆಳೆದ ಬತ್ತ, ಅಡಕೆ ಸಸಿ, ಬಾಳೆ ಮತ್ತಿತರ ಬೆಳೆಗಳನ್ನು ಕಾಡುಕೋಣಗಳು ದ್ವಂಸ ಮಾಡುತ್ತಿವೆ. ಇನ್ನೂ ಕಾಡುಕೋಣಗಳು ನಡುರಸ್ತೆಯಲ್ಲಿಯೇ ಠಿಕಾಣಿ ಹೂಡುತ್ತಿರುವಂತಹ ದೃಶ್ಯಗಳು ಸಹ ಕಂಡುಬಂದಿದ್ದು, ದಾರಿಯಲ್ಲಿ ಓಡಾಡುವುದಕ್ಕೆ ಜನರಿಗೆ ಭಯ ಕಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಾಲಕನೊಬ್ಬ, ರಸ್ತೆಯಲ್ಲಿದ್ದ ಕಾಡುಕೋಣಕ್ಕೆ ಹೆದರಿ ಪಿಕಪ್ ವಾಹನವನ್ನು ಚರಂಡಿಗೆ ಹಾರಿಸಿದ್ದ ಘಟನೆ ಕೂಡ ನಡೆದಿದೆ .
BREAKING NEWS : ಶಿವಮೊಗ್ಗ KSRTC ಬಸ್ಸ್ಟಾಂಡ್ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ
ಹುಲಿ ಇದೆ, ದನ ತಿಂತಿದೆ : ಇನ್ನೊಂದೆಡೆ ಇದೇ ವ್ಯಾಪ್ತಿಯ ಗೆರಸ ಸುತ್ತಮುತ್ತ ಹುಲಿ ಇರುವ ಆತಂಕವೂ ಮನೆಮಾಡಿದ್ದು, ಜನರ ಬಾಯಲ್ಲಿ ಸುದ್ದಿ ಹರಿದಾಡುತ್ತಿದೆ. ಕಾಡಿಗೆ ಹೋದ ದನಕರಗಳು ಆಗಾಗ ಮಿಸ್ ಆಗುತ್ತಿದ್ದು, ಅವುಗಳು ಹುಲಿ ಬಾಯಿಗೆ ಆಹಾರವಾಗ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸ್ತಿದ್ದಾರೆ.
ಇದನ್ನು ಸಹ ಓದಿ: ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
