ಪೊಲೀಸ್ ಪ್ರಕಟಣೆ! ಇಬ್ಬರು ಮಹಿಳೆಯರ ಬಗ್ಗೆ ಸುಳಿವು ಸಿಕ್ಕರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ

This Article Written by / Malenadu Today / ಡಿಸೆಂಬರ್ 13, 2023

SHIVAMOGGA  |  Dec 13, 2023  | ಶಿವಮೊಗ್ಗದ ಸುರಭಿ ಸ್ವಾಧಾರ ಗೃಹದಿಂದ ಓರ್ವ ಯುವತಿ ಹಾಗೂ ಮತ್ತೊಬ್ಬಳು ಮಹಿಳೆ ಕಾಣೆಯಾಗಿದ್ದಾರೆ. ಅವರ ಬಗ್ಗೆ ಪ್ರಕಟಣೆ ನೀಡಿದ್ದು ಗುರುತು ಪರಿಚಯ ನೀಡಲಾಗಿದೆ. ಯಾರಿಗಾದರೂ ಇವರ ಸುಳಿವು ಸಿಕ್ಕಲ್ಲ ವಿನೋಬನಗರ ಪೊಲೀಸ್ ಸ್ಟೇಷನ್​ ಸಿಬ್ಬಂದಿಯನ್ನ ಸಂಪರ್ಕಿಸಲು ಕೋರಲಾಗಿದೆ. 

ವಿನೋಬನಗರ ಪೊಲೀಸ್ ಸ್ಟೇಷನ್

ಶಾಂತಲ ಕೋಂ ಬಸವನಗೌಡ, 44 ವರ್ಷ ಇವರು ದಿ: 14-05-2023 ರಂದು ಸುರಭಿ ಸ್ವಾಧಾರ ಗೃಹದಿಂದ ಕಾಣೆಯಾಗಿರುತ್ತಾರೆ. ಶಾಂತಲ ಸುಮಾರು 5.4 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಗೋಧಿ ಮೈಬಣ್ಣ ಹೊಂದಿದ್ದು ಸ್ವಾಧಾರ ಗೃಹದಿಂದ ಹೋಗುವಾಗ ಬಿಳಿ ಬಣ್ಣದ ಚೂಡಿಧಾರ್ ಧರಿಸಿರುತ್ತಾರೆ. 

READ : BIG NEWS | ಟ್ರಾನ್ಸಫರ್ ಆದರೂ ಸೂಚಿಸಿದ ಸ್ಥಳದಲ್ಲಿ ಡ್ಯೂಟಿಗೆ ಹಾಜರಾಗದ 44 ಪೊಲೀಸ್ ಇನ್​ಸ್ಪೆಕ್ಟರ್​ಗಳಿಗೆ ನೋಟಿಸ್!

ಕುಮಾರಿ ಯಶೋಧ, 19 ವರ್ಷ ಈಕೆ ಸಾಗರ ಗ್ರಾಮಾಂತರ ಠಾಣೆ ಮೂಲಕ ಸುರಭಿ ಸ್ವಾಧಾರ ಗೃಹದಲ್ಲಿ ಆಶ್ರಯ ಪಡೆದಿದ್ದು ದಿ: 27-09-2023 ರಂದು ಕಾಣೆಯಾಗಿರುತ್ತಾರೆ. ಯಶೋಧ 5 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಗೋಧಿ ಮೈಬಣ್ಣ ಹೊಂದಿದ್ದು, ಸ್ವಾಧಾರ ಗೃಹದಿಂದ ಹೋಗುವಾಗ ಕ್ರೀಮ್ ಕಲರಿನ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. 

ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ವಿನೋಬನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 9480803300, 9480803308 ನ್ನು ಸಂಪರ್ಕಿಸಬಹುದೆಂದು ವಿನೋಬನಗರ ಪೊಲೀಸ್ ಸ್ಟೇಷನ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

Shivamogga Police

ಮುಂದಿನ ಸುದ್ದಿ ಒದಿ

Leave a Comment