BIG NEWS | ಟ್ರಾನ್ಸಫರ್ ಆದರೂ ಸೂಚಿಸಿದ ಸ್ಥಳದಲ್ಲಿ ಡ್ಯೂಟಿಗೆ ಹಾಜರಾಗದ 44 ಪೊಲೀಸ್ ಇನ್​ಸ್ಪೆಕ್ಟರ್​ಗಳಿಗೆ ನೋಟಿಸ್!

BIG NEWS | Notices issued to 44 police inspectors for not reporting for duty at the designated place despite being transferred!

BIG NEWS  | ಟ್ರಾನ್ಸಫರ್ ಆದರೂ ಸೂಚಿಸಿದ ಸ್ಥಳದಲ್ಲಿ ಡ್ಯೂಟಿಗೆ ಹಾಜರಾಗದ 44  ಪೊಲೀಸ್ ಇನ್​ಸ್ಪೆಕ್ಟರ್​ಗಳಿಗೆ  ನೋಟಿಸ್!

SHIVAMOGGA  |  Dec 12, 2023  |  ರಾಜ್ಯಸರ್ಕಾರ ಈಗಾಗಲೇ ವಿವಿಧ ಹಂತಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿದೆ. ಆದರೆ ಈ ನಡುವೆ ವರ್ಗಾವಣೆ ಆದೇಶದಲ್ಲಿ ಇರುವವರು ಸೂಚಿಸಿದ ಸ್ಥಳಕ್ಕೆ ಹೋಗಿ ಕರ್ತವ್ಯವನ್ನ ವಹಿಸಿಕೊಂಡಿಲ್ಲ. ಈ ಸಂಬಂಧ ಇದೀಗ ಅಂತಹ ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. ಅಲ್ಲದೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್‌ ಜನರಲ್ ಆಫ್ ಪೊಲೀಸ್ ರವರ ಕಛೇರಿ, ಕರ್ನಾಟಕ ರಾಜ್ಯ, ಬೆಂಗಳೂರು  ಇವರಿಂದ ಕಾರಣ ಕೇಳಿ ನೋಟಿಸ್ ಹೊರಡಿಸಲಾಗಿದೆ. ಇವರ ಪರವಾಗಿ ಸೌಮೇಂದು ಮುಖರ್ಜಿ, ಐಪಿಎಸ್ ಎಡಿಜಿಪಿ (ಆಡಳಿತ) ಇವರು ನೋಟಿಸ್ ಜಾರಿ ಮಾಡಿದ್ದು ಒಟ್ಟಾರೆ 44 ಅಧಿಕಾರಿಗಳಿಗೆ ಸೂಚನಾ ಪತ್ರ ನೀಡಲಾಗಿದೆ. 

READ : BREAKING NEWS | ಬ್ಯಾಂಕ್ ಲೋನ್​ ನವರು ಎಂದು ಮನೆಗೆ ನುಗ್ಗಿ ದರೋಡೆ ! ಅಪರಿಚಿತರ ಬಗ್ಗೆ ಹುಷಾರ್!

ಏನಿದೆ ನೋಟಿಸ್​ ನಲ್ಲಿ 

ಪೊಲೀಸ್ ಇನ್ಸ್‌ಪೆಕ್ಟರ್ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಆದೇಶಿಸಲಾಗಿತ್ತು. ಆದರೆ, 44 ಮಂದಿ ಪೊಲೀಸ್ ಅಧಿಕಾರಿಗಳು ಈವರೆಗೂ ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಹಿರಿಯ ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕರ್ತವ್ಯಲೋಪವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.   

ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ಇದುವರೆವಿಗೂ ವರದಿ ಮಾಡಿಕೊಳ್ಳದೇ ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾಗಿರುತ್ತೀರಿ ಮತ್ತು ಸದರಿ ಪೊಲೀಸ್ ಠಾಣೆ/ ಘಟಕಗಳಲ್ಲಿನ ಕಾರ್ಯನಿರ್ವಹಣೆ ಕುಂಠಿತಗೊಳ್ಳಲು ಪರೋಕ್ಷವಾಗಿ ಕಾರಣರಾಗುವ ಮೂಲಕ ಕೆ.ಸಿ.ಎಸ್ (ನಡತೆ) ನಿಯಮಗಳು, 2021 ಹಾಗೂ ಸರ್ಕಾರದ ನಿರ್ದೇಶನಗಳನ್ನು ಮತ್ತು ಉಲ್ಲೇಖಿತ-1 &2ರ ಪ್ರಧಾನ ಕಛೇರಿಯ ಆದೇಶಗಳಲ್ಲಿ ನೀಡಿರುವ ಸೂಚನೆಗಳನ್ನು ಉಲ್ಲಂಘಿಸುವ ಮೂಲಕ ಕರ್ತವ್ಯದಲ್ಲಿ ಅತೀವ ಬೇಜವಾಬ್ದಾರಿ. ಉದ್ಘಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿ ಕರ್ತವ್ಯಲೋಪವೆಸಗಿರುತ್ತೀರಿ ಎಂದು ಆರೋಪಿಸಲಾಗಿದೆ. 

ಅಲ್ಲದೆ  ಈ ಕೂಡಲೇ ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಂತಿಮವಾಗಿ ಸೂಚಿಸಲಾಗಿದೆ. ಇಲ್ಲವಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ  ಅಮಾನತ್ತುಗೊಳಿಸಿ  ಶಿಸ್ತು ಕ್ರಮ ಜರುಗಿಸಬಾರದು? ಎಂಬ ಬಗ್ಗೆ ವಿವರಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕಾರಣ ಕೇಳುವ ನೋಟೀಸ್ ಹೊರಡಿಸಿದ 07 ದಿನದೊಳಗಾಗಿ  ಸಮಜಾಯಿಷಿಯನ್ನು ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.  

ಯಾರಿಗೆಲ್ಲಾ ನೋಟಿಸ್

1.   ಹರೀಶ್ ಬಿ ಸಿ, ಪಿಐ, ಸಿ.ಐ.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

2.   ಅರುಣ್ ಎಸ್ ಮುರುಗುಂಡಿ, ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

3.  ಮತಿ ಈಶ್ವರಿ ಪಿ ಎಸ್, ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು. 

4.   ಕುಮಾರ್ ಎ ಪಿ, ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

5.   ರವಿಕುಮಾರ್ ಆರ್ ಜಿ, ಪಿಐ, ರಾಜ್ಯ ಗುಪ್ತವಾರ್ತೆ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

6.   ಸತೀಶ್ ಎಸ್ ಹೆಚ್, ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು. 

7.   ಎಸ್ ಎಸ್ ತೇಲಿ, ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

8.   ಸಿದ್ದೇಶ್ ಎಂ ಡಿ. ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು. 

9.   ವಿಜಯ್ ಎ ಮುರುಗುಂಡಿ, ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ

ಆದೇಶದಲ್ಲಿರುವವರು.

10.   ಯರಿಸ್ವಾಮಿ ಇ, ಪಿಐ, ವಿ.ವಿ.ಐ.ಪಿ., ಭದ್ರತೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

11.   ಗುರುಪ್ರಸಾದ್ ಎ, ಪಿಐ, ಐ.ಎಸ್.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

12.   ಉದಯರವಿ ಜಿ, ಪಿಐ, ಶಂಕರಪುರಂ ಪೊಲೀಸ್ ಠಾಣೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

13.   ಮಂಜೇಗೌಡ ಎ ಜಿ, ಪಿಐ, ಟಿ.ಟಿ.ಐ., ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು. 

14.   ಷಣ್ಮುಖಪ್ಪ ಜಿ ಆರ್, ಪಿಐ ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು

15.   ರಾಘವೇಂದ್ರ ಬಾಬು, ಪಿಐ ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

16.   ಸತೀಶ್ ಎಂ ಆರ್. ಪಿಐ ಕಾವೂರು ಪೊ.ಠಾ., ಮಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲಿರುವವರು.

17.   ಲಕ್ಷ್ಮಯ್ಯ ಎಂ ಬಿ, ಪಿಐ ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು. 

18.   ಕಾಳಪ್ಪ ಬಡಿಗೇರ್, ಪಿಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು

19.   ಬಸಲಿಂಗಯ್ಯ ಸುಬ್ರಾಪುರ್‌ಮರ್, ಪಿಐ, ಸಿಐಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು

20.   ಮಂಜುನಾಥ್ ಡಿ ಆರ್, ಪಿಐ, ಎ.ಟಿ.ಸಿ ಬೆಂಗಳೂರು ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

21.   ಮುನಿರೆಡ್ಡಿ ವಿ. ಪಿ.ಐ. ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

22.   ರೋಹಿತ್ ಸಿ ಇ, ಪಿ.ಐ, ಸಾಗರ ಗ್ರಾಮಾಂತರ ವೃತ್ತ, ಶಿವಮೊಗ್ಗ ಜಿಲ್ಲೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

23.   ಸಂದೀಪ್ ಪಿ ಕೌರಿ, ಪಿ.ಐ, ಎಸ್.ಆರ್. ಪುರ ವೃತ್ತ, ಚಿಕ್ಕಮಗಳೂರು ಜಿಲ್ಲೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು

24.   ಸತೀಶ್ ಜಿ ಜೆ, ಪಿ.ಐ, ಬರ್ಕೆ ಪೊ.ಠಾ., ಮಂಗಳೂರು ನಗರ ಇಲ್ಲಿಗೆ ವರ್ಗಾವಣೆ

ಆದೇಶದಲ್ಲಿರುವವರು.

25.   ಶರಣಬಸಪ್ಪ ಕೆ, ಪಿ.ಐ, ಐ.ಜಿ.ಪಿ. ರವರ ಕಛೇರಿ, ಎನ್.ಇ.ಆರ್., ಕಲಬುರಗಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

26.   ಶಿವಕುಮಾರ್ ಹೆಚ್ ಆರ್, ಪಿ.ಐ, ಶೃಂಗೇರಿ ಪೊ.ಠಾ., ಚಿಕ್ಕಮಗಳೂರು ಜಿಲ್ಲೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

27.   ಶಿವಕುಮಾರ್ ಟಿ ಸಿ, ಪಿ.ಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

28.   ಶಿವರಾಜು ಎಸ್, ಪಿ.ಐ, ವಿ.ವಿ.ಐ.ಪಿ ಭದ್ರತೆ., ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು

29.   ಸುರೇಶ್ ಕೆ. ಪಿ.ಐ, ಸಂಚಾರ ಮತ್ತು ಯೋಜನೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

30.   ವರುಣ್‌ ಕುಮಾರ್ ಎಂ ಆರ್, ಪಿ.ಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

31.   ವಸಂತ್ ಎಸ್ ಹೆಚ್, ಪಿ.ಐ, ಮಂಗಳೂರು ಪೂರ್ವ ಸಂಚಾರ ಪ್ರೊ.ಠಾ., ಮಂಗಳೂರು ನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

32.   ವೆಂಕಟೇಶ್ ಎಸ್ ಹೆಚ್, ಪಿ.ಐ, ಸಿ.ಐ.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

33.   ಚಂದ್ರಶೇಖರ್ ಎನ್ ಹರಿಹರ, ಪಿ.ಐ, ಕೋಟೆ ಪೊ.ಠಾ., ಶಿವಮೊಗ್ಗ ಜಿಲ್ಲೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು

34.  ಮತಿ ಸ್ವರ್ಣ ಜಿ ಎಸ್, ಪಿ.ಐ, ಬಸವನಹಳ್ಳಿ ವೃತ್ತ, ಚಿಕ್ಕಮಗಳೂರು ಜಿಲ್ಲೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

35.   ನಿವಾಸ್ ಬಿ ಎಂ, ಪಿ.ಐ, ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ) ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು

36.   ಬಸವರಾಜ್ ಎಸ್ ತೇಲಿ, ಪಿ.ಐ, ಐ.ಎಸ್.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

37.  ಶ್ರೀಧರ್ ವಸಂತ್ ಸತಾರೆ, ಪಿ.ಐ, ಪಿ.ಟಿ.ಎಸ್., ಖಾನಾಪುರ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು

38.   ಜೀವನ್ ಕೆ, ಪಿ.ಐ. ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು

39.   ಮೋಹನ್ ಕುಮಾರ್ ಎಂ. ಪಿ.ಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು

40.   ಲಕ್ಷ್ಮೀನಾರಾಯಣ ಕೆ, ಪಿ.ಐ, ಐ.ಎಸ್.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು. 

41.   ರಾಮಪ್ಪ ವಿ ಸಾವಳಗಿ, ಪಿ.ಐ, ಡಿ.ಎಸ್.ಬಿ., ಬೀದರ್ ಜಿಲ್ಲೆ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು.

42.   ಶರಣಪ್ಪಗೌಡ ಬಿ ಗೌಡರ್, ಪಿ.ಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.

43.   ಕರುಣೇಶ್‌ಗೌಡ, ಪಿ.ಐ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು. 

44.   ದೌಲತ್ ಎನ್ ಕುರಿ, ಪಿ.ಐ, ಡಿ.ಎಸ್.ಬಿ., ಗದಗ್ ಜಿಲ್ಲೆ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.