ಶಿವಮೊಗ್ಗದಲ್ಲಿ ಇನ್ನೆರಡು ದಿನ ಭಾರಿ ಮಳೆ, ಬಿರುಗಾಳಿ/ ಹವಾಮಾನ ಇಲಾಖೆಯ ಸೂಚನೆಯಲ್ಲಿ ಏನಿದೆ ಗೊತ್ತಾ?

Shimoga is likely to receive heavy to very heavy rainfall for the next two days, according to the Meteorological Department. ಶಿವಮೊಗ್ಗದಲ್ಲಿ ಇನ್ನೆರಡು ದಿನ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಿವಮೊಗ್ಗದಲ್ಲಿ ಇನ್ನೆರಡು ದಿನ ಭಾರಿ ಮಳೆ, ಬಿರುಗಾಳಿ/  ಹವಾಮಾನ ಇಲಾಖೆಯ  ಸೂಚನೆಯಲ್ಲಿ ಏನಿದೆ ಗೊತ್ತಾ?

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ವ್ಯಾಪಕ ಮಳೆಯಾಗಲಿದೆ (Rain News) ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಶಿವಮೊಗ್ಗದಲ್ಲಿ ಇವತ್ತು  ಮತ್ತು  ನಅಳೆ  ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬಾರಿ ಮಳೆ ಹಾಗೂ ಬಿರುಗಾಳಿಯ ಸೂಚನೆಯನ್ನ  ನೀಡಲಾಗಿದೆ. ಅಲ್ಲದೆ ಜಿಲ್ಲೆ ಶೇಕಡಾ ಐವತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಶಿವಮೊ್ಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ತುಂಗಾ ಜಲಾಶಯದ ಗೇಟುಗಳನ್ನ ತೆರೆಯಲಾಗಿದೆ. ಇನ್ನೂ ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 2 ಅಡಿ ನೀರು ಹರಿದಿದೆ. 

ಇನ್ನೂ ಹವಾಮಾನ ಇಲಾಖೆಯ ಪ್ರಕಾರ ಜುಲೈ 25 ವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದ್ದು, ಯಲ್ಲೋ ಅಲರ್ಟ್ ಘೋಷಣೆಯಾಗಿರುವ ದಿನದಂದು ಗಾಳಿಯವೇಗ ಗಂಟೆಗೆ  40-50 ಕಿಲೋಮೀಟರ್​ ನಷ್ಟಿರಲಿದೆ ಎಂದು ತಿಳಿಸಿದೆ. 

ಉಳಿದಂತೆ,  ಮುಂದಿನ 24 ಗಂಟೆಯಲ್ಲಿ ಬೆಳಗಾವಿ, ಬೀದರ್‌, ಕಲಬುರಗಿ, ಯಾದಗಿರಿ, ಬಳ್ಳಾರಿ, ಧಾರವಾಡ, ರಾಯಚೂರು ಸೇರಿದಂತೆ ಶಿವಮೊಗ್ಗ, ಉಡುಪಿ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ (Weather report) ಸಾಧ್ಯತೆ ಇದೆ ಎಂದು ಹವಾಮಾನ (IMD) ಇಲಾಖೆ ತಿಳಿಸಿದೆ. 

24 ಗಂಟೆಯಲ್ಲಿ 323.90 MM ಮಳೆ! ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆಯಾಗಿದೆ? ವರದಿ ಇಲ್ಲಿದೆ

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 323.90 ಮಿಮಿ ಮಳೆಯಾಗಿದ್ದು, ಸರಾಸರಿ 46.27 ಮಿಮಿ ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  395.44 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 13.30 ಮಿಮಿ., ಭದ್ರಾವತಿ 11.20 ಮಿಮಿ., ತೀರ್ಥಹಳ್ಳಿ 71.80 ಮಿಮಿ., ಸಾಗರ 86.80 ಮಿಮಿ., ಶಿಕಾರಿಪುರ 21.60 ಮಿಮಿ., ಸೊರಬ 39.40 ಮಿಮಿ. ಹಾಗೂ ಹೊಸನಗರ 79.80 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ ಗಳಲ್ಲಿ: 

ಲಿಂಗನಮಕ್ಕಿ: 1819 (ಗರಿಷ್ಠ), 1764.70 (ಇಂದಿನ ಮಟ್ಟ), 43043.00 (ಒಳಹರಿವು), 1157.30 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1797.30.  

ಭದ್ರಾ: 186 (ಗರಿಷ್ಠ), 143.00 (ಇಂದಿನ ಮಟ್ಟ), 7734.00 (ಒಳಹರಿವು), 165.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 183.23.   

ತುಂಗಾ: 588.24 (ಗರಿಷ್ಠ), 588.02 (ಇಂದಿನ ಮಟ್ಟ), 30453.00 (ಒಳಹರಿವು), 31934.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 575.96 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 4905 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 583.46 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.64 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 2509 (ಒಳಹರಿವು), 3013.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.04 (ಎಂಎಸ್‍ಎಲ್‍ಗಳಲ್ಲಿ).. 

ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 571.18 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3145.00 (ಒಳಹರಿವು), 474.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 576.35 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 578.00 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 2756.00 (ಒಳಹರಿವು), 510.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 580.46 (ಎಂಎಸ್‍ಎಲ್‍ಗಳಲ್ಲಿ).  


ಈ ಸುದ್ದಿಗಳನ್ನು ಓದಿ 

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ಶಿವಮೊಗ್ಗ ನಾಗರಿಕರ ಗಮನಕ್ಕೆ! ನಾಳೆ ಈ ಪ್ರದೇಶಗಳಲ್ಲಿ ಪವರ್ ಕಟ್!

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​