ಶಿವಮೊಗ್ಗ ರೈಲ್ವೆ ಸ್ಟೇಷನ್​ನಲ್ಲಿ 15 ವರ್ಷದ ಬಾಲಕನ ರಕ್ಷಣೆ

ಶಿವಮೊಗ್ಗ ನಗರ ರೈಲು ನಿಲ್ದಾಣದಲ್ಲಿ, ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಬಾಲಕನೊಬ್ಬನನ್ನ ರೈಲ್ವೆ ಪೊಲೀಸರು ಪತ್ತೆ ಮಾಡಿದ್ದಾರೆ

ಶಿವಮೊಗ್ಗ ರೈಲ್ವೆ ಸ್ಟೇಷನ್​ನಲ್ಲಿ 15 ವರ್ಷದ ಬಾಲಕನ ರಕ್ಷಣೆ
ಶಿವಮೊಗ್ಗ ನಗರ ರೈಲು ನಿಲ್ದಾಣದಲ್ಲಿ(SMET/Shivamogga Town (Shimoga) Railway Station), ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಬಾಲಕನೊಬ್ಬನನ್ನ ರೈಲ್ವೆ ಪೊಲೀಸರು ಪತ್ತೆ ಮಾಡಿ ಆತನನ್ನು ರಕ್ಷಿಸಿದ್ದಾರೆ. ಈ ಸಂಬಂಧ  ರೈಲ್ವೆ ಇಲಾಖೆ ತನ್ನ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದೆ. ಬಾಲಕನನ್ನು ಎಸ್​ಐ ಸಂತೋಷ್​ ಗಾಂವ್ಕರ್​ ಹಾಗೂ ಹೆಡ್​ ಕಾನ್​ಸ್ಟೇಬಲ್​ ಎಸ್​ಎನ್​ ಲಮಾಣಿ ರಕ್ಷಣೆ ಮಾಡಿದ್ದು, ಆತನ ಪೂರ್ವಪರ ವಿಚಾರಿಸಿದ್ದಾರೆ. ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಆತನನ್ನು  ಸ್ಥಳೀಯ NGO/child help line/Shivamogga ರಿಗೆ ಸುಪರ್ಧಿಗೆ ನೀಡಲಾಗಿದೆ. 
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link