ಇವರನ್ನ ಎಲ್ಲಾದರೂ ನೋಡಿದ ನೆನಪಿದ್ರೆ ವಿನೋಬನಗರ ಪೊಲೀಸ್ ಸ್ಟೇಷನ್​ಗೆ ಮಾಹಿತಿ ಕೊಡಿ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Dec 14, 2023  | ಶಿವಮೊಗ್ಗದಲ್ಲಿ ಇತ್ತೀಚೆಗೆ ನಾಪತ್ತೆ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ರೀಸನ್ ನೋಟ್​ ಬರೆಸಿಕೊಂಡು ಹೋಗುವಂತ ಪ್ರಕರಣಗಳು ಮಿಸ್ಸಿಂಗ್​ ಕೇಸ್​ನಲ್ಲಿ ಹೆಚ್ಚಾದರೂ ಸಹ, ಕೆಲವೊಂದು ಕೇಸ್​ಗಳು ನಾಪತ್ತೆಯಾದವರು ಪತ್ತೆಯಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ವ್ಯಕ್ತಿಗಳ ನಾಪತ್ತೆ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೇ ಪ್ರಕಟಣೆಯನ್ನು ನೀಡಿದೆ. 

READ : ಪೊಲೀಸ್ ಪ್ರಕಟಣೆ! ಇಬ್ಬರು ಮಹಿಳೆಯರ ಬಗ್ಗೆ ಸುಳಿವು ಸಿಕ್ಕರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ

ಪೊಲೀಸ್ ಪ್ರಕಟಣೆa

 

ಬಾಬು ಎಂ, 38 ವರ್ಷ, ಇವರು ದಿ: 10-07-2023 ರಂದು ಸೋಮಿನಕೊಪ್ಪದಿಂದ  ಕೆಲಸಕ್ಕೆಂದು ಹೋದವರು ಕಾಣೆಯಾಗಿರುತ್ತಾರೆ.  ಬಾಬು ಸುಮಾರು 5.6 ಅಡಿ ಎತ್ತರ, ಕೋಲು ಮುಖ, ಕಪ್ಪು ಕೂದಲು, ಗೋಧಿ ಮೈಬಣ್ಣ ಹೊಂದಿರುತ್ತಾನೆ. ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಅಭಿಷೇಕ್, 25 ವರ್ಷ ಇವರು ದಿ: 09-03-2023 ರಂದು ಕೆಲಸಕ್ಕೆಂದು ಮನೆಯಿಂದ ಹೋದವನು ವಾಪಸ್ ಬರದೆ, ಕಾಣೆಯಾಗಿರುತ್ತಾರೆ. ಈತನು 6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.  ಇವರುಗಳ ಸುಳಿವು ಯಾರಿಗಾದರೂ ಸಿಕ್ಕಲ್ಲಿ ವಿನೋಬನಗರ ಪೊಲೀಸ್ ಠಾಣೆ (Vinobanagar Police Station ) ದೂರವಾಣಿ ಸಂಖ್ಯೆ : 9480803300, 9480803308 ನ್ನು ಸಂಪರ್ಕಿಸಬಹುದೆಂದು ವಿನೋಬನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor