ರಾಗಿಮುದ್ದೆಯಲ್ಲಿ ಸೈನೈಡ್ ಹಾಕಿ ಹೆಂಡ್ತಿಯನ್ನ ಕೊಂದ ಪತಿ! ಅಚ್ಚರಿ ಮೂಡಿಸಿದ್ದ ಕೇಸ್​ನಲ್ಲಿ ಬಯಲಾಯ್ತು ನಾಟಕ

Malenadu Today

CHIKKAMAGALURU  |  Dec 14, 2023  | ಹೆಂಡ್ತಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ಹೇಳಿ ಪತ್ನಿಯ ಅಂತ್ಯಸಂಸ್ಕಾರವನ್ನು ತರಾತುರಿಯಾಗಿ ಮಾಡಲು ಮುಂದಾಗಿದ್ದ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. 

ಚಿಕ್ಕಮಗಳೂರು ಜಿಲ್ಲೆ ಯ ಮೂಡಿಗೆರೆ ತಾಲೂಕು  ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ ಶ್ವೇತಾ ಪ್ರಕರಣದಲ್ಲಿ ಪತಿಯೇ ತನ್ನ ಪತ್ನಿಯನ್ನ ಕೊಲೆ ಮಾಡಿರುವುದಾಗಿ ಪೊಲೀಸರ ಉಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಪೊಲೀಸರು ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಪತಿ ತನ್ನ ಅನೈತಿಕ ಸಂಬಂಧಕ್ಕೆ ಹೆಂಡತಿ ಅಡ್ಡಿಯಾಗುತ್ತಾಳೆ. ಎಂಬ ಕಾರಣಕ್ಕೆ ಮುದ್ದೆಯಲ್ಲಿ ಸೈನೆಡ್​ ಹಾಕಿ ಕೊಂದಿದ್ದಾನೆ ಎನ್ನಲಾಗಿದೆ.

READ : ಭದ್ರಾವತಿ ಸ್ಟೇಷನ್, ತಾಳಗುಪ್ಪ ಮಾರ್ಗ, ರೇಣಿಗುಂಟ ರೈಲಿಗೆ ಸಂಬಂಧಿಸಿದಂತೆ ಸಂಸದರ ಮಹತ್ವದ ಹೆಜ್ಜೆ!

ಅಷ್ಟೆಅಲ್ಲದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಆಕೆಯ ಕೈಗೆ ಇಂಜೆಕ್ಷನ್ ಚುಚ್ಚಿದ್ದ. ಆದರೆ ಪ್ಲಾನ್ ಉಲ್ಟಾ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಆಕೆಗೆ ಹಾರ್ಟ್ ಅಟ್ಯಾಕ್​ ಆಗಿದೆ ಎಂದು ಬಿಂಬಿಸಲು ಮುಂದಾಗಿದ್ದಾನೆ. ಸದ್ಯ ಪೊಲೀಸ್ ವಿಚಾರಣೆಯಲ್ಲಿ ಈ ಸತ್ಯ ಹೊರಬಿದ್ದಿದೆ. 

READ : ಇವರನ್ನ ಎಲ್ಲಾದರೂ ನೋಡಿದ ನೆನಪಿದ್ರೆ ವಿನೋಬನಗರ ಪೊಲೀಸ್ ಸ್ಟೇಷನ್​ಗೆ ಮಾಹಿತಿ ಕೊಡಿ!

ಪ್ರಕರಣದಲ್ಲಿ ಆರೋಪಿ ದರ್ಶನ್​ನ ಪತ್ನಿ ಶ್ವೇತಾ ತನ್ನ ಸಂಸಾರ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಳು.ಇನ್ನೊಬ್ಬಳ ​ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ತನ್ನ ಪತಿಯನ್ನ ಆಕೆಯಿಂದ ಬಿಡಿಸಿಕೊಳ್ಳಲು ಶ್ವೇತಾ ಸ್ವತಃ ಆಕೆಗೆ ಕಾಲ್​ ಮಾಡಿ ಮಾತನಾಡಿದ್ದಳು.

ಅಲ್ಲದೆ ಪತಿಯ ಜೊತೆಗೂ ಸಹ ಮಾತನಾಡಿ ನಾಳೆಯಿಂದಾದರೂ ಒಳ್ಳೆಯ ಗಂಡನಾಗಿರು ಎಂದು ಹೇಳಿ ಪ್ರಯತ್ನಿಸಿದ್ದಾಳೆ. ಇನ್ನೊಬ್ಬಾಕೆಯು ಸಹ ಶ್ವೇತಾಗೆ ಆಕೆಯ ಪತಿಯ ಜೊತೆ ಸಂಪರ್ಕಕ್ಕೆ ಬರುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ. 

ಈ ನಡುವೆ ಏನಾಯ್ತು ಗೊತ್ತಿಲ್ಲ. ದರ್ಶನ್​ ತನ್ನ ಪತ್ನಿಯನ್ನ ರಾಗಿಮುದ್ದೆಯಲ್ಲಿ ಸೈನೈಡ್​ ಹಾಕಿ ಸಾಯಿಸಿದ್ದಾನೆ.  ಬಳಿಕ ಆಕೆಯದ್ದು ಹಾರ್ಟ್ ಅಟ್ಯಾಕ್ ಎಂದು ಬಿಂಬಿಸಲು ಹೋಗಿದ್ದಾರೆ. ಸದ್ಯ ಚಿಕ್ಕಮಗಳೂರು ಪೊಲೀಸರು ಆರೋಪಿಯ ರಾಶಿಗಿಳಿದು ಪ್ರಕರಣದ ಸತ್ಯ ಹೊರಕ್ಕೆ ತೆಗೆದಿದ್ದಾರೆ. 


 

Share This Article