ಪ್ರಧಾನಿ ಇಂದಿರಾಗಾಂಧಿಯೇ ಭೇಟಿಯಾಗಲು ಬಂದರೂ ಕುವೆಂಪು ನಿರಾಕರಿಸಿದ್ದೇಕೆ? ಬಿ.ಎಲ್​.ಶಂಕರ್​ ಹೇಳಿದ ಕವಿಮನದ ಕಥೆ !

Why did Kuvempu refuse to meet Prime Minister Indira Gandhi? The story of the poet narrated by B.L. Shankar!

ಪ್ರಧಾನಿ ಇಂದಿರಾಗಾಂಧಿಯೇ ಭೇಟಿಯಾಗಲು ಬಂದರೂ ಕುವೆಂಪು ನಿರಾಕರಿಸಿದ್ದೇಕೆ?  ಬಿ.ಎಲ್​.ಶಂಕರ್​  ಹೇಳಿದ ಕವಿಮನದ ಕಥೆ !

SHIVAMOGGA  |  Dec 29, 2023  |   ರಾಷ್ಟ್ರಕವಿ ಕುವೆಂಪುರವರ ಹುಟ್ಟೂರು ಕುಪ್ಪಳಿಯಲ್ಲಿ ವಿಶ್ವಮಾನವನ 119 ನೇ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಪಶ್ವಿಮ ಬಂಗಾಳದ ಶೀರ್ಷೇಂದು ಮುಖ್ಯೋಪಾದ್ಯಾಯರಿಗೆ ನೀಡಿ ಗೌರವಿಸಲಾಯಿತು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್., ಶಂಕರ್ ಕುವೆಂಪುರವರ ನೆನಪುಗಳನ್ನು ಆಳವಾಗಿ ಮೆಲಕು ಹಾಕಿದರು.. ಶಿಕ್ಷಣ ಸಚಿವ ಬಂಗಾರಪ್ಪ  ದೇಶಕ್ಕೆ ಆಸ್ತಿ ಎಂದರೆ ಜ್ಞಾನ ನೀಡುವುದು.ಅಂತಹ ಜ್ಞಾನ ನೀಡುವ ಖಾತೆ ನನಗೆ ಸಿಕ್ಕಿರುವುದು ಪುಣ್ಯದ ಕೆಲಸ ಎಂದು ಹೇಳಿದ್ದಾರೆ.

ಕುಪ್ಪಳಿಯ ಹೆಮಾಂಗಣದಲ್ಲಿ ಕುವೆಂಪು ಹುಟ್ಟು ಹಬ್ಬ ಆಚರಣೆ

 ರಾಷ್ಚ್ರಕವಿ ಕುವೆಂಪುರವರ 119 ನೇ ಜನ್ಮ ದಿನೋತ್ಸವವನ್ನು ಕುಪ್ಪಳಿಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್ ಶಂಕರ್, ಸಚಿವ ಮಧು ಬಂಗಾರಪ್ಪ ಸೇರಿದಂತೆ ಗಣ್ಯರು ಕವಿಶೈಲದ ಕುವೆಂಪು ರವರ ಸಮಾದಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ತೇಜಸ್ವಿಯವರ ಸಮಾದಿಗೂ ಪುಷ್ಚಾರ್ಚನೆ ಮಾಡಲಾಯಿತು. ಹೆಮಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಕುವೆಂಪುರವರ ನೆನಪುಗಳನ್ನು ಮೆಲಕು ಹಾಕಿದರು.

READ : ನಿಮ್ಮನೆಯಲ್ಲಿಯು ಹೀಗೆ ನಡೆದಿರಬಹುದು! ಮಲ್ನಾಡ್​ ಜಿಲ್ಲೆಯಲ್ಲಿ ಈ ರೀತಿ ಇದೇ ಮೊದಲು ಈ ಥರ! ‘ದನ’ ಜಾಗ್ರತೆ!

ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್  ಮಾತು

ಪ್ರತಿಷ್ಟಾನದ ಅಧ್ಯಕ್ಷನಾಗಿ ಜವಬ್ದಾರಿ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ. ವರ್ಷಕ್ಕೆ ಎರಡು ಲಕ್ಷ ಮಂದಿ ಭೇಟಿ ನೀಡುವ ಕುಪ್ಪಳ್ಳಿ ಪರಿಸರದ ನಿರ್ವಹಣೆ ದೊಡ್ದ ಜವಬ್ದಾರಿ ಅದನ್ನು  ಕಡಿದಾಳ್ ಪ್ರಕಾಶ್ ರವರು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಕುವೆಂಪುರವರಿಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅನುಯಾಯಿಗಳಿದ್ದಾರೆ ಕುವೆಂಪುರವರ ಬರಹಕ್ಕಿರುವ ಶಕ್ತಿ ಹಾಗು ಬದ್ಧತೆ ಜನರನ್ನು ಆಕರ್ಷಿಸಿದೆ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಅತ್ಯಂತ ದೃಢ ನಿಲುವನ್ನು  ತೆಗೆದುಕೊಂಡು ಗಟ್ಟಿತನ ತೋರಿದ ಅಗ್ರಮಾನ್ಯ ಸಾಹಿತಿಗಳಲ್ಲಿ ಕುವೆಂಪುರವರು ಅಗ್ರಗಣ್ಯರು

ಅಂದು ಕೆ.ಸಿ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ಕವಿತೆಯ ಮೂಲಕವೇ ಕುವೆಂಪುರವರು ಟೀಕಿಸಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಇಂತಹ ನಿಷ್ಟುರ ನಿಲುವುಗಳನ್ನು ತೆಗೆದುಕೊಂಡ ಕುವೆಂಪು ರವರಿಗೆ ಸರ್ಕಾರದಲ್ಲಿ ಬಹಳಷ್ಟು ಅವಕಾಶಗಳು ತಪ್ಪಿಹೋಗಿರಬಹುದು ಎಂದು ವಿವರಿಸಿದರು. 

ಮತ್ತೊಮ್ಮೆ ಉಪ ಕುಲಪತಿಗಳಾಗುವ ಅವಕಾಶವೂ ಅವರ ಕೈ ತಪ್ಪಿರಬಹುದು. ಕಾರಣ ಯುವರಾಜರಿಗೆ ಮನೆ ಪಾಠ ಹೇಳಲು ಬರೋದಿಲ್ಲ ಎಂದು ಹೇಳಿದ್ದಂತಿರಬಹುದು. ಶಾಲೆಯಲ್ಲಿ ಮೇಷ್ಟ್ರು ಬಂದ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಲ್ಲಬೇಕು. ಅದು ಶಿಕ್ಷಕನಿಗೆ ನೀಡುವ ಗೌರವ ಎಂದು ಧೈರ್ಯ ತೋರಿದ ಕಾರಣವಿರಬಹುದು. ಸರ್ಕಾರ ಕೊಡಬಹುದಾದ ಅವಕಾಶಗಳು ತಪ್ಪಿದ್ದರೂ ರಾಜ್ಯದಲ್ಲಿ ಜನರು ಅವರಿಗೆ ಹೃದಯದಲ್ಲಿ ಅವಕಾಶ ನೀಡಿದ್ದಾರೆ ಎಂದು ವಿವರಿಸಿದರು. 

ದಿವಂಗತ ಜೆ.ಹೆಚ್ ಪಟೇಲರು ಕುವೆಂಪುರವರ ಹೆಸರಿನಲ್ಲಿ ಬಯೋ ರಿಸರ್ವ್ ಫಾರೆಸ್ಟ್ ಮಾಡಲು ಅವಕಾಶ ನೀಡಿದ್ದರು. ತೇಜಸ್ವಿಯರ ಅಭಿಪ್ರಾಯವನ್ನು ಪಟೇಲರ ಮುಂದೆ ಇಟ್ಟಂತ ಸಂದರ್ಭದಲ್ಲಿ  ಒಂದು ಕ್ಷಣವೂ ಯೋಚಿಸದೆ ಯೋಜನೆಗೆ ಅವಕಾಶ ನೀಡಿದ್ರು. ಅದರಿಂದ ರೈತಾಪಿ ವರ್ಗದವರಿಗೆ ತೊಂದರೆಯಾಗಿರಬಹುದು. ನಾನು ಅವರ ಕ್ಷಮೆ ಯಾಚಿಸುತ್ತೇನೆ ಎಂದು ಬಿ.ಎಲ್.ಶಂಕರ್ ಹೇಳಿದ್ದಾರೆ. ಬೆಂಗಳೂರಿನ ಎಂ. ಚಂದ್ರಶೇಖರ್ ಹಾಗು ಸರೋಜ ಚಂದ್ರಶೇಖರ್ ರವರು ರಾಷ್ಟ್ರೀಯ ಪ್ರಶಸ್ತಿ ಮೊತ್ತ ಐದು ಲಕ್ಷ ರೂಪಾಯಿ ಪ್ರತಿ ವರ್ಷ ನೀಡುತ್ತಿದ್ದಾರೆ. ಅವರಿಗೆ ಪ್ರತಿಷ್ಠಾನಕ್ಕೆ ಅಭಾರಿಯಾಗಿದೆ ಎಂದು ಹೇಳಿದರು



ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಸೇರಿದಂತೆ ಹಲವು ನಾಯಕರ ಬಂಧನವಾಗುತ್ತದೆ. ಈ ಸಂದರ್ಭದಲ್ಲಿ ರಾಜ್ಯಕ್ಕೆ ಬಂದಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ಕುವೆಂಪುರವರನ್ನ  ಭೇಟಿ ಮಾಡಲು ಬಯಸಿದ್ರು, ಕುವೆಂಪುವರು ಅದಕ್ಕೆ ಒಪ್ಪಲಿಲ್ಲ. ಅಂದಿನ ಮುಖ್ಯಮಂತ್ರಿಯಾಗಿದ್ದ ಗುಂಡುರಾವ್ ಸೇರಿದಂತೆ ಹಲವು ಮಂತ್ರಿಗಳು ಈ ನಿಟ್ಟಿನಲ್ಲಿ ಹಲವು ಸಲ ಯತ್ನಿಸಿದರೂ ಕುವೆಂಪುರರವರ ಭೇಟಿ ಇಂದಿರಾಗಾಂಧಿಯವರಿಗೆ ಸಾಧ್ಯವಾಗಲಿಲ್ಲ.

ಅಂದು, ಜಯಪ್ರಕಾಶ್ ನಾರಾಯಣ್​ರವರನ್ನು ಬಂಧಿಸಿದವರನ್ನು ನಾನು ಭೇಟಿಯಾಗಿ ಮಾತನಾಡುವುದಿಲ್ಲ ಎಂದು ನಿಷ್ಟುರವಾಗಿ ರಾಷ್ಟ್ರದ ಪ್ರಧಾನಿ ಭೇಟಿಗೆ ಅವಕಾಶ ನೀಡಿರಲಿಲ್ಲ ಎಂದು ಶಂಕರ್ ಹಳೆ ನೆನಪುಗಳನ್ನು ಮೆಲಕು ಹಾಕಿದ್ರು. 

ಬಾಲಗಂಗಾಧರನಾಥ್ ಶ್ರೀಗಳು ಮನೆಗೆ ಬರುತ್ತೇನೆ ಎಂದು ಹೇಳಿದ ಸಂದರ್ಭದಲ್ಲಿ ಸಾಮಾನ್ಯರಂತೆ ಮನೆ ಬಂದು ಹೋಗಬಹುದು  ಆದರೆ ಸ್ವಾಮೀಜಿಗೆ ಸಲ್ಲಿಸುವ ವಿಶೇಷ ಗೌರವ ಮಾನ್ಯತೆಯನ್ನು ಪಾದಪೂಜೆಯನ್ನು ಮಾಡುವುದಿಲ್ಲ ಎಂದು ನೇರವಾಗಿ ಹೇಳುವ ಶಕ್ತಿ ಇದ್ದಿದ್ದರೆ ಅದು ಕುವೆಂಪುರವರಿಗೆ ಮಾತ್ರ ಎಂದು ಶಂಕರ್ ಹೇಳಿದ್ದಾರೆ,.ಕುವೆಂಪುರವರು ಇವತ್ತಿನ ದಿನಮಾನಗಳಲ್ಲಿ ಅತ್ಯಂತ ಪ್ರಸ್ತುತರಾಗುತ್ತಾರೆ ಎಂದು ಹೇಳಿದರು.

ಶೀರ್ಷೇಂದು ಮುಖ್ಯೋಪಾದ್ಯಾಯರಿಗೆ ಪ್ರಶಸ್ತಿ ಪುರಸ್ಕಾರ

ಈ ಬಾರಿ ರಾಷ್ಟ್ರಕವಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ಬಂಗಾಳಿ ಸಾಹಿತಿ ಶೀರ್ಷೇಂದು ಮುಖ್ಯೋಪಾದ್ಯಾಯರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿಯ ಮೊತ್ತ ಐದು ಲಕ್ಷ ಚೆಕ್. ಹಾಗು ಪಲಕವನ್ನು ಒಳಗೊಂಡಿದೆ ಇದು ಹನ್ನೊಂದನೇ ವರ್ಷದ ಪ್ರಶಸ್ತಿಯಾಗಿದೆ. ಸಚಿವ ಮಧು ಬಂಗಾರಪ್ಪ, ಕಡಿದಾಳ್ ಪ್ರಕಾಶ್ ಬಿ.ಎಲ್ ಶಂಕರ್ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಶೀರ್ಷೇಂದು ಮುಖ್ಯೋಪಾದ್ಯಾಯರಿಗೆ ಕುವೆಂಪುರವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಹೆಮ್ಮೆಯಾಗಿದೆ. ರಾಷ್ಟ್ರಕವಿ ಹೆಸರಿನಲ್ಲಿ ದೇಶದ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವ ಪ್ರತಿಷ್ಟಾನದ ಕೆಲಸ ಶ್ಲಾಘನೀಯ ಎಂದು ಹೇಳಿದರು. ಕುವೆಂಪುರವರ ಸಾಹಿತ್ಯದ ಬರಹಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಚಿವ ಮಧು ಬಂಗಾರಪ್ಪ

ಹಿರಿಯ ಸಾಹಿತಿಗಳಿರುವ ವೇದಿಕೆಯಲ್ಲಿ ನಾನು ಗಂಭೀರವಾಗಿ ಮಾತನಾಡುವಷ್ಟು ಶಕ್ತನಲ್ಲ. ಸಿದ್ದರಾಮಯ್ಯ ನವರು ನನಗೆ ಶಾಲೆಗೆ ಸೇರಿಸಿದ್ದಾರೆ. ಹೀಗಾಗಿ ನಾನು ಹೆಚ್ಚು ಮಾತನಾಡಲಾರೆ ಎಂದು ಹಾಸ್ಯ ಮಾಡುತ್ತಲೆ ಭಾಷಣ ಆರಂಭಿಸಿದರು. ತಂದೆ ಬಂಗಾರಪ್ಪನವರು ಕುವೆಂಪುರವರ ಒಡನಾಟವನ್ನು ಮಧು ಬಂಗಾರಪ್ಪ ನೆನೆದರು. 

ಕುವೆಂಪುರವರು ಹೇಗೆ ನಿಷ್ಟುರವಾದಿಗಳಾಗಿದ್ದರೋ..ಅದೇ ರೀತಿ ಬಂಗಾರಪ್ಪನವರು ಸಹ ನೇರ ನಿಷ್ಠುರವಾದಿಯಾದಂತಹ  ರಾಜಕೀಯ ವ್ಯಕ್ತಿಯಾಗಿದ್ದರು. ತಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾಕ್ಟರ್ ರಾಜ್ ಕುಮಾರ್ ರವರಿಗೆ ಹಾಗು ಕುವೆಂಪುರವರಿಗೆ ನೀಡಲಾಗಿರುತ್ತೆ. 

ರಾಜ್ ಕುಮಾರ್ ರವನರಿಗೆ ವಿಧಾನಸೌದದ ಮುಂದೆ ಕಾರ್ಯಕ್ರಮ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗಿರುತ್ತೆ. ಆದರೆ ಅನಾರೋಗ್ಯದ ಕಾರಣ ಕುವೆಂಪುರವರು ಹಾಜರಾಗಿರಲಿಲ್ಲ. ಕಾರ್ಯಕ್ರಮದ ನಂತರ ಬಂಗಾರಪ್ಪ ಅವರು ಅಂದು ವೈಯಕ್ತಿಕವಾಗಿ ಮೈಸೂರಿಗ ಮನೆಗೆ ಭೇಟಿ ನೀಡಿ ಪ್ರಶಸ್ತಿ ನೀಡಿ ಗೌರವಿಸಿದ್ರು. 

ಕುವೆಂಪುರವರ ಸಾಹಿತ್ಯ ಬರಹಗಳಿಂದ ತಂದೆಯವರು ಪ್ರೇರಣೆಯಾಗಿದ್ರು ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ  ಪ್ರಶಸ್ತಿ ಸ್ವೀಕರಿಸಿದ ಶೀರ್ಷೇಂದು ಮುಖ್ಯೋಪಾದ್ಯಾಯರಿಗೆ ಮಧು ಬಂಗಾರಪ್ಪ ಅಭಿನಂದನೆ ಸಲ್ಲಿಸಿದರು. 

ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾತನಾಡಿ, ಕುಪ್ಪಳ್ಳಿಗೆ ಈ ವರ್ಷ ಎರಡು ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರತಿದಿನ 600 ಮಂದಿ ಭೇಟಿ ನೀಡುವ ಕವಿ ಸ್ಥಳ ದೇಶದಲ್ಲಿದ್ದರೇ ಅದು ಕುಪ್ಪಳ್ಳಿ ಮಾತ್ರ ಅನಿಸುತ್ತದೆ. ಶಾಂತಿ ನಿಕೇತನಕ್ಕೂ ಕೂಡ ಇಷ್ಟೊಂದು ಪ್ರವಾಸಿಗರು ಭೇಟಿ ನೀಡಲಾರರು. ಅತ್ಯಂತ ಹೆಚ್ಚು ಪುಸ್ತಕಗಳು ಇಲ್ಲಿ ಮಾರಾಟವಾಗಿದೆ. ಕುವೆಂಪು ಪ್ರತಿಷ್ಠಾನ ಹಾಗು ಪರಿಸರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರತಿಷ್ಠಾನದಿಂದ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.



ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕುವೆಂಪು ರವರ ಹೆಸರನ್ನು ಎಲ್ಲಾ ರಾಜಕಾರಣಿಗಳು ಮೆಲಕು ಹಾಕುತ್ತಾರೆ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಇಡಬೇಕೆಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬಂದಿತ್ತು. ಆದರೆ ಯಡಿಯೂರಪ್ಪನವರು ಅದನ್ನು ನಯವಾಗಿ ತಳ್ಳಿ ಹಾಕಿದ್ರು. 



ಕುವೆಂಪುರಂತ ಶ್ರೇಷ್ಟ ಕವಿ ನಾಡಿನಲ್ಲಿ ಹುಟ್ಟಿರುವ ನಾವು ಪುಣ್ಯವಂತರು. ಅವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಅವರೇ ಪ್ರಸ್ತಾವನೆ ಮಾಡಿದ್ರು. ಕುವೆಂಪುರವರ ಹೆಸರು ಹೇಳಿದ್ರೆ ಯಾವ ರಾಜಕಾರಣಿಯೂ ಮಾತನಾಡದಿರುವಷ್ಟು ಶ್ರೇಷ್ಟತೆಯನ್ನು ಕುವೆಂಪು ಹೊಂದಿದ್ದರು. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾಕ್ಟರ್ ಧರಣಿ ದೇವಿ ಮಾಲಗತ್ತಿಯವರು ಐಪಿಎಸ್ ಅಧಿಕಾರಿಯಾದ್ರೂ, ಕುವೆಂಪುರವರ ಹಳೆ ಗನ್ನಡದ ಸಾಹಿತ್ಯವನ್ನೇ ಮೆಲಕು ಹಾಕಿ ನೆರದವರನ್ನ ನಿಬ್ಬೆರಗಾಗಿಸಿದರು.